ನಟ ಶ್ರೀಮುರುಳಿಗೆ ಜನ್ಮದಿನದ ಸಂಭ್ರಮ: ಅಭಿಮಾನಿಗಳಿಂದ ’37’ ನಾನಾ ಕೊಡುಗೆ

ಬೆಂಗಳೂರು: ನಟ ಶ್ರೀಮುರುಳಿ ಇಂದು 37ನೇ ವರ್ಷದ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿಕೊಂಡರು. ತಮ್ಮ ಮನೆಯಲ್ಲಿ ರಾತ್ರಿ ಮಕ್ಕಳು, ತಂದೆ-ತಾಯಿ, ಸ್ನೇಹಿತರೊಂದಿಗೆ ಸೇರಿ ಕೇಕ್​ ಕತ್ತರಿಸಿದರು.

ಇನ್ನು ಜಯನಗರದ ಶಾಲಿನಿ ಆಟದ ಮೈದಾನದಲ್ಲಿ ಅಭಿಮಾನಿಗಳು 37 ಕೆಜಿ ತೂಕದ ಸ್ಪೆಷಲ್​ ಕೇಕ್​ ಕತ್ತರಿಸಿದರು. 37 ಅಂಗವಿಕಲರಿಗೆ ಧನ ಸಹಾಯ ಮಾಡಿದರು. 37 ಮಂಗಳಮುಖಿಯರಿಗೆ ಸೀರೆ ಹಂಚಿದರು. 37 ಸಾವಿರ ರೂಪಾಯಿ ಪಟಾಕಿ ಸಿಡಿಸಿ ಸಂಭ್ರಮಪಟ್ಟರು.
ಇಂದು ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಆಟದ ಮೈದಾನದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.

ಮದಗಜ ಟೀಸರ್ ಬಿಡುಗಡೆ
ಶ್ರೀಮುರುಳಿಗೆ ಬರ್ತ್​ಡೇ ಗಿಫ್ಟ್​ ಆಗಿ ಭರಾಟೆ ಟೀಸರ್​ ಹಾಗೂ ಮದಗಜ ಫಸ್ಟ್​ ಲುಕ್​ ಬಿಡುಗಡೆಯಾಗಲಿದ್ದು ಸಂಜೆ 7 ಗಂಟೆಗೆ ದರ್ಶನ್​ ಬಿಡುಗಡೆ ಮಾಡಲಿದ್ದಾರೆ.