More

  ಆಕೆಯ ಮೂಗು, ತುಟಿ, ಕಣ್ಣು…! ವಿಜಯ್​ ದೇವರಕೊಂಡ ಇಷ್ಟೆಲ್ಲಾ ಯಾವ ನಟಿಯ ಬಗ್ಗೆ ಹೊಗಳಿದ್ದು ಗೊತ್ತಾ?

  ಒಂದು ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ ಬಳಿಕ ನಾಯಕ, ನಾಯಕಿಯನ್ನು ಹಾಗೂ ನಾಯಕಿ, ನಾಯಕನನ್ನು ಹೊಗಳುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಈ ಹೊಗಳಿಕೆ ಮತ್ತೊಬ್ಬರಿಗೆ ಮುಜುಗರ ಉಂಟು ಮಾಡುವ ಸಾಧ್ಯತೆಯೂ ಇರುತ್ತದೆ. ಈಗೇಕೆ ಈ ವಿಷಯವೆಂದರೆ, ಅದಕ್ಕೆ ಕಾರಣ ತೆಲುಗು ನಟ ವಿಜಯ್​ ದೇವರಕೊಂಡ. ಪರಶುರಾಮ್​ ನಿರ್ದೇಶಿಸಿರುವ “ಫ್ಯಾಮಿಲಿ ಸ್ಟಾರ್​’ ಚಿತ್ರದಲ್ಲಿ ವಿಜಯ್​ ಮತ್ತು “ಸೀತಾರಾಮಂ’ ಖ್ಯಾತಿಯ ಮೃನಾಲ್​ ಠಾಕೂರ್​ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

  ಆಕೆಯ ಮೂಗು, ತುಟಿ, ಕಣ್ಣು…! ವಿಜಯ್​ ದೇವರಕೊಂಡ ಇಷ್ಟೆಲ್ಲಾ ಯಾವ ನಟಿಯ ಬಗ್ಗೆ ಹೊಗಳಿದ್ದು ಗೊತ್ತಾ?

  ಇದೇ ಶುಕ್ರವಾರ (ಏ. 5) ಸಿನಿಮಾ ರಿಲೀಸ್​ ಆಗಲಿದೆ. ಚಿತ್ರದ ಪ್ರಚಾರದ ವೇಳೆ ನಾಯಕ ವಿಜಯ್​, “ಮೃನಾಲ್​ರಂತಹ ಬುದ್ಧಿವಂತ ಸಹನಟಿಯಿದ್ದರೆ ನಮ್ಮ ಕೆಲಸ ಸರಳವಾಗುತ್ತದೆ. ನಾನು ಸಿನಿಮಾ ಬಗ್ಗೆ ಕನಸು ಕಾಣುವುದಕ್ಕಿಂತಲೂ ಮುಂಚಿನಿಂದಲೇ ಅವರು ನಟಿಸುತ್ತಿದ್ದಾರೆ. ತುಂಬ ವೇಗವಾಗಿ ಕಲಿಯುತ್ತಾರೆ. ಅವರು ಏನೂ ಹೇಳದಿದ್ದರೂ, ಮುಖಭಾವದಿಂದಲೇ ಅರ್ಥ ಮಾಡಿಸಿಬಿಡುತ್ತಾರೆ. ಅವರ ಕಣ್ಣು, ತುಟಿ, ಮೂಗು… ಅವರಿಗೆ ಭಾಷೆ ಗೊತ್ತಿಲ್ಲದಿದ್ದರೂ ಭಾವಗಳ ಮೂಲಕ ಹೇಳುತ್ತಾರೆ’ ಎಂದು ಮೃನಾಲ್​ರನ್ನು ಹಾಡಿ ಹೊಗಳಿದ್ದಾರೆ. ಅವರ ಈ ಮಾತು ಜಾಲತಾಣದಲ್ಲಿ ವೈರಲ್​ ಆಗಿದೆ.

  ಆಕೆಯ ಮೂಗು, ತುಟಿ, ಕಣ್ಣು…! ವಿಜಯ್​ ದೇವರಕೊಂಡ ಇಷ್ಟೆಲ್ಲಾ ಯಾವ ನಟಿಯ ಬಗ್ಗೆ ಹೊಗಳಿದ್ದು ಗೊತ್ತಾ?

  “ಫ್ಯಾಮಿಲಿ ಸ್ಟಾರ್​’ ರಿಲೀಸ್​ ಬಳಿಕ ವಿಜಯ್​ ದೇವರಕೊಂಡ ಗೌತಮ್​ ಆ್ಯಕ್ಷನ್​-ಕಟ್​ ಹೇಳಲಿರುವ, ಶ್ರೀಲಿಲಾ ನಾಯಕಿಯಾಗಿರುವ ಹೊಸ ಚಿತ್ರದ ಶೂಟಿಂಗ್​ನಲ್ಲಿ ಬಿಜಿಯಾಗಲಿದ್ದು, ಮೃನಾಲ್​ ಠಾಕೂರ್​ ಬಾಲಿವುಡ್​ನ “ಪೂಜಾ ಮೇರಿ ಜಾನ್​’ ಚಿತ್ರದಲ್ಲಿ ತೊಡಗಲಿದ್ದಾರೆ.

  ಆಕೆಯ ಮೂಗು, ತುಟಿ, ಕಣ್ಣು…! ವಿಜಯ್​ ದೇವರಕೊಂಡ ಇಷ್ಟೆಲ್ಲಾ ಯಾವ ನಟಿಯ ಬಗ್ಗೆ ಹೊಗಳಿದ್ದು ಗೊತ್ತಾ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts