ನಟಿ ರಾಧಿಕಾ ಕುಮಾರಸ್ವಾಮಿಗೆ ಪಿತೃ ವಿಯೋಗ; ಅನಾರೋಗ್ಯ ಪೀಡಿತ ತಂದೆ ದೇವರಾಜ್‌ ನಿಧನ

ಬೆಂಗಳೂರು: ನಟಿ ರಾಧಿಕಾ ಕುಮಾರಸ್ವಾಮಿ ಅವರ ತಂದೆ ದೇವರಾಜ್ ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ಕಿಡ್ನಿ ಸಮಸ್ಯೆ ಹಾಗು ಜ್ವರದಿಂದ ಬಳಲುತ್ತಿದ್ದ ರಾಧಿಕಾ ತಂದೆಯನ್ನು ನಿನ್ನೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆ ಬೆಂಗಳೂರಿನ ಎನ್ ಯು ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ರಾದಿಕಾ ತಂದೆ ದೇವರಾಜ್ ಮೃತಪಟ್ಟಿದ್ದಾರೆ.

ಮೃತದೇಹವನ್ನು ಮಂಗಳೂರಿಗೆ ತೆಗೆದುಕೊಂಡು ಹೋಗಿದ್ದು, ಅಲ್ಲಿಯೇ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಲಾಗಿದೆ.

ಕಳೆದ 4 ದಿನಗಳಿಂದ ಮಂಗಳೂರಿನ ಸೋಲೆತ್ತೂರು ಗ್ರಾಮದಲ್ಲಿ ನೇಮ, ಕೋಲ ಸಂಭ್ರಮದಲ್ಲಿ ರಾಧಿಕಾರ ಇಡೀ ಕುಟುಂಬ ಭಾಗಿಯಾಗಿತ್ತು.

ಸಂಭ್ರಮದ ಬಳಿಕ ಕಫ ಹೆಚ್ಚಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. (ದಿಗ್ವಿಜಯ ನ್ಯೂಸ್)

2 Replies to “ನಟಿ ರಾಧಿಕಾ ಕುಮಾರಸ್ವಾಮಿಗೆ ಪಿತೃ ವಿಯೋಗ; ಅನಾರೋಗ್ಯ ಪೀಡಿತ ತಂದೆ ದೇವರಾಜ್‌ ನಿಧನ”

  1. ಕುಮಾರಸ್ವಾಮಿಗೆ ಟೆನ್ಷನ್ ನಡುವೆವೊನ್ನಷ್ಟು ಟೆನಿಸನ್

Leave a Reply

Your email address will not be published. Required fields are marked *