ಬೆಂಬಲಿಸುವಂತೆ ಕಾಂಗ್ರೆಸ್​ಗೆ ರೈ ದುಂಬಾಲು!

ಬೆಂಗಳೂರು: ಲೋಕಸಭೆ ಚುನಾವಣೆ ಕಣ ನಿಧಾನವಾಗಿ ಮಗ್ಗುಲನ್ನು ಬದಲಿಸಲಾರಂಭಿಸಿದೆ. ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಯಲು ಉತ್ಸುಕರಾಗಿರುವ ‘ಜಸ್ಟ್ ಆಸ್ಕಿಂಗ್’ ಖ್ಯಾತಿಯ ನಟ ಪ್ರಕಾಶ್ ರೈ ಹಪಾಹಪಿ ಕಾಂಗ್ರೆಸ್ ನಾಯಕರಿಗೆ ಕಿರಿಕಿರಿ ಉಂಟುಮಾಡಿದೆ. ಇದನ್ನು ಕೈ ನಾಯಕರೇ ಹೇಳಿಕೊಂಡಿದ್ದಾರೆ.

ಜನವರಿ ಆರಂಭದಲ್ಲೇ ಪಕ್ಷೇತರ ಅಭ್ಯರ್ಥಿ ಯಾಗಿ ಕಣಕ್ಕಿಳಿಯುವುದಾಗಿ ಪ್ರಕಾಶ್ ರೈ ಘೋಷಿಸಿ ಕೊಂಡಿದ್ದರು. ಇತ್ತೀಚೆಗೆ ಕಾಂಗ್ರೆಸ್ ನಾಯಕರ ಮನೆ ಸುತ್ತುತ್ತಿದ್ದು, ತಮ್ಮನ್ನು ಬೆಂಬಲಿಸಬೇಕೆಂದು ಒತ್ತಡ ಹೇರಲಾರಂಭಿಸಿದ್ದಾರೆ.

ಬಿಜೆಪಿ ಸೋಲಿಸುವುದೇ ನನ್ನ ಗುರಿ, ನೀವು ನನ್ನನ್ನು ಬೆಂಬಲಿಸಲೇಬೇಕು ಎಂದು ಮನವಿ ಮಾಡುತ್ತಿದ್ದಾರೆ. ‘ಇದು ರಾಷ್ಟ್ರೀಯ ಪಕ್ಷ, ಇಲ್ಲಿಯದೇ ಶಿಷ್ಟಾಚಾರಗಳಿರುತ್ತವೆ. ಈಗ ಏಕಾಏಕಿ ಬೆಂಬಲಿಸಿ ಎಂದು ಬಂದರೆ ಎಷ್ಟು ಸರಿ, ಅವರು ಅರ್ಥಮಾಡಿಕೊಳ್ಳ ಬೇಕು’ ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನೂ ಭೇಟಿ ಮಾಡಿರುವ ರೈ, ಬೆಂಬಲಕ್ಕೆ ನಿಲ್ಲುವಂತೆ ಕೋರಿದ್ದಾರೆ. ಈ ಕೋರಿಕೆಯನ್ನು ಸಿದ್ದರಾಮಯ್ಯ ನಯವಾಗಿ ತಿರಸ್ಕರಿಸಿ ಕಳಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭೇಟಿ ಮಾಡಿರುವ ಪ್ರಕಾಶ್ ಆಫರ್ ಮುಂದಿಟ್ಟಿದ್ದಾರೆ. ಅವರೂ ಪಕ್ಷದ ಸ್ಪಷ್ಟ ನಿಲುವು ತಿಳಿಸಿ ಕಳಿಸಿದ್ದಾರೆ.

ದಿನೇಶ್ ಸ್ಪಷ್ಟನೆ: ಕಾಂಗ್ರೆಸ್ ತನಗೆ ಬೆಂಬಲ ನೀಡಬೇಕೆಂದು ಸಿದ್ದರಾಮಯ್ಯ ಜತೆಯೂ ಪ್ರಕಾಶ್ ರೈ ಚರ್ಚೆ ಮಾಡಿದ್ದಾರೆ. ಕಾಂಗ್ರೆಸ್ ಬೆಂಬಲ ಕೊಡಿ ಅಂತ ಹೇಳಿದರೆ ಆಗಲ್ಲ. ಅವರು ಪಾರ್ಟಿಗೆ ಸೇರ್ಪಡೆಯಾದರೆ ನೋಡಬಹುದು. ಇದೇ ಕ್ಷೇತ್ರ ಬೇಕೆಂದರೆ ಅದೂ ಸಾಧ್ಯವಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷ, ಪರೋಕ್ಷ ಬೆಂಬಲ ಕೊಡಲು ಆಗಲ್ಲ. ಈಗಾಗಲೇ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳುವುದು ತೀರ್ವನವಾಗಿದೆ ಎಂದು ದಿನೇಶ್ ಗುಂಡೂರಾವ್ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು. ಅವರು ಸ್ವತಂತ್ರವಾಗಿಯೇ ಕಣಕ್ಕಿಳಿಯಲು ಮುಂದಾಗಿದ್ದಾರೆ, ನಾವು ಎಲ್ಲೆಲ್ಲಿ ಅಭ್ಯರ್ಥಿ ಹಾಕಬೇಕೋ ಅಲ್ಲೆಲ್ಲ ಹಾಕುತ್ತೇವೆ ಎಂದು ಸ್ಪಷ್ಟ ನುಡಿಗಳಲ್ಲಿ ಪ್ರಕಾಶ್ ರೈ ಬೇಡಿಕೆಯನ್ನು ತಿರಸ್ಕರಿಸಿರುವುದನ್ನು ದಿನೇಶ್ ಸ್ಪಷ್ಟಪಡಿಸಿದರು.

ಸೆಂಟ್ರಲ್​ನಲ್ಲಿ ಪೈಪೋಟಿ ಯಾರಿಗೆ?

ಪ್ರಕಾಶ್ ರೈ ಕಣ್ಣಿಟ್ಟಿರುವ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲು ವಿಧಾನಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ಪ್ರಮುಖ ಆಕಾಂಕ್ಷಿ. ಪಕ್ಷದ ನಾಲ್ವರು ಶಾಸಕರು, 21 ಕಾಪೋರೇಟರ್​ಗಳು ಇವರ ಪರವಾಗಿ ಎಐಸಿಸಿ ಉಸ್ತುವಾರಿಗಳಿಗೆ ಲಿಖಿತ ಅಭಿಪ್ರಾಯ ನೀಡಿದ್ದಾರೆ. ಶಾಸಕ ರೋಷನ್ ಬೇಗ್ ಕೂಡ ಟಿಕೆಟ್ ಆಕಾಂಕ್ಷಿ. ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನವನ್ನಂತೂ ಕೊಡಲಿಲ್ಲ, ಲೋಕಸಭೆ ಟಿಕೆಟ್​ನ್ನಾದರೂ ಕೊಡಿ. ಶಿವಾಜಿನಗರ ಕ್ಷೇತ್ರದಿಂದ ಮಗನನ್ನು ಗೆಲ್ಲಿಸಿಕೊಂಡು ಬರುವುದಾಗಿ ನಾಯಕರ ಮುಂದೆ ವಾದ ಮುಂದಿಟ್ಟಿದ್ದಾರೆ. ಕಳೆದ ಚುನಾವಣೆಯಲ್ಲಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ರಿಜ್ವಾನ್, ನಾಲ್ಕೂವರೆ ವರ್ಷಗಳಿಂದ ಸರ್ಕಾರದ ಯಾವುದೇ ಸ್ಥಾನ ಪಡೆಯದೆ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿರುವುದು ನಾಯಕರ ಅರಿವಿನಲ್ಲಿದೆ. ಈ ನಡುವೆ ಸಾಂಗ್ಲಿಯಾನ, ಬಿ.ಕೆ. ಹರಿಪ್ರಸಾದ್ ಕೂಡ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

2 Replies to “ಬೆಂಬಲಿಸುವಂತೆ ಕಾಂಗ್ರೆಸ್​ಗೆ ರೈ ದುಂಬಾಲು!”

  1. Prakash Rai is a Pidi no 2 of Raga. He is expecting votes from Islamabad Kabul, Mecca and Rome. He is religious sickular and mentally suffering from mental disorder. He is having rabies and may bite anybody then take 14 or go mad. He is another HAJ of gujrath by cong use and throw policy( Hardik Alpesh and Jigani) only one trick in India condemn Modi and make minority happy Kanhaiyalal theory of Tukde Tukde game. We should keep more distance from this type of politicians also called social worker they are more dangerous than Afzal Guru

  2. Takattidre obbare nintu gelli Prakash Raj..
    Idu gully cricket alla, rope hakondu batting nan madtini annoke..

Comments are closed.