ನನ್ನನ್ನು ಟಾರ್ಗೆಟ್​ ಮಾಡುವವರು ಹುಷಾರಾಗಿರಬೇಕಷ್ಟೇ, ನಾನಂತೂ ಸುಮ್ಮನೆ ಇರುವುದಿಲ್ಲ ಎಂದ ನಟ ಯಶ್​

ಮಂಡ್ಯ: ಅವನಿ ಫೌಂಡೇಶನ್​ನಿಂದ ವಿಶ್ವ ಭೂಮಿ ದಿನ ಪ್ರಯುಕ್ತ ನಡೆದ ಸಮಾರಂಭಕ್ಕೆ ಆಗಮಿಸಿದ ಯಶ್​ ಮಂಡ್ಯ ಚುನಾವಣೆ ಬಗ್ಗೆ ದಿಗ್ವಿಜಯ ನ್ಯೂಸ್​ ಜತೆ ಮಾತನಾಡಿದರು.

ಚುನಾವಣೆ ಸಮಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿ ಯಾವುದೇ ಮುಖಂಡರ ಹೇಳಿಕೆಗಳಿಗೆಲ್ಲ ಪ್ರತಿಕ್ರಿಯೆ ಕೊಡೋದಿಲ್ಲ ಎಂದು ಹೇಳಿದ ಯಶ್​, ನನ್ನನ್ನು ಟಾರ್ಗೆಟ್​ ಮಾಡುವುದು ಸುಲಭವಲ್ಲ. ನಾವು ಜನಗಳ ಆಸ್ತಿ. ನಮ್ಮನ್ನು ಟಾರ್ಗೆಟ್​ ಮಾಡುವವರು ಹುಷಾರಾಗಿ ಇರಬೇಕು ಅಷ್ಟೇ ಎಂದು ಟಾಂಗ್​ ನೀಡಿದರು.

ಮಂಡ್ಯದಲ್ಲಿ ಶೇ.80ರಷ್ಟು ಮತದಾನ ಆಗಿದೆ. ಇದು ಒಳ್ಳೆಯ ಸಂಗತಿ. ಅಂಬರೀಷಣ್ಣ, ಸುಮಮ್ಮನ ಮೇಲಿನ ಪ್ರೀತಿಯಿಂದ ನಾನು ಕೆಲಸ ಮಾಡಿದ್ದೇನೆ. ಇನ್ನು ರಿಸಲ್ಟ್​ ಬರಬೇಕಷ್ಟೇ ಎಂದು ಹೇಳಿದರು.

ನಿಖಿಲ್​ ಗೆದ್ದರೆ ಇನ್ನು ಯಶ್​, ದರ್ಶನ್​ ಪ್ರಚಾರಕ್ಕೆ ಬರಬಾರದು ಎಂದು ಹೇಳಿದ ಶಿವರಾಮೇಗೌಡರಿಗೆ ಪ್ರತಿಕ್ರಿಯೆ ನೀಡಿದ ಅವರು, ಅವರ ಹೇಳಿಕೆಗಳಿಗೆಲ್ಲ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಒಂದಂತೂ ಸತ್ಯ ಯಾರೇ ನನ್ನ ವಿಚಾರಕ್ಕೆ ಬಂದರೂ ಸುಮ್ಮನೆ ಇರುವುದಿಲ್ಲ ಎಂದು ತಿಳಿಸಿದರು.

One Reply to “ನನ್ನನ್ನು ಟಾರ್ಗೆಟ್​ ಮಾಡುವವರು ಹುಷಾರಾಗಿರಬೇಕಷ್ಟೇ, ನಾನಂತೂ ಸುಮ್ಮನೆ ಇರುವುದಿಲ್ಲ ಎಂದ ನಟ ಯಶ್​”

  1. ಅದ್ಭುತ ಯಶ್, ನಿನ್ನಂಥವರೇ ನಮ್ಮ ನಾಡಿಗೆ ಬೇಕಾಗಿರೋದು !!🤩😍🙏

Leave a Reply

Your email address will not be published. Required fields are marked *