ಮುಂಬೈ: ಬಹುತೇಕ ಕ್ರಿಕೆಟ್ ಆಟಗಾರರು ಚಿತ್ರರಂಗದವರಿಗೆ ಚಿರಪರಿಚಿತ. ಕಾರಣ, ಹೊಸ ಹೊಸ ಬ್ರ್ಯಾಂಡ್ಗಳ ಪ್ರಚಾರ, ಆ್ಯಡ್ ಶೂಟ್, ಖಾಸಗಿ ಕಾರ್ಯಕ್ರಮ ಹೀಗೆ ಹಲವಾರು ವಿಷಯಗಳಿಂದ ಪರಸ್ಪರ ಒಬ್ಬರನೊಬ್ಬರು ಮುಖಾಮುಖಿ ಭೇಟಿಯಾಗುತ್ತಾರೆ. ಈ ಮೂಲಕ ಹಲವು ವಿಷಯಗಳು ವಿನಿಮಯವಾಗುತ್ತದೆ. ಇದು ತೀರ ಸಾಮಾನ್ಯ ಸಂಗತಿ ಎಂದೇ ಹೇಳಬಹುದು. ಸ್ಟಾರ್ ಕ್ರಿಕೆಟಿಗರನ್ನು ಕಂಡರೆ ಚಿತ್ರನಟಿಯರಿಗೆ ಎಷ್ಟೋ ಇಷ್ಟವೋ ಅಷ್ಟೇ ಪ್ರಮಾಣದಲ್ಲಿ ಕ್ರಿಕೆಟ್ ಆಟಗಾರರು ಕೂಡ ತಮ್ಮ ನೆಚ್ಚಿನ ನಟಿಯರ ಬಗ್ಗೆ ಕೆಲವೊಂದು ಸಂದರ್ಶನಗಳಲ್ಲಿ ಮನಬಿಚ್ಚಿ ಮಾತನಾಡುತ್ತಾರೆ.
ಇದನ್ನೂ ಓದಿ: ಉದ್ಯೋಗದ ನೆಪದಲ್ಲಿ ಕಾಂಬೋಡಿಯಾಕ್ಕೆ ಮಾನವ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಮಹಿಳೆ ಬಂಧನ
ಸದ್ಯ ಈ ಸಾಲಿಗೆ ಬಾಲಿವುಡ್ ನಟಿ ಅನನ್ಯ ಪಾಂಡೆ ಸೇರಿದ್ದು, ಟೀಮ್ ಇಂಡಿಯಾದ ದಿಗ್ಗಜ ಆಟಗಾರ ಎಂದರೆ ತನಗೆ ಬಹಳ ಇಷ್ಟ ಎಂದು ಹೇಳಿಕೊಂಡಿದ್ದಾರೆ. ನನ್ನ ‘ಸೆಲೆಬ್ರಿಟಿ ಕ್ರಶ್’ ವಿರಾಟ್ ಕೊಹ್ಲಿ ಎಂದು ಬಹಿರಂಗವಾಗಿ ಹೇಳಿಕೊಂಡಿರುವ ಅನನ್ಯ ಪಾಂಡೆ, ವಿರಾಟ್ರ ಕ್ರಿಕೆಟಿಂಗ್ ಸ್ಟೈಲ್, ಆಟದ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕ್ರಿಕೆಟಿಗರನ್ನು ಇಷ್ಟಪಡುವ ನಟಿಯರು ಇದೇ ಮೊದಲಲ್ಲ. ಈ ಹಿಂದೆ ಹಲವು ನಟಿಮಣಿಯರು ಇದೇ ರೀತಿ ಭಾರತ ಕ್ರಿಕೆಟ್ ತಂಡದಲ್ಲಿರುವ ತಮ್ಮ ನೆಚ್ಚಿನ ಸ್ಟಾರ್ ಆಟಗಾರರ ಬಗ್ಗೆ ಅನಿಸಿಕೆ, ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡ ನಿದರ್ಶನಗಳಿವೆ.
ಈ ಹಿಂದೆ ನಟ ವಿಜಯ್ ದೇವರಕೊಂಡ ಜತೆ ‘ಲೈಗರ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಅನನ್ಯ ಪಾಂಡೆ, ಚಿತ್ರದ ಸೋಲಿನ ಬಳಿಕ ಅಷ್ಟಾಗಿ ಯಾವ ಸಿನಿಮಾದಲ್ಲಿಯೂ ಸದ್ದು ಮಾಡಲಿಲ್ಲ. ಇದೀಗ ಸಸ್ಪೆನ್ಸ್-ಥ್ರಿಲ್ಲರ್ ಜಾನರ್ನಡಿ ತಯಾರಾಗಿರುವ ‘ಸಿಟಿಆರ್ಎಲ್’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ಅನನ್ಯ, ಸಿನಿಮಾದ ಗೆಲುವಿನತ್ತ ಎದುರುನೋಡುತ್ತಿದ್ದಾರೆ,(ಏಜೆನ್ಸೀಸ್).
ಆ ದೃಶ್ಯ ಕಂಡು ಮಾಹಿಯಿಂದ ದೂರ ಇದ್ದೆವು! ಕ್ಯಾಪ್ಟನ್ ‘ಕೂಲ್’ ಅಲ್ಲವೇ ಅಲ್ಲ ಎಂದ ಸುಬ್ರಮಣ್ಯಂ ಬದ್ರಿನಾಥ್