ಬೆಂಗಳೂರು: ಇದೇ ತಿಂಗಳಾಂತ್ಯಕ್ಕೆ ಬಹುಭಾಷಾ ನಟಿ ಪ್ರಿಯಾಮಣಿ ಹಸೆಮಣೆ ಏರಲಿದ್ದಾರೆ. ಪ್ರಿಯಾಮಣಿ ನಿಶ್ಚಿತಾರ್ಥದ ಬಳಿಕ ಮದುವೆ ಯಾವಾಗ ಆಗ್ತಾರೆ ಅನ್ನೋ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.
ನಟಿ ಪ್ರಿಯಾಮಣಿ ವಿವಾಹದ ಡೇಟ್ ಫಿಕ್ಸ್ ಆಗಿದ್ದು ಆಗಸ್ಟ್ 23ಕ್ಕೆ ಉದ್ಯಮಿ ಮುಸ್ತಫಾ ರಾಜ್ ಜತೆ ಸಪ್ತಪದಿ ತುಳಿಯಲ್ಲಿದ್ದಾರೆ. ಆದರೆ ಬೇರೆ ತಾರೆಯರಂತೆ ಅದ್ಧೂರಿಯಾಗಿ ವಿವಾಹವಾಗದೇ ಸಿಂಪಲ್ ಆಗಿ ರಿಜಿಸ್ಟರ್ ಮ್ಯಾರೇಜ್ ಮದುವೆ ಆಗಲು ತೀರ್ಮಾನಿಸಿದ್ದಾರೆ.
ಆಗಸ್ಟ್24ಕ್ಕೆ ಬೆಂಗಳೂರಿನ ಪಂಚತಾರಾ ಹೋಟೆಲ್ನಲ್ಲಿ ತಮ್ಮ ಆಪ್ತರಿಗಷ್ಟೇ ರಿಸಪ್ಷನ್ ಇಟ್ಕೊಂಡಿದ್ದಾರಂತೆ. ಕಳೆದ ವರ್ಷ ಮೇ ನಲ್ಲಿ ಪ್ರಿಯಾಮಣಿ ಹಾಗೂ ಉದ್ಯಮಿ ಮುಸ್ತಫಾ ರಾಜ್ ನಿಶ್ಚಿತಾರ್ಥ ಮಾಡಿಕೊಂಡಿದ್ರು. ವಿವಾಹ ಯಾವಾಗ ಎಂದು ಹೇಳಿರಲಿಲ್ಲ. ಆದರೀಗ ಆದ್ರೀಗ ಪ್ರಿಯಾಮಣಿ ತಮ್ಮ ಅಭಿಮಾನಿಗಳಿಗೆ ದಿಢೀರ್ ಸರ್ಪ್ರೈಸ್ ಕೊಟ್ಟಿದ್ದಾರೆ. (ದಿಗ್ವಿಜಯ ನ್ಯೂಸ್)
ActressAugustEngagementmarriageMustafa RajPriyamani