ನಟ ಯಶ್​ ಅಭಿನಯದ ಕೆಜಿಎಫ್​ ಚಿತ್ರದ ಟ್ರೇಲರ್​ ಐದು ಭಾಷೆಗಳಲ್ಲಿ ಬಿಡುಗಡೆ

ಬೆಂಗಳೂರು: ನಟ ಯಶ್​ ಅಭಿನಯದ ಬಹು ನಿರೀಕ್ಷಿತ ಕೆಜಿಎಫ್​ ಸಿನಿಮಾದ ಟ್ರೇಲರ್​ ಇಂದು ಬಿಡುಗಡೆಯಾಗಿದೆ.

ಕನ್ನಡ, ತೆಲುಗು, ಮಲಯಾಳಂ, ತಮಿಳು, ಹಿಂದಿ ಭಾಷೆಗಳಲ್ಲಿ ಟ್ರೇಲರ್​ ಬಿಡುಗಡೆಯಾಗಿದ್ದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಸುಮಾರು ಮೂರು ನಿಮಿಷಗಳ ವಿಡಿಯೋದಲ್ಲಿ ರಕ್ತಸಿಕ್ತ ದೃಶ್ಯಗಳು ಇವೆ. ಪ್ರೀತಿ, ಭಾವನೆಗಳಿಗೆ ಬೆಲೆಯಿಲ್ಲ. ಯಾರಲ್ಲಿ ಎಲ್ಲವನ್ನೂ ಎದುರಿಸುವ ಸಾಮರ್ಥ್ಯವಿದೆಯೋ ಅವರು ಉಳಿಯುತ್ತಾರೆ ಎಂಬ ಸಂದೇಶವನ್ನು ಸಿನಿಮಾ ಹೊಂದಿದೆ ಎನ್ನಲಾಗಿದೆ.

ಕನ್ನಡ-ಮಲಯಾಳಂ ಟ್ರೇಲರ್​ ಅನ್ನು ಹೊಂಬಾಳೆ ಪ್ರೊಡಕ್ಷನ್​ ಬಿಡುಗಡೆ ಮಾಡಿದ್ದು, ವಿಶಾಲ್​ ಫಿಲಂ ಫ್ಯಾಕ್ಟರಿಯಿಂದ ತಮಿಳು, ವರಾಹಿ ಪ್ರೊಡಕ್ಷನ್​ನಿಂದ ತೆಲುಗು, ಎಎ ಫಿಲಂ ನಿಂದ ಹಿಂದಿ ಟ್ರೇಲರ್​ ಬಿಡುಗಡೆ ಮಾಡಲಾಗಿದ್ದು ಎಲ್ಲವೂ ಯೂ ಟ್ಯೂಬ್​ನಲ್ಲಿ ಜಗಜ್ಜಾಹೀರಾಗಿವೆ. ಚಲನಚಿತ್ರ ಡಿ.21ಕ್ಕೆ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಈ ಸಿನಿಮಾಕ್ಕಾಗಿಯೇ ಯಶ್​ ಎರಡು ವರ್ಷ ಗಡ್ಡ ತೆಗೆಯದೆ ಉಳಿಸಿಕೊಂಡಿದ್ದರು. ಇತ್ತೀಚೆಗೆ ಅದರ ಶೂಟಿಂಗ್​ ಮುಗಿದ ಬಳಿಕ ಗಡ್ಡ ತೆಗೆದು ಸುದ್ದಿಯಾಗಿದ್ದರು.