ಮುಂಬೈ: ನಟಿ ದೀಪಿಕಾ ಪಡುಕೋಣೆ ಹೊಸ ವರ್ಷದ ಶುಭಾಶಯ ಕೋರಿ ತಮ್ಮ ಬಾಲ್ಯದ ಅಪರೂಪದ ಚಿತ್ರವೊಂದನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಬಾಲ್ಯದಲ್ಲಿ ಮೀಸೆ ಅಂಟಿಸಿಕೊಂಡಿರುವ ಚಿತ್ರವನ್ನು ಅವರು ಅಪ್ಲೋಡ್ ಮಾಡಿದ್ದಾರೆ. ನೀವು ಯಾವಾಗಲೂ ಚಿಂತನೆ ಮತ್ತು ಕ್ರಿಯೆಯ ಸ್ಪಷ್ಟತೆಯನ್ನು ಹೊಂದಿರಿ. 2020 ಸಂತೋಷ ತರಲಿ ಎಂದು ಶೀರ್ಷಿಕೆ ಬರೆದಿದ್ದಾರೆ.
ದೀಪಿಕಾ ಪಡುಕೋಣೆ ಅವರ ಅಪರೂಪದ ಚಿತ್ರ ಸಾಮಾಜಿಕ ಜಾಲ ತಾಣದಲ್ಲಿ ಅಪ್ಲೋಡ್ ಆಗುತ್ತಿದ್ದಂತೆ 5 ಲಕ್ಷ 66 ಸಾವಿರ ಮಂದಿ ಫೋಟೋವನ್ನು ಲೈಕ್ ಮಾಡಿದ್ದಾರೆ.
ಅಭಿಮಾನಿಯೊಬ್ಬರು ಎಂತಹ ಮೋಹನಾಂಗಿ ಎಂದು ಹೊಗಳಿದ್ದಾರೆ. ಇನ್ನೊಬ್ಬರು “ಯಾವಾಗಲೂ ಸುಂದರವಾಗಿರುವ ದೀಪಿಕಾ ಪಡುಕೋಣೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು ನೀವು ಪತಿ ರಣವೀರ್ ಸಿಂಗ್ಗಿಂತ ಉತ್ತಮವಾದ ಮೀಸೆ ಹೊಂದಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)