ಸೋದರ ಕೋಮಲ್​ ಮೇಲೆ ಹಲ್ಲೆ ಪ್ರಕರಣ: ಸುದೀಪ್‌ ಹೆಸರನ್ನು ತಂದರೆ ಅದಕ್ಕೆ ಕ್ಷಮೆಯಿಲ್ಲ ಎಂದು ನಟ ಜಗ್ಗೇಶ್‌ ಗುಡುಗಿದ್ಯಾಕೆ?

ಬೆಂಗಳೂರು: ನಟ ಮತ್ತು ಜಗ್ಗೇಶ್‌ ಸೋದರ ಕೋಮಲ್‌ ಮತ್ತು ಯುವಕನೊಬ್ಬನ ನಡುವೆ ನಡೆದ ಗಲಾಟೆಯಲ್ಲಿ ಕೋಮಲ್‌ಗೆ ಹಲ್ಲೆ ಮಾಡಲಾಗಿದ್ದು, ತಮ್ಮನ ಮೇಲಿನ ಹಲ್ಲೆಗೆ ನಟ ಜಗ್ಗೇಶ್‌ ಕಿಡಿಕಾರಿದ್ದಾರೆ.

ನಟ ಕೋಮಲ್‌ ಮೇಲಿನ ಹಲ್ಲೆ ಪ್ರಕರಣದ ಹಿಂದೆ ಸುದೀಪ್ ಇದ್ದಾರೆ ಎಂದು ಕೆಲ ನೆಟ್ಟಿಗರು ಸಂಶಯ ವ್ಯಕ್ತಪಡಿಸಿರುವ ಬೆನ್ನಲ್ಲೇ ಟ್ವೀಟ್‌ ಮಾಡಿರುವ ಜಗ್ಗೇಶ್‌, ನನ್ನ ಕಲಾಬಂಧು ಸುದೀಪ್ ಹೆಸರನ್ನು ಯಾರಾದರು ಈ ವಿಷಯದಲ್ಲಿ ತಂದರೆ ಅಂತವರಿಗೆ ಕ್ಷಮೆಯಿರುವುದಿಲ್ಲ. ಸುದೀಪ್ ನನ್ನ ಒಡಹುಟ್ಟದಿದ್ದರೂ ಕೂಡ ನನ್ನ ಹೆಮ್ಮೆಯ ತಮ್ಮನಿದ್ದಂತೆ ಎಂದು ಹೇಳಿದ್ದಾರೆ.

ಅವನು ನನ್ನ ಮೇಲೆ ಇಟ್ಟಿರುವ ಪ್ರೀತಿ ಬೆಲೆಕಟ್ಟಲಾಗದ್ದು. ಬರೆಯುವ ಆಸೆ ಇದ್ದರೆ ಉತ್ತಮ ಸಾಮಾಜಿಕ ವಿಷಯಗಳ ಬಗ್ಗೆ ಬರೆಯಿರಿ. ಆದರೆ ಮನಸ್ಸನ್ನು ಕೆಡಿಸದಿರಿ. ಧನ್ಯವಾದಗಳು ಎಂದು ಮನವಿ ಮಾಡಿದ್ದಾರೆ.
ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಅವರು ಟ್ವೀಟ್‌ ಮಾಡಿ, ಮಲ್ಲೇಶ್ವರಂ ಪೊಲೀಸರು ತಕ್ಷಣದ ಕ್ರಮ ಕೈಗೊಂಡಿದ್ದಾರೆ ಮತ್ತು ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ, ಸಾರ್ವಜನಿಕರು ಬೆಂಬಲ ನೀಡಿದಕ್ಕಾಗಿ ಧನ್ಯವಾದಗಳು. ಇಂತಹ ರೌಡಿಸಂ ಚಟುವಟಿಕೆಗಳನ್ನು ಸಹಿಸಲು ಸಾಧ್ಯವಿಲ್ಲ. ಪ್ರಕರಣವನ್ನು ದಾಖಲಿಸಿಕೊಂಡು ಅವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ನಟ ಜಗ್ಗೇಶ್‌, ಧನ್ಯವಾದಗಳು ಸರ್, ತಮ್ಮ ನೇತೃತ್ವದಲ್ಲಿ ಬೆಂಗಳೂರು ಮಹಾನಗರ ಡ್ರಗ್ಸ್ ರೌಡಿಸಂ ಮುಕ್ತವಾಗುತ್ತದೆ ಎಂಬ ನಂಬಿಕೆ ಇದೆ ಎಂದಿದ್ದಾರೆ.

ಘಟನೆ ಹಿನ್ನೆಲೆ

ಮಂಗಳವಾರ ಸಂಜೆ ಸಂಪಿಗೆ ಚಿತ್ರಮಂದಿರದ ಬಳಿಯ ರೈಲ್ವೇ ಅಂಡರ್ ಪಾಸ್ ಬಳಿ‌ ದಾರಿ ಬಿಡುವ ವಿಚಾರಕ್ಕೆ ಯುವಕ ಮತ್ತು ಕೋಮಲ್​ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ. ದ್ವಿಚಕ್ರ ವಾಹನದಲ್ಲಿ ಬಂದ ಯುವಕ ಕೋಮಲ್​ ಅವರ ಕಾರನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ್ದಾನೆ. ಈ ವೇಳೆ ಕೋಮಲ್​ ಕೂಡ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ. ಕೋಮಲ್​ ಅವರು ಕಾರು ಯುವಕನ ದ್ವಿಚಕ್ರ ವಾಹನಕ್ಕೆ ಟಚ್​ ಆಗಿದ್ದರಿಂದ ಗಲಾಟೆ ನಡೆದಿದೆ ಎಂದು ಹೇಳಲಾಗಿದೆ. ಘಟನೆಯಲ್ಲಿ ಕೋಮಲ್​ ಮುಖ ಹಾಗೂ ಮೂಗಿಗೆ ಗಾಯಗಳಾಗಿದ್ದ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡಿದ್ದರು. ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. (ದಿಗ್ವಿಜಯ ನ್ಯೂಸ್​)

One Reply to “ಸೋದರ ಕೋಮಲ್​ ಮೇಲೆ ಹಲ್ಲೆ ಪ್ರಕರಣ: ಸುದೀಪ್‌ ಹೆಸರನ್ನು ತಂದರೆ ಅದಕ್ಕೆ ಕ್ಷಮೆಯಿಲ್ಲ ಎಂದು ನಟ ಜಗ್ಗೇಶ್‌ ಗುಡುಗಿದ್ಯಾಕೆ?”

  1. ಅಲ್ಲೇನು ನಡೆದಿದೆ ಎಂಬುದನ್ನು ಕಣ್ಣಾರೆ ಕಾಣದೇ ಅಭಿಪ್ರಾಯ ವ್ಯಕ್ತಪಡಿಸುವುದು ಸಮಂಜಸವಲ್ಲ.

Leave a Reply

Your email address will not be published. Required fields are marked *