ಮಂಡ್ಯ ಚುನಾವಣೆ ಬಳಿಕ ಚಿತ್ರೀಕರಣದತ್ತ ದರ್ಶನ್‌; ರಾಮ ಆಗಿರ್ತಾನಾ… ರಾವಣ ಆಗಿರ್ತಾನಾ ನೀವೆ ನೋಡಿ ಎಂದಿದ್ದೇಕೆ?

ಬೆಂಗಳೂರು: ಇವತ್ತಿನಿಂದ ನನ್ನ ಕೆಲಸವನ್ನು ಶುರು ಮಾಡುತ್ತೇನೆ. ಅನ್ನದಾತರು ಕೆಲಸ ಕೊಟ್ಟಿದ್ದಾರೆ. ಹೊಟ್ಟೆ ಪಾಡಿಗೆ ಎನೋ ಮಾಡಬೇಕಲ್ಲ. ಇವತ್ತಿನಿಂದ್ಲೇ ಚಿತ್ರೀಕರಣ ಶುರು ಎಂದು ನಟ ದರ್ಶನ್‌ ಹೇಳಿದ್ದಾರೆ.

ಬಿಯರ್ಡ್ ಬಿಟ್ಟಿದೀನಿ ಅಸಲೀ ಲುಕ್ಕೇ ಬೇರೆ ಇರುತ್ತದೆ. ರಾಮ ಆಗಿರ್ತಾನಾ… ರಾವಣ ಆಗಿರ್ತಾನಾ ಅನ್ನೋದು ಇನ್ನೊಂದು ವರ್ಷದಲ್ಲಿ ಗೊತ್ತಾಗುತ್ತದೆ. ಇವತ್ತಿನಿಂದ ನಿರ್ದೇಶಕರು ಅನ್ನ ಬಿಡಲು ಹೇಳಿದ್ದಾರೆ. ಚೌಕದಲ್ಲಿ ರಾಬರ್ಟ್‌ ಆಗಿಟ್ಟಿದ್ದ ಹೆಸರೇ ಇಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಈಗ ಅದೆಲ್ಲವನ್ನು ಬಿಟ್ಟು ಬೇರೆ ರೀತಿಯಲ್ಲೇ ಕಾಣಿಸಿಕೊಳ್ಳುತ್ತಿದ್ದೇನೆ. ಹೊಸ ಆಯಾಮದಲ್ಲಿ ಒಂದೊಳ್ಳೆ ಸಿನಿಮಾ ಮಾಡುತ್ತಿದ್ದೇವೆ ಎಂದು ಹೇಳಿದರು.

ಮಂಡ್ಯ ಚುನಾವಣಾ ಫಲಿತಾಂಶದ ಬಗ್ಗೆ ಕೇಳಿದ್ದೇ ತಡ ಈಗ ಬೇಡ ಮಾತನಾಡುವುದು ಎಂದು ಹೇಳಿ ಹೊರಟರು.

ಇದು ದರ್ಶನ್ ಅಭಿನಯದ 53ನೇ ಚಿತ್ರವಾಗಿದ್ದು, ತರುಣ್‌ ಸುಧೀರ್‌ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಚಿತ್ರಕ್ಕೆ ಬೆಂಗಳೂರಿನ ಬನಶಂಕರಿ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿದೆ. ಈಗಾಗಲೇ ವಿಭಿನ್ನ ಪೋಸ್ಟರ್‌ಗಳಿಂದಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಸಿನಿಮಾದ ಫೋಟೊ ಶೂಟ್‌ ನಡೆಯಲಿದೆ. ನಾಳೆಯಿಂದ ಕಂಠೀರವ ಸ್ಟುಡಿಯೋದಲ್ಲಿ ಹಾಕಲಾಗಿರುವ ವಿಶೇಷ ಸೆಟ್‌ನಲ್ಲಿ ಶೂಟಿಂಗ್ ಪ್ರಾರಂಭವಾಗುತ್ತದೆ. (ದಿಗ್ವಿಜಯ ನ್ಯೂಸ್)