More

  ಕೋಟಿ..ಕೋಟಿಗಳ ಒಡತಿ ರಾಧಿಕಾ ಕುಮಾರಸ್ವಾಮಿ: 36ರ ಸ್ವೀಟಿ ಬಳಿ ಇರುವ ಆಸ್ತಿ ಎಷ್ಟು ನೋಡಿ..

  ಬೆಂಗಳೂರು : ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಕೋಟಿ ಆಸ್ತಿಯನ್ನು ಹೊಂದಿದ್ದಾರೆ. ಸಿನಿಮಾ ಮತ್ತು ವೈಯಕ್ತಿಕ ಜೀವನದ ಕುರಿತಾಗಿ ಸುದ್ದಿಯಲ್ಲಿರುವ ನಟಿ ರಾಧಿಕಾ ಕುಮಾರಸ್ವಾಮಿ. ಇದೀಗ ಈ ನಟಿ ಬಳಿ ಇರುವ ಆಸ್ತಿ ಕುರಿತಾದ ಸುದ್ದಿಯೊಂದು ವೈರಲ್‌ ಆಗಿದೆ.

  ರಾಧಿಕಾ ಹದಿನಾಲ್ಕನೇ ವಯಸ್ಸಿನಲ್ಲಿ ರತನ್ ಕುಮಾರ್ ಎಂಬುವವರ ಜತೆ ಕಟೀಲಿನ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಬಾಲ್ಯ ವಿವಾಹವಾಯಿತು. ಇವರು 2002 ಆಗಸ್ಟ್ ನಲ್ಲಿ ಹೃದಯಾಘಾತದಿಂದ ನಿಧನರಾದ್ರು ಎನ್ನಲಾಗಿದೆ. ನಂತರ ಸನಿಮಾ ಇಂಡಸ್ಟ್ರೀಗೆ ಎಂಟ್ರಿ ಕೊಡಲಾಯ್ತು. ರಾಧಿಕಾ ಸಿನಿಮಾಗೆ ಎಂಟ್ರಿ ಕೊಟ್ಟ ವೇಳೆ 9ನೇ ತರಗತಿ ಓದುತ್ತಿದ್ದರಂತೆ ಆಗ ಆಕೆಗೆ ಕೇವಲ 14 ವರ್ಷ ವಯಸ್ಸಾಗಿತ್ತು. ನಂತ್ರ ಸಾಕಷ್ಟು ಹಿಟ್‌ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

  ಸಾಮಾನ್ಯ ಹುಡುಗಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಾಧಿಕಾ ಕುಮಾರಸ್ವಾಮಿ ಇದೀಗ ಕೋಟ್ಯಂತರ ರೂಪಾಯಿಗಳ ಒಡತಿಯಾಗಿ ಬೆಳೆದಿದ್ದಾರೆ. ಮಗಳು ಶಮಿಕಾ ಜೊತೆ ಮಂಗಳೂರಿನಲ್ಲಿ ನೆಲೆಸಿರುವ ರಾಧಿಕಾ ಕುಮಾರಸ್ವಾಮಿ 124 ಕೋಟಿಯ ಒಡತಿಯಾಗಿದ್ದಾರೆ ಎಂದು ನ್ಯಾಷನಲ್ ಮಾಧ್ಯಮ ವರದಿ ಮಾಡಿದೆ. ಈ ಬಗ್ಗೆ ನಟಿ ರಾಧಿಕಾ ಯಾವುದೇ ಅಧಿಕೃತ ಮಾಹಿತಿ ಇಲ್ಲ.

  ಮದುವೆ ವಿವಾದದ ಬಳಿಕ ಕೆಲ ಕಾಲ ರಾಧಿಕಾ ಬ್ರೇಕ್ ತೆಗೆದುಕೊಂಡ್ರು. 2012 ರಲ್ಲಿ ತಮ್ಮ ಮೊದಲ ಕನ್ನಡ ಚಿತ್ರ ‘ಲಕ್ಕಿ’ ನಿರ್ಮಿಸಿದರು. 2013 ರಲ್ಲಿ ತೆರೆಕಂಡ `ಸ್ವೀಟಿ’ ಚಿತ್ರದಿಂದ ನಟಿಯಾಗಿ ಕಮ್ ಬ್ಯಾಕ್ ಮಾಡಿದರು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts