ಲಂಡನ್: ಚಂದನವನದ ಮಳೆ ಹುಡುಗಿ ಎಂದೇ ಖ್ಯಾತಿ ಪಡೆದಿರುವ ನಟಿ ಪೂಜಾ ಗಾಂಧಿ ( Pooja Gandhi ) ಮತ್ತು ಅವರು ಪತಿ ವಿಜಯ ಘೋರ್ಪಡೆ ಅವರು ವಿವಾಹದ ಬಳಿಕ ಲಂಡನ್‌ನಲ್ಲಿ ಶ್ರೀ ಬಸವೇಶ್ವರನ ಆಶೀರ್ವಾದವನ್ನು ಪಡೆದರು. ಬ್ರಿಟಿಷ್ ಇಂಡಿಯನ್ ಮತ್ತು ಕನ್ನಡ ಸಮುದಾಯದ ಸದಸ್ಯರು ಕೂಡ ಈ ಸಂದರ್ಭದಲ್ಲಿ ಸಾಥ್ ನೀಡಿದರು.
ಈ ವಿಶೇಷ ಕಾರ್ಯಕ್ರಮವನ್ನು ಲಾಂಬೆತ್ ಬಸವೇಶ್ವರ ಫೌಂಡೇಶನ್ ಮತ್ತು ಯುಕೆ ಮೂಲದ ಬಸವ ಸಮಿತಿ ಸಂಯುಕ್ತವಾಗಿ ಆಯೋಜಿಸಿತ್ತು. ಈ ಸಂದರ್ಭದಲ್ಲಿ ಯುಕೆ ಕನ್ನಡದ ಪ್ರಮುಖ ಸಂಸ್ಥೆಗಳಾದ ಕನ್ನಡ ಬಳಗ ಮತ್ತು ಕನ್ನಡಿಗರು ಯುಕೆ ಸಂಸ್ಥೆಗಳಿಂದಲೂ ಮಹತ್ವದ ಸಹಭಾಗಿತ್ವವಿತ್ತು.
ಲಾಂಬೆತ್‌ನ ಮಾಜಿ ಮೇಯರ್ ಡಾ. ನೀರಜ್ ಪಾಟೀಲ್, ಕನ್ನಡಿಗರು ಯುಕೆ ಅಧ್ಯಕ್ಷರಾದ ಶ್ರೀ ಗಣಪತಿ ಭಟ್, ಜೊತೆಗೆ ಯುಕೆ ಮೂಲದ ಬಸವ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀ ಅಭಿಜಿತ್ ಸಲೀಮತ್, ಶ್ರೀ ಮಿರ್ಗಿ ರಂಗನಾಥ್ ಮತ್ತು ಶ್ರೀ ಶರಣ್ ಭೇಮಳ್ಳಿ ಈ ಕಾರ್ಯಕ್ರಮಕ್ಕೆ ನೆರವಾದರು.
ಈ ಕಾರ್ಯಕ್ರಮದ ವೇಳೆ ಪೂಜಾ ಗಾಂಧಿ ಅವರು ಶ್ರೀ ಬಸವೇಶ್ವರನಿಗೆ ತಮ್ಮ ನಮನವನ್ನು ಸಲ್ಲಿಸಿದರು ಮತ್ತು 12ನೇ ಶತಮಾನದಲ್ಲಿ ಬಸವಣ್ಣನವರು ಮಾನವ ಹಕ್ಕುಗಳು, ಲಿಂಗ ಸಮಾನತೆ ಮತ್ತು ಜಾತಿ ಭೇದದ ವಿರುದ್ಧ ನಡೆಸಿದ ಹೋರಾಟವನ್ನು ಹೊಗಳಿದರು. ಬಸವಣ್ಣನನ್ನು ತೀವ್ರವಾಗಿ ಮೆಚ್ಚುವ ಪೂಜಾ ಗಾಂಧಿ ಅವರು ಬಸವಣ್ಣನ ಬೋಧನೆಗಳನ್ನು ತಮ್ಮ ಜೀವನದ ಪ್ರಮುಖ ಅಂಶವೆಂದು ಪರಿಗಣಿಸಿದ್ದಾರೆ.
ಇತಿಹಾಸ ಪ್ರಸಿದ್ಧ ಬಸವೇಶ್ವರನ ಪ್ರತಿಮೆ, 2015ರ ನವೆಂಬರ್ 14ರಂದು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಲಂಡನ್‌ನಲ್ಲಿ ಅನಾವರಣಗೊಂಡಿತ್ತು. ಇದು ಯುಕೆ ಶಿಲ್ಪ ಪ್ರತಿಮೆಗಳ ಕಾಯ್ದೆಯ 1854ರ ನಿಯಮಗಳಡಿ ಬ್ರಿಟಿಷ್ ಕ್ಯಾಬಿನೆಟ್‌ನಿಂದ ಮಾನ್ಯತೆ ಪಡೆದ ಕೆಲವು ಮೌಲಿಕ ಶಿಲ್ಪಗಳಲ್ಲಿ ಒಂದಾಗಿದೆ. 2023ರ ಮಾರ್ಚ್ 5ರಂದು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಬಸವೇಶ್ವರನ ಪ್ರತಿಮೆಗೆ ಗೌರವ ನಮನ ಸಲ್ಲಿಸಿದ್ದರು.
ಮರ ಕಡಿಯುವಾಗ 1000 ವರ್ಷ ಹಳೆಯ ಶಿವಲಿಂಗ ಪತ್ತೆ! ಪೂಜೆ ಸಲ್ಲಿಸಲು ಹರಿದುಬರುತ್ತಿದೆ ಗ್ರಾಮಸ್ಥರ ದಂಡು | Shivalinga