‘ಸೂರ್ಯ 44’ ಚಿತ್ರೀಕರಣದಲ್ಲಿ ತಲೆಗೆ ಪೆಟ್ಟು! ಶೂಟಿಂಗ್ ಸ್ಥಗಿತ

ತಮಿಳುನಾಡು: ತಮಿಳು ನಟ ಸೂರ್ಯ ತಮ್ಮ ಮುಂಬರುವ ‘ಸೂರ್ಯ 44’ ಸಿನಿಮಾದ ಎರಡನೇ ಶೆಡ್ಯೂಲ್​ನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ವೇಳೆ ತಲೆಗೆ ಪೆಟ್ಟು ಬಿದ್ದ ಕಾರಣ ದಿಢೀರ್ ಆಸ್ಪತ್ರೆಗೆ ದಾಖಲಾಗಿ, ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಸಂಭವಿಸಿದ ಬೆನ್ನಲ್ಲೇ ಊಟಿಯಲ್ಲಿ ನಡೆಯುತ್ತಿದ್ದ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಭರದಿಂದ ಸಾಗುತ್ತಿದ್ದ ಶೂಟಿಂಗ್​ನಲ್ಲಿ ಇಂತಹ ಅವಘಡ ನಡೆದಿದ್ದಕ್ಕೆ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಟೀಮ್​ ಇಂಡಿಯಾ ಪಾಕ್​ನ ಮಣಿಸಲು ಸಾಧ್ಯವೇ ಇಲ್ಲ! ಆದ್ರೆ… ಮಾಜಿ ಆಟಗಾರ

ಘಟನೆ ಸಂಭವಿಸುತ್ತಿದ್ದಂತೆ ನಿರ್ಮಾಪಕ ರಾಜಶೇಖರ್ ಪಾಂಡಿಯನ್ ತಮ್ಮ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಸೂರ್ಯ ಆರೋಗ್ಯದ ಬಗ್ಗೆ ಒಂದು ಪೋಸ್ಟ್​ ಮೂಲಕ ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ. “ಆತ್ಮೀಯ ಸೂರ್ಯ ಫ್ಯಾನ್ಸ್, ​ಇದು ಸಣ್ಣ ಗಾಯವಾಗಿದೆ. ದಯವಿಟ್ಟು ಚಿಂತಿಸಬೇಡಿ, ಅವರು ನಿಮ್ಮೆಲ್ಲರ ಪ್ರೀತಿ ಮತ್ತು ಪ್ರಾರ್ಥನೆಯೊಂದಿಗೆ ಸಂಪೂರ್ಣವಾಗಿ ಗುಣಮುಖರಾಗಿ ಬರಲಿದ್ದಾರೆ” ಎಂದು ಬರೆದುಕೊಂಡಿದ್ದಾರೆ. ವರದಿಗಳ ಪ್ರಕಾರ, ಸೂರ್ಯಗೆ ಈ ಹಿಂದೆಯೇ ಕೆಲವು ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಲಾಗಿತ್ತು. ಆದರೂ ಕೂಡ ಚಿತ್ರೀಕರಣಕ್ಕೆ ಹಾಜರಾಗಿದ್ದರು.

ಒಂದೆಡೆ ತಾತ್ಕಾಲಿಕ ಹೆಸರಿಟ್ಟಿರುವ ‘ಸೂರ್ಯ 44’ ಚಿತ್ರದ ಕೆಲಸಗಳಲ್ಲಿ ತೊಡಗಿರುವ ಸೂರ್ಯ, ಮತ್ತೊಂದೆಡೆ ತಮ್ಮ ಪ್ಯಾನ್ ಇಂಡಿಯಾ ಸಿನಿಮಾ ‘ಕಂಗುವ’ ಬಿಡುಗಡೆಗೂ ಸಜ್ಜಾಗುತ್ತಿದ್ದಾರೆ. ಬಿಗ್ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಸಿನಿಮಾವನ್ನು ಸಿರುತೈ ಶಿವ ನಿರ್ದೇಶಿಸಿದ್ದು, ಇದೇ ಅಕ್ಟೋಬರ್ 10ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಿದ್ಧವಾಗಿದೆ. ಚಿತ್ರಕ್ಕೆ ಬಾಲಿವುಡ್​ನ ಹಾಟ್​ ಬೆಡಗಿ ದಿಶಾ ಪಟಾನಿ ನಾಯಕಿಯಾಗಿದ್ದು, ಬಾಬಿ ಡಿಯೋಲ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಟೀಮ್​ ಇಂಡಿಯಾ ಪಾಕ್​ನ ಮಣಿಸಲು ಸಾಧ್ಯವೇ ಇಲ್ಲ! ಆದ್ರೆ… ಮಾಜಿ ಆಟಗಾರ

Share This Article

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…

ಈ ದಿನಾಂಕದಂದು ಜನಿಸಿದವರು ದಾನದಲ್ಲಿ ಕರ್ಣನನ್ನು ಮೀರಿಸುತ್ತಾರೆ! ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು

 ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ…