More

    ರಾಕಿಂಗ್​ ಸ್ಟಾರ್​ ಯಶ್​ ಹುಟ್ಟು ಹಬ್ಬಕ್ಕೆ 5 ಸಾವಿರ ಕೆಜಿ ಕೇಕ್​ : ನಂದಿ ಲಿಂಕ್ಸ್ ಗ್ರೌಂಡ್​​ನಲ್ಲಿ ಜ.8ರಂದು ಹುಟ್ಟು ಹಬ್ಬ ಆಚರಣೆ

    ಬೆಂಗಳೂರು: ನಟ ಯಶ್​ ಹುಟ್ಟು ಹಬ್ಬ ಆಚರಣೆಗೆ ಅಭಿಮಾನಿಗಳು 5 ಸಾವಿರ ಕೆಜಿ ಕೇಕ್​ ತಯಾರಿಸಲು ಮುಂದಾಗಿದ್ದಾರೆ.

    ಹುಟ್ಟು ಹಬ್ಬಕ್ಕೆ 5 ಸಾವಿಕ ಕೆಜಿ ಕೇಕ್​ ತಯಾರಿಸಿಕೊಡುವ ಜವಾಬ್ದಾರಿಯನ್ನು ರಾಮ್​ಭವನ್​ ಸ್ವಿಟ್ಸ್​ ಮಳಿಗೆಗೆ ಅಭಿಮಾನಿಗಳು ವಹಿಸಿದ್ದಾರೆ. 5 ಸಾವಿರ ಕೆಜಿ ಕೇಕ್​ ಅನ್ನು ಅಭಿಮಾನಿ ವೇಣುಗೌಡ ಎಂಬುವವರು ನಟ ಯಶ್​ಗೆ ಉಡುಗೊರೆ ನೀಡುತ್ತಿದ್ದಾರೆ. ಜ.8ರಂದು ಯಶ್​ ಅವರ ಹುಟ್ಟು ಹಬ್ಬ. ಹುಟ್ಟು ಹಬ್ಬ ಆಚರಣೆಗಾಗಿ ನಂದಿ ಲಿಂಕ್ಸ್ ಗ್ರೌಂಡ್ ಸಿದ್ಧತೆ ನಡೆಯುತ್ತಿದೆ.

    ನಗರದ ಮಾಗಡಿ ರಸ್ತೆಯಲ್ಲಿರುವ ಮಾಚೋಹಳ್ಳಿ ಬಳಿ ಇರುವ ರಾಮ್​ಭವನ್​ ಸ್ವೀಟ್ಸ್​ ಮಳಿಗೆಯಲ್ಲಿ ಕೇಕ್​ ತಯಾರಾಗುತ್ತಿದೆ. ಅಂದಾಜು 15 ಮಂದಿ ಕೇಕ್​ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೇಕ್​ ತಯಾರಿಕೆಗೆ 800 ಕೆಜಿ ಮೈದಾ ಹಿಟ್ಟು, 800 ಕೆಜಿ ಸಕ್ಕರೆ, 20 ಮೊಟ್ಟೆ ,50 ಕೆಜಿ ತುಪ್ಪವನ್ನು ಕೇಕ್​ ತಯಾರಿಕೆಗೆ ಬಳಸಲಾಗಿದೆ. ಕೇಕ್​ನಲ್ಲಿ ಹ್ಯಾಪಿ ಬರ್ತ್​ಡೇ ರಾಕಿಂಗ್ ಸ್ಟಾರ್ ಯಶ್ ಬಾಸ್ ಎಂದು ಬರೆಸಲು ವೇಣುಗೌಡ ನಿರ್ಧರಿಸಿದ್ದಾರೆ.

    ದಾಖಲೆ: ಹಿಂದಿ ನಟ ಸಲ್ಮಾನ್ ಖಾನ್ ಹುಟ್ಟು ಹಬ್ಬಕ್ಕೆ ಅಭಿಮಾನಿಗಳು 4 ಸಾವಿರ ಕೆಜಿ ಕೇಕ್​ ತಯಾರಿಸಿ ದಾಖಲೆ ಬರೆದಿದ್ದರು. ಈಗ ಯಶ್​ ಅಭಿಮಾನಿಗಳು ಆ ದಾಖಲೆ ಮುರಿಯಲು ಮುಂದಾಗಿದ್ದಾರೆ.
    ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ಯಶ್​ ಅವರ 216 ಅಡಿ ಎತ್ತರದ ಕಟೌಟ್ ನಿರ್ಮಾಣ ಮಾಡಲು ಅಭಿಮಾನಿಗಲು ಮುಂದಾಗಿದ್ದಾರೆ. ಹಿಂದೆ‌ ನಟ ಸೂರ್ಯ ನಿಗೆ ಎನ್ ಜಿಕೆ ಸಿನಿಮಾ ಬಿಡುಗಡೆಯ ಸಮಯದಲ್ಲಿ 215 ಅಡಿ ಕಟೌಟ್ ನಿರ್ಮಿಸಲಾಗಿತ್ತು. ಅದಕ್ಕಿಂತ ಎತ್ತರ ಇರುವ ಕಟೌಟ್​ ನಿರ್ಮಿಸಿ ದಾಖಲೆ ಮುರಿಯಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಜ.7ರ ಮಧ್ಯರಾತ್ರಿಯಿಂದಲೇ ಅಭಿಮಾನಿಗಳು ನೆಚ್ಚಿನ ನಟನ ಹುಟ್ಟು ಹಬ್ಬ ಆಚರಣೆ ಮಾಡಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ಅಂದಾಜು 20 ಸಾವಿರಕ್ಕೂ ಅಧಿಕ ಅಭಿಮಾನಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts