ವಿಷ್ಣುವರ್ಧನ್‌ ಬಗ್ಗೆ ಸಿಎಂ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎನಿಸುತ್ತಿದೆ ಎಂದ ಅನಿರುದ್ಧ್‌

ಬೆಂಗಳೂರು: ನಟ ವಿಷ್ಣುವರ್ಧನ್‌ ಅವರು ಮೃತಪಟ್ಟು 9 ವರ್ಷ ಕಳೆದ ಬಳಿಕ ಮತ್ತೆ ವಿಷ್ಣ ಸ್ಮಾರಕ ವಿಚಾರ ಸದ್ದು ಮಾಡುತ್ತಿದ್ದು, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ವಿಷ್ಣುವರ್ಧನ್‌ ಅಳಿಯ, ನಟ ಅನಿರುದ್ಧ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಡಾ.ರಾಜ್‌ಕುಮಾರ್‌ ಹೆಸರಿನಲ್ಲಿ ರಾಮನಗರಕ್ಕೆ ಫಿಲ್ಮ್ ಯೂನಿವರ್ಸಿಟಿ ಮತ್ತು ಅಂಬರೀಷ್‌ ಹೆಸರಿನಲ್ಲಿ ಮೈಸೂರಿನಲ್ಲಿ ಫಿಲ್ಮ್ ಸಿಟಿ ಮಾಡುವಂತೆ ಘೋಷಿಸಿದ್ದಾರೆ. ಆದರೆ, ನಮ್ಮ ಅಪ್ಪಾಜಿ ಬಗ್ಗೆ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎನಿಸುತ್ತಿದೆ ಎಂದು ಮಾಧ್ಯಮಗಳೊಂದಿಗೆ ಬೇಸರ ವ್ಯಕ್ತಪಡಿಸಿದ್ದಾರೆ.

2011 ರಿಂದಲೂ ಸರ್ಕಾರಕ್ಕೆ ನಾವು ಅಪ್ಪಾಜಿ ಸ್ಮಾರಕದ ಜತೆಗೆ ಬೆಂಗಳೂರಿನಲ್ಲಿ ಫಿಲ್ಮ್ಸ್ ಆ್ಯಂಡ್ ಟೆಲಿವಿಷನ್ ಇನ್ಸ್‌ಟಿಟ್ಯೂಟ್‌ ಶಾಖೆಗೆ ಮನವಿ ಮಾಡಿದ್ದೇವೆ. ಫಿಲ್ಮ್ಸ್ ಆ್ಯಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಈಗ ಪುಣೆಯಲ್ಲಿದೆ. ಅದರ ಶಾಖೆ ಬೆಂಗಳೂರಿನಲ್ಲಿ ಆಗಬೇಕು ಎಂದು ಎಲ್ಲ ಮುಖ್ಯಮಂತ್ರಿಗಳಿಗೂ ಮನವಿ ಮಾಡಿಕೊಂಡಿದ್ದೇವೆ. ಆದರೆ, ಇದರ ಬಗ್ಗೆ ಒಂದು ಮಾತನ್ನು ಆಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್)