“ಜಸ್ಸೀ ಜೈಸಿ ಕೋಯಿ ನಹೀ’ ಧಾರಾವಾಹಿ ಸೇರಿ ಹಲವು ಸೀರಿಯಲ್ಗಳು ಹಾಗೂ ರಿಯಾಲಿಟಿ ಶೋಗಳಲ್ಲಿ ಮಿಂಚಿರುವ “3 ಈಡಿಯಟ್ಸ್’, “ಲಾಲ್ ಸಿಂಗ್ ಛಡ್ಡಾ’ “ಮುಂಜ್ಯಾ’ ಜತೆ ಕೆಲ ಸಿನಿಮಾಗಳಲ್ಲೂ ನಟಿಸಿರುವ ಖ್ಯಾತಿ ನಟಿ ಮೋನಾ ಸಿಂಗ್ಗೆ ಸಲ್ಲುತ್ತದೆ. ಇಂತಹ ಮೋನಾ ಕೇವಲ ಆರು ತಿಂಗಳಲ್ಲಿ 15 ಕೆಜಿ ಕಡಿಮೆ ಮಾಡಿಕೊಂಡು ಹೊಸ ಲುಕ್ ಪಡೆದಿದ್ದಾರೆ.
ಏಕಾಯೇಕಿ ಈ ರೀತಿ ಡಯಟ್ ಮತ್ತು ಫಿಟ್ನೆಸ್ ಬಗ್ಗೆ ಕಾಳಜಿವಹಿಸಿದ ಬಗ್ಗೆ, “”ಪಾನ್ ಪರ್ದಾ ಸರ್ದಾ’ ಎಂಬ ಚಿತ್ರದಲ್ಲಿ ನಟಿಸಲು ಅವಕಾಶ ದೊರೆಯಿತು. ನಿರ್ದೇಶಕರು ತೂಕ ಕಡಿಮೆ ಮಾಡಿಕೊಳ್ಳಲು ಹೇಳಿದರು. ಪ್ರತಿ ವರ್ಷ ಹೊಸ ವರ್ಷದಲ್ಲಿ ತೂಕ ಇಳಿಸಿಕೊಳ್ಳಲು ನಿರ್ಧರಿಸುತ್ತಿದ್ದರೂ, ನಾನು ಹೆಚ್ಚು ಗಮನ ಹರಿಸಿರಲಿಲ್ಲ. ನನ್ನ ಯೋಗ ಟೀಚರ್ ಒಪ್ಪೊತ್ತುಂಡವ ಯೋಗಿ, ಎರಡೊತ್ತುಂಡವ ಭೋಗಿ, ಮೂರೊತ್ತುಂಡವ ರೋಗಿ ಅಂತ ಹೇಳುತ್ತಿದ್ದರು. ನನಗೆ ರೋಗಿಯಾಗಲು ಇಷ್ಟವಿರಲಿಲ್ಲ. ಹೀಗಾಗಿ ಈ ಬಾರಿ ಗಂಭೀರವಾಗಿ ತೆಗೆದುಕೊಂಡು ಡಯಟ್, ಫಿಟ್ನೆಸ್ಗೆ ಒತ್ತು ನೀಡಿದೆ. ಒಮ್ಮೆ ದೈಹಿಕವಾಗಿ ಬದಲಾವಣೆಗಳು ಪ್ರಾರಂಭವಾದಾಗ, ವಾವ್ ಅನ್ನಿಸಿತು. ಅದನ್ನೇ ಮುಂದುವರಿಸಿದೆ. ಈಗ ನಾನು ನನ್ನಿಷ್ಟದ ಡ್ರೆಸ್ ಧರಿಸುತ್ತೇನೆ’ ಎಂದು ಸಂತಸದಿಂದ ಹೇಳಿಕೊಳ್ಳುತ್ತಾರೆ 42 ವರ್ಷದ ಮೋನಾ.
ಸದ್ಯ ಅವರು “ಪಾನ್ ಪರ್ದಾ ಸರ್ದಾ’ ಜತೆ “ಹ್ಯಾಪಿ ಪಟೇಲ್ ಖತರ್ನಾಕ್ ಜಾಸೂಸ್’ ಚಿತ್ರಗಳಲ್ಲಿ ಬಿಜಿಯಿದ್ದಾರೆ. &ಏಜೆನ್ಸೀಸ್