ಅಕ್ಷರಾ ಪಾತ್ರದಲ್ಲಿ ರಚನಾ; ನಿಹಾರ್​ಗೆ ಜೋಡಿಯಾದ “ಲವ್​ ಮಾಕ್ಟೇಲ್​’, “ಲವ್​ 360′ ಖ್ಯಾತಿಯ ನಟಿ

blank

ವಿಜಯವಾಣಿ ಸುದ್ದಿಜಾಲ ಬೆಂಗಳೂರು

“ಹೊಂದಿಸಿ ಬರೆಯಿರಿ’ ಚಿತ್ರದ ಬಳಿಕ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್​ ಆ್ಯಕ್ಷನ್​&ಕಟ್​ ಹೇಳುತ್ತಿರುವ ಸಿನಿಮಾ “ತೀರ್ಥರೂಪ ತಂದೆಯವರಿಗೆ’. ಕನ್ನಡ ಮತ್ತು ತೆಲುಗಿನಲ್ಲಿ ಈ ಸಿನಿಮಾ ಮೂಡಿಬರುತ್ತಿದ್ದು, ಟಾಲಿವುಡ್​ನಲ್ಲಿ “ಪ್ರಿಯಮೈನ ನಾನ್ನಕು’ ಎಂದು ಶೀರ್ಷಿಕೆ ಇಡಲಾಗಿದೆ. ವರಮಹಾಲಕ್ಷಿ$್ಮ ಹಬ್ಬದಂದು ಸಿನಿಮಾ ಸೆಟ್ಟೇರಿದ್ದು, ಸದ್ಯ ಮೂರು ಶೆಡ್ಯೂಲ್​ ಶೂಟಿಂಗ್​ ಪೂರ್ಣಗೊಳಿಸಿ, ನಾಲ್ಕನೇ ಹಂತದ ಚಿತ್ರೀಕರಣ ಪ್ರಾರಂಭಿಸಲು ಸಿದ್ಧತೆ ನಡೆಯುತ್ತಿದೆ. ತೆಲುಗಿನ “ಗುಪ್ಪೆಡಂತ ಮನಸು’ ಧಾರಾವಾಹಿ ಮತ್ತು “ಗೀತಾ ಶಂಕರ್​’ ಸಿನಿಮಾದಲ್ಲಿ ನಟಿಸಿರುವ ನಿಹಾರ್​ ಮುಖೇಶ್​ ಈ ಚಿತ್ರದ ಮೂಲಕ ನಾಯಕನಾಗಿ ಕನ್ನಡದಲ್ಲಿ ಡೆಬ್ಯೂ ಮಾಡುತ್ತಿದ್ದಾರೆ. ಆದರೆ, ಚಿತ್ರತಂಡ ಇದುವರೆಗೂ ನಾಯಕಿ ಯಾರು ಎಂಬುದರ ಬಗ್ಗೆ ಮಾಹಿತಿ ನೀಡಿರಲಿಲ್ಲ. ಇದೀಗ ನಾಯಕಿಯಾಗಿ “ಲವ್​ ಮಾಕ್ಟೇಲ್​’, “ಲವ್​ 360′ ಖ್ಯಾತಿಯ ರಚನಾ ಇಂದರ್​ ಆಯ್ಕೆಯಾಗಿದ್ದು, ಪೋಸ್ಟರ್​ ಮೂಲಕ ಚಿತ್ರತಂಡ ಘೋಷಣೆ ಮಾಡಿದೆ.

ಅಕ್ಷರಾ ಪಾತ್ರದಲ್ಲಿ ರಚನಾ; ನಿಹಾರ್​ಗೆ ಜೋಡಿಯಾದ "ಲವ್​ ಮಾಕ್ಟೇಲ್​', "ಲವ್​ 360' ಖ್ಯಾತಿಯ ನಟಿ

ಜೂನ್​ನಲ್ಲಿ ಸಿನಿಮಾ ತೆರೆಗೆ
“ತೀರ್ಥರೂಪ ತಂದೆಯವರಿಗೆ’ ಚಿತ್ರದ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ಜಗನ್ನಾಥ್​, “ಈಗಾಗಲೇ ಮೂರು ಹಂತಗಳಲ್ಲಿ ಶೇಕಡಾ 60ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಸಂಕ್ರಾಂತಿ ಹಬ್ಬದ ನಂತರ ನಾಲ್ಕನೇ ಶೆಡ್ಯೂಲ್​ ಪ್ರಾರಂಭಿಸಿ, ಮೂಡಿಗೆರೆ, ಉತ್ತರಭಾರತದ ಹಿಮಾಚಲ ಪ್ರದೇಶ ಮತ್ತು ಗುವಾಹಟಿಯಲ್ಲಿ ಶೂಟಿಂಗ್​ ನಡೆಸಲಿದ್ದೇವೆ. ಶ್ರೀಮಂತ ಕುಟುಂಬದ ತುಂಟಾಟದ ಮುದ್ದು ಅಪ್ಸರಾಳ ಪಾತ್ರಕ್ಕೆ ರಚನಾ ಇಂದರ್​ ಸೂಕ್ತ ಅಂತನ್ನಿಸಿ, ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಂಡೆವು’ ಎಂದು ಮಾಹಿತಿ ನೀಡುತ್ತಾರೆ. ನಿಹಾರ್​, ರಚನಾ ಜತೆ ರಾಜೇಶ್​ ನಟರಂಗ, ಸಿತಾರಾ, ಗಿರೀಶ್​ ಶಿವಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಅಕ್ಷರಾ ಪಾತ್ರದಲ್ಲಿ ರಚನಾ; ನಿಹಾರ್​ಗೆ ಜೋಡಿಯಾದ "ಲವ್​ ಮಾಕ್ಟೇಲ್​', "ಲವ್​ 360' ಖ್ಯಾತಿಯ ನಟಿ

ಫೀಲ್​ಗುಡ್​ ಸಿನಿಮಾ:
“ಅಕ್ಷರಾ’ ಪಾತ್ರದ ಬಗ್ಗೆ ನಾಯಕಿ ರಚನಾ, “ಅಪ್ಪನ ಆಸೆ ಈಡೇರಿಸಲು ಮುಂದಾಗುವ ಹುಡುಗಿಗೆ ಏನೆಲ್ಲ ಸವಾಲುಗಳು ಎದುರಾಗುತ್ತವೆ? ಎಂಬುದು ನನ್ನ ಟ್ರಾ$್ಯಕ್​ನಲ್ಲಿ ಸಾಗುತ್ತದೆ. ಕಥೆ, ನನ್ನ ಪಾತ್ರ ತುಂಬ ಚೆನ್ನಾಗಿದೆ. ಕೌಟುಂಬಿಕ, ಭಾವನಾತ್ಮಕ ಅಂಶಗಳು ಚಿತ್ರದಲ್ಲಿವೆ. ಒಂದು ಫೀಲ್​ ಗುಡ್​ ಸಿನಿಮಾ. ನನ್ನ ಭಾಗದ ಒಂದು ಶೆಡ್ಯೂಲ್​ ಚಿತ್ರೀಕರಣ ಮುಗಿದಿದೆ. ಇನ್ನೆರಡು ಹಂತದ ಶೂಟಿಂಗ್​ ನಡೆಯಬೇಕಿದೆ’ ಎಂದು ಹೇಳಿಕೊಳ್ಳುತ್ತಾರೆ. “ತೀರ್ಥರೂಪ ತಂದೆಯವರಿಗೆ’ ಜತೆಗೆ ರಚನಾ “ನಾನು ಮತ್ತು ಗುಂಡ 2′ ಮತ್ತು “ೈರ್​್ಲೆ$’ ಚಿತ್ರಗಳಲ್ಲೂ ನಟಿಸುತ್ತಿದ್ದಾರೆ.

ಅಕ್ಷರಾ ಪಾತ್ರದಲ್ಲಿ ರಚನಾ; ನಿಹಾರ್​ಗೆ ಜೋಡಿಯಾದ "ಲವ್​ ಮಾಕ್ಟೇಲ್​', "ಲವ್​ 360' ಖ್ಯಾತಿಯ ನಟಿ

Share This Article

ಈ ಆರೋಗ್ಯ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ತುಪ್ಪವನ್ನು ತಿನ್ನಲೇ ಬಾರದು ಗೊತ್ತಾ? ghee benefits and risks

ಬೆಂಗಳೂರು: ( ghee benefits and risks) ಹಾಲಿನ ಉತ್ಪನ್ನಗಳು ಆರೋಗ್ಯಕ್ಕೆ ಒಳ್ಳೆಯದು.  ತುಪ್ಪ ಹಲವು…

ಬಿಸಿಲಿನ ವಾತಾವರಣದಲ್ಲಿ ನಿಮ್ಮ ಕಾರಿನೊಳಗೆ ತಂಪಾಗಿರಲು ಬಯಸುವಿರಾ? ಈ ಟ್ರಿಕ್ ಟ್ರೈ ಮಾಡಿ.. Summer Car Tips

ಬೆಂಗಳೂರು: (Summer Car Tips ) ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಿಸಿಲಿಇಂದ ರಕ್ಷಣೆ ಪಡೆಯಲು…

ಹಠಾತ್ತನೆ ಮದ್ಯಪಾನ ತ್ಯಜಿಸುವುದರಿಂದ ಸಾಯ್ತಾರಾ? ಆಲ್ಕೋಹಾಲ್​ ಬಿಡುವುದಾದ್ರೂ ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ… | Alcohol

Alcohol: ಮದ್ಯಪಾನದಿಂದ ಉಂಟಾಗುವ ಸಾವುಗಳ ಕುರಿತು ಬ್ರಿಟನ್​ನ ರಾಷ್ಟ್ರೀಯ ಅಂಕಿ ಅಂಶಗಳ ಕಚೇರಿ(ONS) ಅಘತಕಾರಿ ಅಂಕಿ…