ಧ್ಯಾನ, ಧಾನ್ಯಗಳ ದಸರಾ ; ನವರಾತ್ರಿಯಂದು ದೇವಿಯರ ಧ್ಯಾನಿಸುವ ನಟಿ ಮೇಘನಾ ಗಾಂವ್ಕರ್​

blank

ವಿಜಯವಾಣಿ ಸುದ್ದಿಜಾಲ ಬೆಂಗಳೂರು

“ಚಾರ್​ಮಿನಾರ್​’, “ಸಿಂಪಲ್ಲಾಗ್​ ಇನ್ನೊಂದ್​ ಲವ್​ಸ್ಟೋರಿ’, “ಶುಭಮಂಗಳ’, “ದ ಜಡ್ಜ್​ಮೆಂಟ್​’ ಸೇರಿ ಹಲವು ಚಿತ್ರಗಳಲ್ಲಿ ನಟಿಸಿರುವ ಖ್ಯಾತಿ ಮೇಘನಾ ಗಾಂವ್ಕರ್​ಗೆ ಸಲ್ಲುತ್ತದೆ. ಸದ್ಯ ದಸರಾ ಹಬ್ಬದ ಸಂಭ್ರಮದಲ್ಲಿರುವ ಅವರು ಕಳೆದ ನಾಲ್ಕು ವರ್ಷಗಳಿಂದ ವಿಭಿನ್ನ ರೀತಿಯಲ್ಲಿ ನವರಾತ್ರಿ ಆಚರಿಸುತ್ತಿದ್ದಾರೆ. ಈ ಬಗ್ಗೆ ವಿಜಯವಾಣಿ ಜತೆ ಮಾತನಾಡುವ ಮೇಘನಾ ಗಾಂವ್ಕರ್​, “2020ರ ಕರೊನಾ ಸಮಯದಲ್ಲಿ ನನಗೆ ಆಧ್ಯಾತ್ಮದ ಬಗ್ಗೆ ಹೆಚ್ಚು ಒಲವು ಮೂಡಿತು. ಹೀಗಾಗಿ ಕಳೆದ ನಾಲ್ಕು ವರ್ಷಗಳಿಂದ ನಾನು ಒಂಬತ್ತು ದಿನಗಳ ಕಾಲ ಒಂಬತ್ತು ದೇವಿಯರ ಬಗ್ಗೆ ಧ್ಯಾನ ಮಾಡುವ ಮೂಲಕ ದಸರಾ ಆಚರಿಸುತ್ತೇನೆ’ ಎಂದು ಮಾಹಿತಿ ನೀಡುತ್ತಾರೆ.

ಧ್ಯಾನ, ಧಾನ್ಯಗಳ ದಸರಾ ; ನವರಾತ್ರಿಯಂದು ದೇವಿಯರ ಧ್ಯಾನಿಸುವ ನಟಿ ಮೇಘನಾ ಗಾಂವ್ಕರ್​

ಸರಳ, ಆಧ್ಯಾತ್ಮಿಕ ಆಚರಣೆ
ಮೊದಲೆಲ್ಲಾ ನಟಿ ಮೇಘನಾ ಗಾಂವ್ಕರ್​ ಕೂಡ ಪ್ರತಿ ವರ್ಷ ನವರಾತ್ರಿ ಸಂದರ್ಭದಲ್ಲಿ ಆಯಾ ದಿನಕ್ಕೆ ತಕ್ಕಂತೆ ಬಣ್ಣದ ಸೀರೆ ಧರಿಸುತ್ತಿದ್ದರಂತೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಚಿತ್ರರಂಗದಲ್ಲಿ ಬಿಜಿಯಾದ ಕಾರಣ ಮತ್ತು ಆಧ್ಯಾತ್ಮದತ್ತ ಒಲವು ಹೆಚ್ಚಿದ ಕಾರಣ ಹಾಗೆ ಮಾಡುತ್ತಿಲ್ಲ ಎನ್ನುತ್ತಾರೆ. “ನಮ್ಮ ಮನೆಯ ದೇವರು ದುರ್ಗಿ. ಅಪ್ಪ ಮಹಾರಾಷ್ಟ್ರ ಮೂಲದವರು, ಅಮ್ಮ ಗುಲರ್ಬಗಾದವರು. ಮಹಾರಾಷ್ಟ್ರದಲ್ಲಿ ಅಜ್ಜಿಯ ಮನೆಯಲ್ಲಿ ಹೇಗೆ ನವರಾತ್ರಿ ಆಚರಿಸುತ್ತಿದ್ದರೋ, ಅದೇ ರೀತಿ ಅಮ್ಮ ಈಗಲೂ ಆಚರಿಸುತ್ತಾ ಬಂದಿದ್ದಾರೆ. ಮಣ್ಣು ತಂದು ಅದಕ್ಕೆ ಧಾನ್ಯಗಳನ್ನು ಹಾಕಿ, ಒಂಬತ್ತು ದಿನಗಳ ಕಾಲ ಪೂಜೆ ಮಾಡುತ್ತಾರೆ. ನಂತರ ಹತ್ತನೇ ದಿನ ಮೊಳಕೆಯೊಡೆದ ಧಾನ್ಯ ಮತ್ತು ಮಣ್ಣನ್ನು ಗಣೇಶನನ್ನು ವಿಸರ್ಜನೆ ಮಾಡುವಂತೆಯೇ, ನೀರಿನಲ್ಲಿ ವಿಸರ್ಜಿಸುತ್ತೇವೆ. ಆ ಹತ್ತೂ ದಿನಗಳ ಕಾಲ ಅಮ್ಮ ಮಂಚದ ಮೇಲೆ ಮಲಗುವುದಿಲ್ಲ. ನೆಲದ ಮೇಲೆ ಹಾಸಿಗೆ ಹಾಸಿಕೊಂಡು ಮಲಗುತ್ತಾರೆ. ಹೀಗೆ ಮನೆಯಲ್ಲಿ ಅಮ್ಮ ಸರಳವಾಗಿ ನಾನು ಆಧ್ಯಾತ್ಮಿಕವಾಗಿ ದಸರಾ ಆಚರಿಸುತ್ತೇವೆ. ಹಬ್ಬದ ದಿನ ಸಂಬಂಧಿಕರು, ಸ್ನೇಹಿತರನ್ನು ಮನೆಗೆ ಕರೆದು, ಎಲ್ಲರೂ ಒಟ್ಟಿಗೆ ಹಬ್ಬದೂಟ ಸಂಭ್ರಮಿಸುತ್ತೇವೆ’ ಎಂದು ಮಾಹಿತಿ ನೀಡುತ್ತಾರೆ.

ಧ್ಯಾನ, ಧಾನ್ಯಗಳ ದಸರಾ ; ನವರಾತ್ರಿಯಂದು ದೇವಿಯರ ಧ್ಯಾನಿಸುವ ನಟಿ ಮೇಘನಾ ಗಾಂವ್ಕರ್​

ಪಿಎಚ್​ಡಿಯಲ್ಲಿ ಬಿಜಿ
ಮೇಘನಾ ಗಾಂವ್ಕರ್​ ನಟಿಸಿರುವ “ಛೂ ಮಂತರ್​’ ಸಿನಿಮಾ ಸದ್ಯ ರಿಲೀಸ್​ಗೆ ರೆಡಿಯಿದೆ. ಕೆಲ ಕಥೆಗಳನ್ನೂ ಕೇಳಿರುವ ಅವರು ಸದ್ಯ ಪಿಎಚ್​ಡಿ ಥೀಸೀಸ್​ನಲ್ಲಿ ಬಿಜಿಯಿರುವ ಕಾರಣ ಯಾವ ಸಿನಿಮಾ ಕೂಡ ಒಪ್ಪಿಕೊಂಡಿಲ್ಲ. “ಮುಂಬೈ ವಿಶ್ವವಿದ್ಯಾಲಯದಲ್ಲಿ ಪಿಎಎಚ್​ಡಿ ಮಾಡುತ್ತಿದ್ದೇನೆ. ಸಿನಿಮಾ ಮತ್ತು ಸಾಹಿತ್ಯ ವಿಷಯದಲ್ಲಿ ಕಾದಂಬರಿ ಆಧಾರಿತ ಚಿತ್ರಗಳ ಬಗ್ಗೆ ಥೀಸೀಸ್​ ಮಾಡಿದ್ದೇನೆ. ಸೋಮವಾರ ಮುಂಬೈಗೆ ತೆರಳಿ ಥೀಸೀಸ್​ ಸಲ್ಲಿಸಲಿದ್ದೇನೆ. ಇಷ್ಟರಲ್ಲಾಗಲೇ ನನ್ನ ಪಿಎಚ್​ಡಿ ಮುಗಿಯಬೇಕಿತ್ತು. ಕರೊನಾ ಕಾರಣದಿಂದಾಗಿ ಐದು ವರ್ಷಗಳಾಯಿತು. ಮುಂಬೈ ವಿಶ್ವವಿದ್ಯಾಲಯದ ಇಂಗ್ಲೀಷ್​ ವಿಭಾಗದ ಎಚ್​ಒಡಿ ಡಾ. ಶಿವಾಜಿ ಸರ್ಗರ್​ ಅವರ ಮಾರ್ಗದರ್ಶನ ನೀಡುತ್ತಿದ್ದಾರೆ. ಆರು ಹಾಲಿವುಡ್​ ಸಿನಿಮಾಗಳ ಜತೆಗೆ ಕನ್ನಡದ ಪುಟ್ಟಣ್ಣ ಕಣಗಾಲ್​ ಸರ್​ ಸೇರಿ ಎಲ್ಲ ಭಾರತದ ಪ್ರಾದೇಶಿಕ ಭಾಷೆಗಳ ಕಾದಂಬರಿ ಆಧಾರಿತ ಚಿತ್ರಗಳನ್ನೂ ಉಲ್ಲೇಖಿಸಿದ್ದೇನೆ. ಥೀಸೀಸ್​ ಸಲ್ಲಿಸಿದ ಎರಡು ಮೂರು ತಿಂಗಳಲ್ಲಿ ವೈವಾ ಇರಲಿದೆ. ನಂತರ ಡಾಕ್ಟರೇಟ್​ ಪದವಿ ಸಿಗಲಿದೆ’ ಎಂದು ಸಂತಸ ಹಂಚಿಕೊಳ್ಳುತ್ತಾರೆ ಮೇಘನಾ.

Share This Article

ನಿಮ್ಮನೆ ಮುದ್ದಿನ ನಾಯಿ ನಿಮ್ಮ ಮುಖವನ್ನು ನೆಕ್ಕುತ್ತದೆಯೇ? ಇರಲಿ ಎಚ್ಚರ.. Dog Licking Human Face

Dog Licking Human Face: ಆಧುನಿಕ ಜೀವನದಲ್ಲಿ ಹೆಚ್ಚಿನ ಜನರು ತಮ್ಮ ಮನೆಯಲ್ಲಿ ನಾಯಿಮರಿಗಳನ್ನು ಮನೆ…

ತಾಮ್ರದ ಉಂಗುರ ಧರಿಸುವುದು ಒಳ್ಳೆಯದಾ? ಕೆಟ್ಟದ್ದಾ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ… Copper Ring

Copper Ring : ಅನೇಕ ಜನರು ಬೆರಳುಗಳಿಗೆ ಉಂಗುರಗಳನ್ನು ಧರಿಸುತ್ತಾರೆ. ಕೆಲವರಿಗೆ ಇದು ಫ್ಯಾಶನ್​ ಆಗಿದ್ದಾರೆ,…

145 ಕೆಜಿ ತೂಕ, ಶೇ. 55ರಷ್ಟು ಕೊಬ್ಬು… ಈತನ ತೂಕ ಇಳಿಕೆಯ ಪ್ರಯಾಣವೇ ಎಲ್ಲರಿಗೂ ಸ್ಫೂರ್ತಿ! Weight loss

Weight loss : ತೂಕ ಇಳಿಸಿಕೊಳ್ಳುವುದೆಂದರೆ ಸುಲಭದ ಮಾತಲ್ಲ. ಅದಕ್ಕಾಗಿ ದೃಢಸಂಕಲ್ಪ ಬೇಕು ಮತ್ತು ಇಷ್ಟದ…