ಸುದೀಪ್​ ಮನೆಯಲ್ಲಿ ಮುಕ್ತಾಯ ಹಂತದಲ್ಲಿ ಐಟಿ ಅಧಿಕಾರಿಗಳ ಪರಿಶೀಲನೆ; ನಾನು ಆರಾಮಾಗಿದ್ದೇನೆ ಎಂದ ಕಿಚ್ಚ

ಬೆಂಗಳೂರು: ನಟ ಸುದೀಪ್​ ಮನೆ ಮೇಲೆ ಐಟಿ ದಾಳಿಯಾದ ಹಿನ್ನೆಲೆಯಲ್ಲಿ ನಾಳೆ ಬಿಗ್​ಬಾಸ್ ವಾರದ ಕಥೆ ಕಿಚ್ಚ ಸುದೀಪನ ಜತೆ ನಡೆಯುತ್ತದೆಯೋ ಇಲ್ಲವೋ ಎಂಬ ಬಗ್ಗೆ ಪರಮೇಶ್ವರ್​ ಗುಂಡ್ಕಲ್​ ಸ್ಪಷ್ಟನೆ ನೀಡಿದ್ದು, ಶೋದಲ್ಲಿ ಯಾವುದೇ ಬದಲಾವಣೆ ಇಲ್ಲ. ಎಂದಿನಂತೆ ಶೂಟಿಂಗ್​ ನಡೆಯುತ್ತದೆ ಎಂದು ಹೇಳಿದ್ದಾರೆ.
ಬಿಗ್​ಬಾಸ್​ ಶೋ ನಿರ್ದೇಶಕ ಪರಮೇಶ್ವರ್​ ಗುಂಡ್ಕಲ್​ ದಿಗ್ವಿಜಯ ನ್ಯೂಸ್​ಗೆ ಪ್ರತಿಕ್ರಿಯಿಸಿ, ಪ್ರತಿ ಶನಿವಾರ, ಭಾನುವಾರ ವಾರದ ಕಥೆ ಕಿಚ್ಚನ ಜತೆ ನಡೆಯುತ್ತದೆ. ಈ ಬಾರಿಯೂ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ.

ಬಹುತೇಕ ಮುಕ್ತಾಯ

ಇನ್ನು ಸುದೀಪ್​ ಮನೆ ಮೇಲೆ ಐಟಿ ದಾಳಿ, ವಿಚಾರಣೆ ಬಹುತೇಕ ಕೊನೇ ಹಂತದಲ್ಲಿದೆ. ಸುದೀಪ್​ ಮನೆಯಿಂದ ಈಗಾಗಲೇ ಮೂವರು ಅಧಿಕಾರಿಗಳು ವಾಪಸ್​ ತೆರಳಿದ್ದಾರೆ. ಕೆಲವು ದಾಖಲೆಗಳನ್ನು ಜತೆಗೆ ಕೊಂಡೊಯ್ದಿದ್ದಾರೆ ಎನ್ನಲಾಗಿದೆ. ಇನ್ನೊಬ್ಬ ಮಹಿಳಾ ಅಧಿಕಾರಿ ಈಗ ಆಗಮಿಸಿದ್ದಾರೆ.

ಸುದೀಪ್​ ಅವರು ಮನೆಯಲ್ಲಿ ತುಂಬ ಆರಾಮಾಗಿ ಓಡಾಡಿಕೊಂಡಿದ್ದಾರೆ ಎಂದು ಅವರ ಆಪ್ತಮೂಲಗಳು ತಿಳಿಸಿವೆ. ಅಲ್ಲದೆ, ಇತ್ತೀಚೆಗೆ ತುಂಬ ಕೆಲಸದ ಒತ್ತಡವಿತ್ತು. ಬಿಜಿಯಾಗಿರುತ್ತಿದ್ದೆ. ನಿನ್ನೆಯಿಂದ ಐಟಿ ಅಧಿಕಾರಿಗಳು ನಮ್ಮ ಮನೆಯಲ್ಲಿ ಇರುವುದರಿಂದ ಆರಾಮಾಗಿದ್ದೇನೆ. ಟೈಂ ಪಾಸ್​ ಆಗುತ್ತಿಲ್ಲ ಎಂದು ಅವರು ಹೇಳಿಕೊಂಡಿದ್ದಾಗಿ ಸುದೀಪ್​ ಆಪ್ತರು ತಿಳಿಸಿದ್ದಾರೆ.

One Reply to “ಸುದೀಪ್​ ಮನೆಯಲ್ಲಿ ಮುಕ್ತಾಯ ಹಂತದಲ್ಲಿ ಐಟಿ ಅಧಿಕಾರಿಗಳ ಪರಿಶೀಲನೆ; ನಾನು ಆರಾಮಾಗಿದ್ದೇನೆ ಎಂದ ಕಿಚ್ಚ”

Comments are closed.