ಬೆಂಗಳೂರು: ಇಂದು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಗ್ರಾಹಕರು ಹಾಗೂ ರಿಯಾಲ್ಟಿ ಕಂಪನಿಗಳ ನಡುವೆ ಸೇತುವೆಯಾಗಿ ವಿಜಯವಾಣಿ, ದಿಗ್ವಿಜಯ 24×7 ನ್ಯೂಸ್ ಸಹಯೋಗದಲ್ಲಿ ಆಯೋಜಿಸಿರುವ ‘ರಿಯಲ್ ಎಸ್ಟೇಟ್ ಎಕ್ಸ್ಪೋ’ಗೆ ಅದ್ಧೂರಿ ಚಾಲನೆ ದೊರೆತಿದೆ. ಶಾಸಕ ಉದಯ್ ಗರುಡಾಚಾರ್ ಅವರು ‘ರಿಯಲ್ ಎಸ್ಟೇಟ್ ಎಕ್ಸ್ಪೋ’ಗೆ ಚಾಲನೆ ನೀಡಿದರು. ಇನ್ನು, ಮುಖ್ಯ ಅತಿಥಿಗಳಾಗಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ನಟಿ ಪ್ರಿಯಾಂಕಾ ತಿಮ್ಮೇಶ್, ವಿಆರ್ಎಲ್ ಸಮೂಹ ಸಂಸ್ಥೆಗಳ ಎಂಡಿ ಆನಂದ ಸಂಕೇಶ್ವರ ಭಾಗಿಯಾಗಿದರು.
ಈ ‘ರಿಯಲ್ ಎಸ್ಟೇಟ್ ಎಕ್ಸ್ಪೋ’ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದ್ದು, 50 ಕ್ಕೂ ಅಧಿಕ ರಿಯಲ್ ಎಸ್ಟೇಟ್ ಕಂಪನಿಗಳು ಎಕ್ಸ್ಪೋದಲ್ಲಿ ಭಾಗಿಯಾಗಲಿವೆ. ಹೌದು, ಜನಸಾಮಾನ್ಯರಿಗೆ ಸಿಲಿಕಾನ್ ಸಿಟಿಯ ಸುತ್ತಮುತ್ತಲಿನ ನಿವೇಶನ, ವಿಲ್ಲಾ, ಅಪಾರ್ಟ್ಮೆಂಟ್ ಖರೀದಿಗೆ ಇದು ಒಂದು ಸುವರ್ಣಾವಕಾಶವಾಗಿದೆ. ಕೈಗೆಟುಕುವ ದರದಲ್ಲಿ ನಿವೇಶನಗಳು ಲಭ್ಯವಾಗಲಿದ್ದು, ಜತೆಗೆ ಸ್ಪಾಟ್ ಬುಕ್ಕಿಂಗ್ ಮಾಡಿದವರಿಗೆ ಆಕರ್ಷಕ ರಿಯಾಯಿತಿ, ಕೊಡುಗೆ ಸಹ ಸಿಗಲಿದೆ.
Contents
ಬೆಂಗಳೂರು: ಇಂದು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಗ್ರಾಹಕರು ಹಾಗೂ ರಿಯಾಲ್ಟಿ ಕಂಪನಿಗಳ ನಡುವೆ ಸೇತುವೆಯಾಗಿ ವಿಜಯವಾಣಿ, ದಿಗ್ವಿಜಯ 24×7 ನ್ಯೂಸ್ ಸಹಯೋಗದಲ್ಲಿ ಆಯೋಜಿಸಿರುವ ‘ರಿಯಲ್ ಎಸ್ಟೇಟ್ ಎಕ್ಸ್ಪೋ’ಗೆ ಅದ್ಧೂರಿ ಚಾಲನೆ ದೊರೆತಿದೆ. ಶಾಸಕ ಉದಯ್ ಗರುಡಾಚಾರ್ ಅವರು ‘ರಿಯಲ್ ಎಸ್ಟೇಟ್ ಎಕ್ಸ್ಪೋ’ಗೆ ಚಾಲನೆ ನೀಡಿದರು. ಇನ್ನು, ಮುಖ್ಯ ಅತಿಥಿಗಳಾಗಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ನಟಿ ಪ್ರಿಯಾಂಕಾ ತಿಮ್ಮೇಶ್, ವಿಆರ್ಎಲ್ ಸಮೂಹ ಸಂಸ್ಥೆಗಳ ಎಂಡಿ ಆನಂದ ಸಂಕೇಶ್ವರ ಭಾಗಿಯಾಗಿದರು.ಈ ‘ರಿಯಲ್ ಎಸ್ಟೇಟ್ ಎಕ್ಸ್ಪೋ’ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದ್ದು, 50 ಕ್ಕೂ ಅಧಿಕ ರಿಯಲ್ ಎಸ್ಟೇಟ್ ಕಂಪನಿಗಳು ಎಕ್ಸ್ಪೋದಲ್ಲಿ ಭಾಗಿಯಾಗಲಿವೆ. ಹೌದು, ಜನಸಾಮಾನ್ಯರಿಗೆ ಸಿಲಿಕಾನ್ ಸಿಟಿಯ ಸುತ್ತಮುತ್ತಲಿನ ನಿವೇಶನ, ವಿಲ್ಲಾ, ಅಪಾರ್ಟ್ಮೆಂಟ್ ಖರೀದಿಗೆ ಇದು ಒಂದು ಸುವರ್ಣಾವಕಾಶವಾಗಿದೆ. ಕೈಗೆಟುಕುವ ದರದಲ್ಲಿ ನಿವೇಶನಗಳು ಲಭ್ಯವಾಗಲಿದ್ದು, ಜತೆಗೆ ಸ್ಪಾಟ್ ಬುಕ್ಕಿಂಗ್ ಮಾಡಿದವರಿಗೆ ಆಕರ್ಷಕ ರಿಯಾಯಿತಿ, ಕೊಡುಗೆ ಸಹ ಸಿಗಲಿದೆ. ಇನ್ನು, ಎಕ್ಸ್ಪೋದಲ್ಲಿ ಭಾಗಿಯಾದ ಸ್ಯಾಂಡಲ್ವುಡ್ ನಟಿ ಪ್ರಿಯಾಂಕಾ ತಿಮ್ಮೇಶ್ ಅವರು, ”ಒಂದೇ ಸ್ಥಳದಲ್ಲಿ ಇಂತಹ ಸುವರ್ಣಾವಕಾಶ ಸಿಗೋಲ್ಲ. ಆದರೆ, ನನಗೆ ಈ ಅವಕಾಶ ಸಿಕ್ತು. ಇಷ್ಟೊಂದು ರಿಯಲ್ ಎಸ್ಟೇಟ್ ಸಂಸ್ಥೆಗಳಿರೋದು ನನಗೆ ಈಗ ತಿಳಿಯಿತು. ನಾನು ನನ್ನ ಅಮ್ಮನ ಹತ್ರ ಡಿಸ್ಕಸ್ ಮಾಡ್ತಿನಿ, ನನ್ನ ಸ್ನೇಹಿತರಿಗೂ ಈ ವಿಚಾರವನ್ನು ತಿಳಿಸುತ್ತೀನಿ. ಇನ್ನು, ಕಳೆದ ೧೧ ವರ್ಷಗಳಿಂದ ಈ ‘ರಿಯಲ್ ಎಸ್ಟೇಟ್ ಎಕ್ಸ್ಪೋ’ ನಡೆದುಕೊಂಡು ಬರ್ತಿದೆ ಎಂಬುದು ನಿಜಕ್ಕೂ ಗ್ರೇಟ್. ಈ ಕಾರ್ಯಕ್ರಮ ಬಿಗ್ ಸಕ್ಸಸ್ ಹಾಗೂ ಜನ ಇದಕ್ಕೆ ಅದ್ಭುತವಾಗಿ ರೆಸ್ಪಾನ್ಸ್ ಮಾಡ್ತಿದ್ದಾರೆ ಎಂಬುದು ನನಗೆ ತಿಳಿದುಬಂದಿದೆ”, ಎಂದಿದ್ದಾರೆ.ಹಾಗೆಯೇ, ತಮ್ಮ ಮಾತನ್ನು ಮುಂದುವರಿಸಿದ ನಟಿ ಪ್ರಿಯಾಂಕಾ ತಿಮ್ಮೇಶ್ ತಮ್ಮ ಕನಸಿನ ಮನೆ ಹೇಗಿರಬೇಕು ಎಂಬ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಹಾಗಾದರೆ, ನಟಿ ಪ್ರಿಯಾಂಕಾ ಅವರ ಕನಸ್ಸಿನ ಮನೆ ಹೇಗಿರಬೇಕಂತೆ ಗೊತ್ತಾ?. ”ನನ್ನ ಮನೆ ನಿರ್ಮಾಣ ಮಾಡುವ ಸ್ಥಳ ಒಂದು ೬೦/೪೦ ಸೈಟ್ ಆಗಿರಬೇಕು. ನಾನೊಂದು ದೊಡ್ಡ ಮನೆ ಕಟ್ಟಬೇಕು. ಅದಕ್ಕೆ, ದೊಡ್ಡ ಪಾರ್ಕಿಂಗ್ ಲಾಟ್ ಇರಬೇಕು. ನನ್ನ ಮನೆಯಲ್ಲಿ ೪ ರೂಮ್ಗಳು ಇರಬೇಕು. ಇನ್ನು, ಎರಡು ಬಾಲ್ಕನಿಗಳು ಇರಬೇಕು. ಇವೆಲ್ಲದರ ಜತೆಗೆ, ನನ್ನ ಕನಸಿನ ಮನೆಯಲ್ಲೊಂದು ಗಾರ್ಡನ್ ಇರಬೇಕು”, ಎಂದು ಹೇಳಿಕೊಂಡಿದ್ದಾರೆ.
ಇನ್ನು, ಎಕ್ಸ್ಪೋದಲ್ಲಿ ಭಾಗಿಯಾದ ಸ್ಯಾಂಡಲ್ವುಡ್ ನಟಿ ಪ್ರಿಯಾಂಕಾ ತಿಮ್ಮೇಶ್ ಅವರು, ”ಒಂದೇ ಸ್ಥಳದಲ್ಲಿ ಇಂತಹ ಸುವರ್ಣಾವಕಾಶ ಸಿಗೋಲ್ಲ. ಆದರೆ, ನನಗೆ ಈ ಅವಕಾಶ ಸಿಕ್ತು. ಇಷ್ಟೊಂದು ರಿಯಲ್ ಎಸ್ಟೇಟ್ ಸಂಸ್ಥೆಗಳಿರೋದು ನನಗೆ ಈಗ ತಿಳಿಯಿತು. ನಾನು ನನ್ನ ಅಮ್ಮನ ಹತ್ರ ಡಿಸ್ಕಸ್ ಮಾಡ್ತಿನಿ, ನನ್ನ ಸ್ನೇಹಿತರಿಗೂ ಈ ವಿಚಾರವನ್ನು ತಿಳಿಸುತ್ತೀನಿ. ಇನ್ನು, ಕಳೆದ ೧೧ ವರ್ಷಗಳಿಂದ ಈ ‘ರಿಯಲ್ ಎಸ್ಟೇಟ್ ಎಕ್ಸ್ಪೋ’ ನಡೆದುಕೊಂಡು ಬರ್ತಿದೆ ಎಂಬುದು ನಿಜಕ್ಕೂ ಗ್ರೇಟ್. ಈ ಕಾರ್ಯಕ್ರಮ ಬಿಗ್ ಸಕ್ಸಸ್ ಹಾಗೂ ಜನ ಇದಕ್ಕೆ ಅದ್ಭುತವಾಗಿ ರೆಸ್ಪಾನ್ಸ್ ಮಾಡ್ತಿದ್ದಾರೆ ಎಂಬುದು ನನಗೆ ತಿಳಿದುಬಂದಿದೆ”, ಎಂದಿದ್ದಾರೆ.
ಹಾಗೆಯೇ, ತಮ್ಮ ಮಾತನ್ನು ಮುಂದುವರಿಸಿದ ನಟಿ ಪ್ರಿಯಾಂಕಾ ತಿಮ್ಮೇಶ್ ತಮ್ಮ ಕನಸಿನ ಮನೆ ಹೇಗಿರಬೇಕು ಎಂಬ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಹಾಗಾದರೆ, ನಟಿ ಪ್ರಿಯಾಂಕಾ ಅವರ ಕನಸ್ಸಿನ ಮನೆ ಹೇಗಿರಬೇಕಂತೆ ಗೊತ್ತಾ?. ”ನನ್ನ ಮನೆ ನಿರ್ಮಾಣ ಮಾಡುವ ಸ್ಥಳ ಒಂದು ೬೦/೪೦ ಸೈಟ್ ಆಗಿರಬೇಕು. ನಾನೊಂದು ದೊಡ್ಡ ಮನೆ ಕಟ್ಟಬೇಕು. ಅದಕ್ಕೆ, ದೊಡ್ಡ ಪಾರ್ಕಿಂಗ್ ಲಾಟ್ ಇರಬೇಕು. ನನ್ನ ಮನೆಯಲ್ಲಿ ೪ ರೂಮ್ಗಳು ಇರಬೇಕು. ಇನ್ನು, ಎರಡು ಬಾಲ್ಕನಿಗಳು ಇರಬೇಕು. ಇವೆಲ್ಲದರ ಜತೆಗೆ, ನನ್ನ ಕನಸಿನ ಮನೆಯಲ್ಲೊಂದು ಗಾರ್ಡನ್ ಇರಬೇಕು”, ಎಂದು ಹೇಳಿಕೊಂಡಿದ್ದಾರೆ.
ಚಿತ್ರಮಂದಿರಗಳ ಮಾಲೀಕರಿಂದಲೂ ತಿರಸ್ಕರಿಸಲ್ಪಟ್ಟ RGV ಸಿನಿಮಾ! ‘ಡೇಂಜರಸ್’ಗೆ ನೋ ರಿಲೀಸ್; ಕಾರಣ?
ಕೇವಲ ಆರು ದಿನಗಳಲ್ಲಿ ಪುನೀತ್ ರಾಜ್ಕುಮಾರ್ ‘ಜೇಮ್ಸ್’ ಸಿನಿಮಾ ಒಟಿಟಿಯಲ್ಲಿ