ಸುಮಲತಾ ಚುನಾವಣೆಯಲ್ಲಿ ಗೆಲ್ಲುತ್ತಾರೆಂದ ನಟ ಯಶ್‌ ನಿಖಿಲ್ ಎಲ್ಲಿದಿಯಪ್ಪಾ ಸಿನಿಮಾ ಬಗ್ಗೆ ಹೇಳಿದ್ದು ಹೀಗೆ…

ಮಂಡ್ಯ: ಚುನಾವಣೆ ಮುಗಿದ ಬಳಿಕ ಮೂರ್ನಾಲ್ಕು ಬಾರಿ ಮಂಡ್ಯಕ್ಕೆ ಬಂದಿದ್ದೆ. ಮೊದಲ ಸಾರಿ ಏನ್ ಬಂದಿಲ್ಲ. ಚುನಾವಣೆ ಮುಗಿದ ಬಳಿಕ ಸುಮಲತಾರನ್ನು ಭೇಟಿ ಮಾಡಿದ್ದೆ. ಸುಮಲತಾ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂದು ನಟ ಯಶ್‌ ವಿಶ್ವಾಸ ವ್ಯಕ್ತಪಡಿಸಿದರು.

ಮದ್ದೂರು ತಾಲೂಕಿನ ಕೆರೆಮೇಗಳದೊಡ್ಡಿ ಗ್ರಾಮದಲ್ಲಿ ಮಾತನಾಡಿ, ಒಳ್ಳೆ ವಾತಾವರಣ ಇದೆ. ಈಗಲೇ ಗೆಲುವಿನ ಅಂತರ ಹೇಳಿದರೆ ಕೊಚ್ಚಿಕೊಂಡತಾಗುತ್ತದೆ. ಮಂಡ್ಯ ಫಲಿತಾಂಶವನ್ನು ನಿರ್ದಿಷ್ಟವಾಗಿ ಹೇಳೋಕಾಗುತ್ತಿಲ್ಲ. ಜನ ಹೀಗೂ ಆಗಬಹುದು, ಹಾಗೂ ಆಗಬಹುದು ಎಂದು ಮಾತನಾಡುತ್ತಿದ್ದಾರೆ. ಚುನಾವಣೆ ಮುಗಿದ ಬಳಿಕ ಜೋಡೆತ್ತುಗಳು ಮಂಡ್ಯದಲ್ಲಿ ಕಾಣ್ತಿಲ್ಲ ಎಂಬ ವಿಚಾರವಾಗಿ ಪ್ರಚಾರಕ್ಕೆ ಬಂದಿದ್ದೆವು, ಹೋದೆವು. ಆದರೆ ಅಭ್ಯರ್ಥಿ ಬಂದಿದ್ದಾರಲ್ಲ ಎಂದರು.

ನಾನು ಮಂಡ್ಯ ರಾಜಕಾರಣಕ್ಕೆ ಬರುವುದಿಲ್ಲ. ಸ್ಪರ್ಧೆ ಕೂಡ ಮಾಡುವುದಿಲ್ಲ. ಸುಮಲತಾ ಗೆದ್ದರೆ ಒಳ್ಳೆಯ ಕೆಲಸ ಮಾಡುತ್ತಾರೆ. ಜೋಡೆತ್ತು ಸಿನೆಮಾ ಸೆಟ್ಟೇರುವ ವಿಚಾರವಾಗಿ ದರ್ಶನ್ ಪ್ರೀತಿಯಿಂದ ಜೋಡೆತ್ತು ಎಂದು ಹೇಳಿದರು. ದರ್ಶನ್ ನನಗಿಂತಲೂ ಹಿರಿಯ ನಟ. ದರ್ಶನ್ ಹೇಳಿದ್ದು ತುಂಬಾ ಫೇಮಸ್ ಆಯ್ತು. ಜೋಡೆತ್ತು ಟೈಟಲ್ ರಿಜಿಸ್ಟರ್‌ ಆಗಿದೆ. ನಾನೇನು ಆ ಸಿನಿಮಾದಲ್ಲಿ ನಟಿಸುವುದಿಲ್ಲ. ದರ್ಶನ್ ಜತೆ ಸಿನಿಮಾ ಮಾಡಬೇಕಂದ್ರೆ ಅವ್ರೊಬ್ಬ ದೊಡ್ಡ ಸ್ಟಾರ್. ಒಳ್ಳೆಯ ಕಥೆ ಸಿಗಬೇಕು. ಕಥೆ ಬಂದ್ರೆ ದರ್ಶನ್ ಜತೆ ಸಿನಿಮಾ ಮಾಡುತ್ತೇನೆ ಎಂದರು ಹೇಳಿದರು.

ಕೆಜಿಎಫ್ ಸಿನಿಮಾ ಶೂಟಿಂಗ್ ಶುರುವಾಗುತ್ತಿದೆ. ನಿಖಿಲ್ ಎಲ್ಲಿದಿಯಪ್ಪಾ… ಸಿನಿಮಾಗೆ ಒಳ್ಳೆಯದಾಗಲಿ. ಫಲಿತಾಂಶ ಬಂದ ದಿನ ಸಾಧ್ಯವಾದ್ರೆ ಮಂಡ್ಯಕ್ಕೆ ಬರುತ್ತೇನೆ ಎಂದು ತಿಳಿಸಿದರು.

ಅಭಿಮಾನಿಯೊಬ್ಬರ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದ ಯಶ್‌ಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ನೀಡಿದರು. ಕಾಂಗ್ರೆಸ್ ಮುಖಂಡ ಇಂಡುವಾಳು ಸಚ್ಚಿದಾನಂದ ನೇತೃತ್ವದಲ್ಲಿ ಮದ್ದೂರಿನ ಕೊಪ್ಪ ಸರ್ಕಲ್ ಹಾಗೂ ಕೆರೆಮೇಗಲದೊಡ್ಡಿ ಗ್ರಾಮದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. (ದಿಗ್ವಿಜಯ ನ್ಯೂಸ್)