More

    ಕೊನೆಗೂ ಸತ್ಯನಿಗೆ ಸಿಕ್ಕಿದ್ಲು ಡಿಯರ್

    ಬೆಂಗಳೂರು:  ಕೊನೆಗೂ ಡಿಯರ್ ಸತ್ಯನ ಹುಡುಕಾಟ ಅಂತ್ಯವಾಗಿದ್ದು, ಸ್ಥಗಿತಗೊಳಿಸಲಾಗಿದ್ದ ಚಿತ್ರೀಕರಣಕ್ಕೆ ಮತ್ತೆ ಚಾಲನೆ ಸಿಕ್ಕಿದೆ. ಏಕೆಂದರೆ ಬಹಳ ಅರಸುವಿಕೆ ಬಳಿಕ ಸತ್ಯನಿಗೆ ಡಿಯರ್ ಸಿಕ್ಕಿದ್ದಾಳೆ.

    ಅರ್ಥಾತ್ ’ಡಿಯರ್ ಸತ್ಯ’ ಚಿತ್ರಕ್ಕೆ ನಾಯಕಿಯಾಗಿ ನಟಿ ಅರ್ಚನಾ ಕೊಟ್ಟಿಗೆ ಆಯ್ಕೆ ಆಗಿದ್ದಾರೆ. ಈ ಹಿಂದೆ ‘ಜಿಗರ್ ಥಂಡ’ ಚಿತ್ರವನ್ನು ನಿರ್ದೇಶಿಸಿರುವ ಶಿವಗಣೇಶ್ ಆಕ್ಷನ್-ಕಟ್ ಹೇಳುತ್ತಿರುವ ‘ಡಿಯರ್ ಸತ್ಯ’ ಚಿತ್ರದಲ್ಲಿ ನಾಯಕನಾಗಿ ಬಿಗ್​ಬಾಸ್ ಸ್ಪರ್ಧಿ ಆರ್ಯನ್ ಸಂತೋಷ್ ನಟಿಸುತ್ತಿದ್ದಾರೆ.

    ಆರ್ಯನ್ ಈ ಚಿತ್ರಕ್ಕೆಂದೇ ಇಮೇಜ್ ಮೇಕ್​ಓವರ್ ಮಾಡಿಕೊಂಡಿದ್ದು, ಅದಾಗಲೇ ಅರ್ಧದಷ್ಟು ಶೂಟಿಂಗ್ ಕೂಡ ಮುಗಿಸಿದ್ದರು. ಆದರೆ ನಾಯಕಿಯ ಪಾತ್ರಕ್ಕೆ ಸೂಕ್ತ ಕಲಾವಿದೆ ಸಿಗದ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ ಶೂಟಿಂಗ್ ನಿಲ್ಲಿಸಿದ್ದ ಚಿತ್ರತಂಡ, ಹೀರೋಯಿನ್​ಗಾಗಿ ಹುಡುಕಾಟ ಆರಂಭಿಸಿತ್ತು.

    ಇತ್ತೀಚೆಗಷ್ಟೇ ನಾಯಕಿ ಆಗಿ ಅರ್ಚನಾ ಕೊಟ್ಟಿಗೆ ಅವರನ್ನು ಆಯ್ಕೆ ಮಾಡಿಕೊಂಡಿದೆ. ಎಸ್. ರಘುನಂದನ್ ನಿರ್ದೇಶನದ ಸಾಹಸಪ್ರಧಾನ ಸಿನಿಮಾ ‘ಅರಣ್ಯಕಾಂಡ’ ಮೂಲಕ ಸ್ಯಾಂಡಲ್​ವುಡ್​ಗೆ ನಾಯಕಿ ಆಗಿ ಪ್ರವೇಶಿಸಿದ್ದ ಅರ್ಚನಾ, ಸತ್ಯನಿಗೆ ಡಿಯರ್ ಆಗಿ ಓಕೆ ಆಗಿದ್ದಾರೆ. ಈಗಾಗಲೇ ಶೂಟಿಂಗ್​ನಲ್ಲಿಯೂ ಪಾಲ್ಗೊಂಡಿರುವ ಅವರು ಮೂರು ದಿನಗಳ ಚಿತ್ರೀಕರಣವನ್ನೂ ಪೂರ್ಣಗೊಳಿಸಿದ್ದಾರೆ. ಕೆಲವು ನೈಜ ಘಟನೆಗಳಿಂದ ಪ್ರೇರಣೆಗೊಂಡಿರುವ ಈ ಸಿನಿಮಾದಲ್ಲಿ ಸೇಡಿನ ಕುರಿತ ಕಥೆ ಇದೆ ಎನ್ನಲಾಗುತ್ತಿದೆ.

    ಚಿತ್ರದಲ್ಲಿ ಹೀರೋ ಮಾಸ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ 22 ದಿನಗಳ ಶೂಟಿಂಗ್ ಬಾಕಿ ಇದ್ದು, ಚಿತ್ರೀಕರಣ ಭರದಿಂದ ಸಾಗುತ್ತಿದೆ. ಮಂಗಳವಾರ ಹಾಡಿನ ದೃಶ್ಯಗಳ ಚಿತ್ರೀಕರಣ ನಡೆದಿದ್ದು, ಚಿತ್ರಕ್ಕೆ ಶ್ರೀಧರ್ ಸಂಭ್ರಮ್ ಅವರ ಸಂಗೀತ ಸಂಯೋಜನೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts