More

    ನನ್ನ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ನಟ ಪ್ರಕಾಶ್​ ರಾಜ್​ ಟ್ವೀಟ್​: ಪಟ್ಟಿಯಲ್ಲಿ ಮಾಜಿ ಸಿಎಂ ಎಚ್​ಡಿಕೆ ಹೆಸರು

    ಬೆಂಗಳೂರು: ನನ್ನ ಹತ್ಯೆಗೆ ಕೆಲವರು ಸಂಚು ರೂಪಿಸಿದ್ದಾರೆ ಎಂದು ನಟ ಪ್ರಕಾಶ್​ರಾಜ್​ ಟ್ವೀಟ್​ ಮಾಡಿದ್ದಾರೆ.

    ಧರ್ಮ ದ್ರೋಹಿ ಹಾಗೂ ದೇಶ ದ್ರೋಹಿಗಳನ್ನು ಹತ್ಯೆ ಮಾಡೇ ಮಾಡುತ್ತೇವೆ ಎಂದು ಅನಾಮಧೇಯನೊಬ್ಬ ಪತ್ರ ಬರೆದಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

    ಅನಾಮಧೇಯ ಬರೆದಿರುವ ಪತ್ರದಲ್ಲಿ 15 ಮಂದಿ ಹೆಸರು ಇದೆ. ಅದರಲ್ಲಿ , ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ, ನಿಜಗುಣಾನಂದ ಸ್ವಾಮೀಜಿ, ನಟ ಪ್ರಕಾಶ್​ರಾಜ್​, ಭಜರಂಗದಳದ ಮಾಜಿ ಮುಖಂಡ ಮಹೇಂದ್ರ ಕುಮಾರ್​, ಹಿರಿಯ ಸಾಹಿತಿ ಚಂದ್ರಶೇಖರಪಾಟೀಲ್, ಅಗ್ನಿಶ್ರೀಧರ್​, ನಟ ಚೇತನ್​ ​ ಸೇರಿದಂತೆ 15 ಮಂದಿ ಹೆಸರು ಉಲ್ಲೇಖಿಸಲಾಗಿದೆ.

    ಇವರನ್ನು ಧರ್ಮ ಹಾಗೂ ದೇಶ ದ್ರೋಹಿಗಳೆಂದು ಉಲ್ಲೇಖಿಸಿ ಹತ್ಯೆ ಮಾಡುವುದಾಗಿ ಪತ್ರದಲ್ಲಿ ಬರೆದಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts