PHOTOS| ಅಂಬರಕ್ಕೆ ಅಮರಜ್ಯೋತಿ

Latest News

ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿಯಾಗಿ ಶರದ್​ ಅರವಿಂದ್​ ಬೊಬ್ಡೆ ಪ್ರಮಾಣವಚನ: ರಾಷ್ಟ್ರಪತಿ ಭವನದಲ್ಲಿ ಕಾರ್ಯಕ್ರಮ

ನವದೆಹಲಿ: ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿಯಾಗಿ ಶರದ್​ ಅರವಿಂದ್​ ಬೊಬ್ಡೆ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ...

ಉದ್ಯೋಗ ಕೊಡಿಸಲು ಸಹಾಯ ಮಾಡಲಿಲ್ಲ ಎಂದು ತನ್ವೀರ್​ ಸೇಠ್​ ಹತ್ಯೆಗೆ ಯತ್ನ: ಆರೋಪಿಯ ಗೊಂದಲದ ಹೇಳಿಕೆ

ಮೈಸೂರು: ಉದ್ಯೋಗ ಕೊಡಿಸಲು ಸಹಾಯ ಮಾಡಲಿಲ್ಲ ಎಂಬ ಕಾರಣಕ್ಕೆ ಶಾಸಕ ತನ್ವೀರ್​ ಸೇಠ್​ ಅವರನ್ನು ಹತ್ಯೆ ಮಾಡಲು ಯತ್ನಿಸಿದ್ದಾಗಿ ಆರೋಪಿ ಫರಾನ್​ ಪಾಷಾ...

ಕನಕದಾಸ ಸರ್ಕಲ್​ ನಾಮಫಲಕ ತೆರವು ಹಿನ್ನೆಲೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಎರಡು ಸಮುದಾಯಗಳ ನಡುವೆ ಗಲಾಟೆ

ತುಮಕೂರು: ಕನಕದಾಸ ಸರ್ಕಲ್​ ಹೆಸರಿನ ನಾಮಫಲಕ ತೆರವು ವಿಚಾರವಾಗಿ ನಡೆದ ಗಲಾಟೆ ಹಿನ್ನೆಲೆಯಲ್ಲಿ ಎರಡು ಸಮುದಾಯದ ನಡುವೆ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಮತ್ತೊಮ್ಮೆ...

ಜಮ್ಮು ಮತ್ತು ಕಾಶ್ಮೀರದ ಅಖ್ನೂರ್​ ವಲಯದಲ್ಲಿ ಶಂಕಾಸ್ಪದ ಸ್ಫೋಟ: 1 ಯೋಧ ಹುತಾತ್ಮ, ಇನ್ನಿಬ್ಬರಿಗೆ ಗಂಭೀರ ಗಾಯ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅಖ್ನೂರ್​ ವಲಯದಲ್ಲಿ ಭಾನುವಾರ ಸಂಜೆ ಸಂಭವಿಸಿದ ಶಂಕಾಸ್ಪದ ಸ್ಫೋಟದಲ್ಲಿ ಭಾರತೀಯ ಸೇನಾಯಪಡೆಯ ಒಬ್ಬ ಯೋಧ ಹುತಾತ್ಮರಾಗಿದ್ದು, ಇನ್ನಿಬ್ಬರು...

ಆಸ್ಟ್ರೇಲಿಯಾದ ಮಹಿಳೆಯೊಬ್ಬರು ದಿನಕ್ಕೊಂದು ಮೀಸೆ ಧರಿಸುತ್ತಿದ್ದಾರೆ, ಇದಕ್ಕೆ ಕಾರಣ ಇಲ್ಲಿದೆ ನೋಡಿ

ನವದೆಹಲಿ: ನವೆಂಬರ್​ ಬಂತೆಂದರೆ ಪುರುಷರು ನೋ ಶೇವ್​ ನವೆಂಬರ್​ ಅಭಿಯಾನ ಆರಂಭಿಸುತ್ತಾರೆ. ಒಂದು ತಿಂಗಳು ಅವರು ಯಾವುದೇ ಕಾರಣಕ್ಕೂ ಗಡ್ಡ, ಮೀಸೆ ಬೋಳಿಸದೆ,...

ಹಿರಿಯ ನಟ-ರಾಜಕಾರಣಿ ಅಂಬರೀಷ್ ಲಕ್ಷಾಂತರ ಅಭಿಮಾನಿಗಳು, ಆಪ್ತರು, ಕುಟುಂಬ ಸದಸ್ಯರ ಕಂಬನಿ ನಡುವೆಯೇ ಸೋಮವಾರ ಸಂಜೆ ಪಂಚಭೂತಗಳಲ್ಲಿ ಲೀನರಾದರು. ನಗರದ ಕಂಠೀರವ ಸ್ಟುಡಿಯೋದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅಂಬರೀಷ್ ಪುತ್ರ ಅಭಿಷೇಕ್ ಗೌಡ ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

ರಾಜ್ ಪಕ್ಕ ಅಂಬಿ

ಕಂಠೀರವ ಸ್ಟುಡಿಯೋದಲ್ಲಿ ವರನಟ ಡಾ.ರಾಜ್​ಕುಮಾರ್ ಸಮಾಧಿ ಇರುವ 50 ಮೀಟರ್ ದೂರದಲ್ಲಿನ ಜಾಗದಲ್ಲಿ ಅಂಬರೀಷ್ ಅವರ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

13 ಕಿ.ಮೀ ಯಾತ್ರೆ

ಮಧ್ಯಾಹ್ನ 12.30ಕ್ಕೆ ಕಂಠೀರವ ಕ್ರೀಡಾಂಗಣದಿಂದ ಹೊರಟ ಅಂತಿಮ ಯಾತ್ರೆಗೆ ಲಕ್ಷಾಂತರ ಅಭಿಮಾನಿಗಳು ಸಾಕ್ಷಿಯಾದರು. 13 ಕಿ.ಮೀ ಅಂತರದ ರಸ್ತೆಯ ಇಕ್ಕೆಲಗಳಲ್ಲಿ ನಿಂತು ನೆಚ್ಚಿನ ನಟನಿಗೆ ಕಣ್ಣೀರ ವಿದಾಯ ಹೇಳಿದರು.

ಬುಲ್​ಬುಲ್ ಮಾತಾಡಕ್ಕಿಲ್ವ

‘ಬುಲ್ ಬುಲ್ ಮಾತಾಡಕ್ಕಿಲ್ವ’ ಎಂಬ ಅಂಬರೀಷ್ ಡೈಲಾಗ್ ಮೆರವಣಿಗೆಯಲ್ಲಿ ಮಾರ್ದನಿಸಿತು. ಅಂಬಿಗೆ ಜೈಕಾರ ಕೂಗುತ್ತಲೇ ಅಭಿಮಾನಿಗಳು ‘ನಮ್ಮ ಬುಲ್ ಬುಲ್ ಇನ್ನು ಮಾತಾಡಕ್ಕಿಲ್ಲ’ ಎಂದು ಕಣ್ಣೀರಿಟ್ಟ ದೃಶ್ಯ ಹೃದಯ ಕಲಕುವಂತಿತ್ತು.

ಕಂಬನಿ ಮಿಡಿದ ಗಣ್ಯರು

ಸಿಎಂ ಎಚ್.ಡಿ. ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ, ಹಿರಿಯ ಕಲಾವಿದರಾದ ಬಿ.ಸರೋಜಾದೇವಿ, ಜಯಂತಿ, ಶಿವರಾಜ್ ಕುಮಾರ್, ರವಿಚಂದ್ರನ್ ಸೇರಿ ನೂರಾರು ಗಣ್ಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.


ಅಭಿಮಾನಿಗಳ ಹೃದಯದಲ್ಲಿ ಅಂಬಿ ಲೀನ

ಬೆಂಗಳೂರು: ಗೋವಿಂದ ನಾಮಸ್ಮರಣೆ, ಅಭಿಮಾನಿಗಳ ಜಯಘೋಷದ ನಡುವೆ ರೆಬೆಲ್​ಸ್ಟಾರ್ ಅಂಬರೀಷ್ ಪಂಚಭೂತಗಳಲ್ಲಿ ಲೀನವಾದರು. ಆ ಮೂಲಕ ಕನ್ನಡ ಚಿತ್ರರಂಗದ ಹಿರಿಯ ತಲೆಮಾರಿನ ಬಹುದೊಡ್ಡ ಕೊಂಡಿ ಕಳಚಿದಂತಾಯಿತು. ಅನಾರೋಗ್ಯದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಮೃತಪಟ್ಟ ಅಂಬರೀಷ್ ಅಂತ್ಯಸಂಸ್ಕಾರ ಕಂಠೀರವ ಸ್ಟುಡಿಯೋದಲ್ಲಿ ಸೋಮವಾರ ಸಂಜೆ ನೆರವೇರಿತು. ಲಕ್ಷಾಂತರ ಅಭಿಮಾನಿಗಳ ನೋವಿನ ಕೂಗು, ಗಣ್ಯರ ಅಶ್ರುತರ್ಪಣ ನಡುವೆಯೇ ಹಿಂದು ಸಂಪ್ರದಾಯದಂತೆ ವಿವಿಧ ಮರಗಳ ಕಟ್ಟಿಗೆಗಳಿಂದ ನಿರ್ವಿುಸಲಾಗಿದ್ದ ಚಿತೆಯಲ್ಲಿ ಅಂಬರೀಷ್ ಪಾರ್ಥಿವ ಶರೀರಕ್ಕೆ ಪುತ್ರ ಅಭಿಷೇಕ್ ಅಗ್ನಿ ಸ್ಪರ್ಶ ಮಾಡಿದರು. ಇದರೊಂದಿಗೆ ಅಂಬರೀಷ್ ಎಂಬ ವರ್ಣರಂಜಿತ ರಾಜಕಾರಣಿ, ಕಲರ್​ಫುಲ್ ನಟನ ಇಹಲೋಕದ ಪಯಣ ಮುಕ್ತಾಯಗೊಂಡಿತು.

ರಾತ್ರಿಯಿಂದಲೇ ಸಿದ್ಧತೆ: ಸರ್ಕಾರದ ನಿರ್ಧಾರದಂತೆ, ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಸಂಸ್ಕಾರಕ್ಕೆ ಅಗತ್ಯ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಯಿತು. ಭಾನುವಾರ ರಾತ್ರಿಯೇ ಚಿತೆಯ ಕಟ್ಟೆ ನಿರ್ಮಾಣ ಮಾಡಲಾಗಿತ್ತು. ಅಂತ್ಯಸಂಸ್ಕಾರಕ್ಕೆ ಬೇಕಾದ ಕಟ್ಟಿಗೆ, ಬರುವ ಗಣ್ಯರು ಹಾಗೂ ಸಾರ್ವಜನಿಕರಿಗಾಗಿ ಆಸನದ ವ್ಯವಸ್ಥೆಯನ್ನು ಪ್ರತ್ಯೇಕವಾಗಿ ಮಾಡಲಾಗಿತ್ತು. ಒಟ್ಟು 6 ಸಾವಿರ ಕುರ್ಚಿಗಳನ್ನು ಹಾಕಲಾಗಿತ್ತು. ಯಾವುದೇ ಗೊಂದಲ ಉಂಟಾಗದಂತೆ ಬ್ಯಾರಿಕೇಡ್​ಗಳನ್ನು ಅಳವಡಿಸಲಾಗಿತ್ತು. ಅದರ ನಡುವೆಯೇ ರಘುಪತಿ ರಾಘವ ರಾಜಾರಾಂ ಹಾಡು ಗುನುಗುತ್ತಿತ್ತು.

ಸರ್ಕಾರಿ ಗೌರವ

ಅಂತ್ಯಸಂಸ್ಕಾರಕ್ಕೂ ಮುನ್ನ 21 ಸುತ್ತು ಕುಶಾಲ ತೋಪುಗಳನ್ನು ಹಾರಿಸಿ, ಪೊಲೀಸ್ ಬ್ಯಾಂಡ್ ಮೂಲಕ ರಾಷ್ಟ್ರಗೀತೆ ನುಡಿಸಿ ಅಂಬರೀಷ್​ಗೆ ಸರ್ಕಾರಿ ಗೌರವಗಳನ್ನು ಸಲ್ಲಿಸಲಾಯಿತು.

ಎಚ್​ಡಿಕೆ ಉಸ್ತುವಾರಿ

ಅಂಬರೀಷ್ ನಿಧನ ಹೊಂದಿದ ವೇಳೆಯಿಂದ ಅಂತ್ಯಕ್ರಿಯೆ ಪೂರ್ಣಗೊಳ್ಳುವವರೆಗೆ ರಾಜ್ಯ ಸರ್ಕಾರ ಹಾಗೂ ಖುದ್ದು ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರೇ ಸಂಪೂರ್ಣ ಉಸ್ತುವಾರಿ ನೋಡಿಕೊಂಡರು. ಶನಿವಾರ ರಾತ್ರಿ ಅಂಬಿ ನಿಧನ ಹೊಂದಿದ ಆಸ್ಪತ್ರೆಯಲ್ಲಿ ಮೊಕ್ಕಾಂ ಹೂಡಿದ್ದ ಸಿಎಂ, ಮಧ್ಯರಾತ್ರಿ 3 ಗಂಟೆ ವರೆಗೆ ಅಲ್ಲೇ ಇದ್ದರು. ಅಲ್ಲದೆ ಮರುದಿನ ಅಂತಿಮದರ್ಶನಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪೊಲೀಸರು, ಅಧಿಕಾರಿಗಳಿಗೆ ಸೂಚನೆ ನೀಡಿದರು. ಭಾನುವಾರ ಬೆಳಗ್ಗೆಯೇ ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸಿ, ಕೈಗೊಳ್ಳಲಾದ ಕ್ರಮಗಳ ಕುರಿತು ಪರಿಶೀಲಿಸಿದರು. ನಂತರ ಅಭಿಮಾನಿಗಳ ಒತ್ತಾಸೆಗೆ ಮಣಿದು ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋಗಲು ಮುತುವರ್ಜಿವಹಿಸಿದರು. ತಾವೂ ಮಂಡ್ಯಕ್ಕೆ ತೆರಳಿ ಅಲ್ಲಿಂದ ವಾಪಸಾಗುವವರೆಗೂ ಜತೆಗಿದ್ದರು. ಅಂತ್ಯಸಂಸ್ಕಾರ ನಡೆಸಲಾದ ಕಂಠೀರವ ಸ್ಟುಡಿಯೋಗೆ ಬಂದು ಅಲ್ಲಿ ಮಾಡಬೇಕಾದ ವ್ಯವಸ್ಥೆ ಬಗ್ಗೆ ಅಧಿಕಾರಿಗಳಿಗೆ ಸೂಚನೆ ಕೊಟ್ಟರು. ಸಿಎಂಗೆ ಸಚಿವ ಡಿ.ಕೆ.ಶಿವಕುಮಾರ್, ಶಾಸಕ ಗೋಪಾಲಯ್ಯ, ನಿರ್ವಪಕ ರಾಕ್​ಲೈನ್ ವೆಂಕಟೇಶ್, ನಿರ್ದೇಶಕ ಎಸ್.ನಾರಾಯಣ್ ಸಾಥ್ ನೀಡಿದರು.

ರಾಜ್ ಪಕ್ಕದಲ್ಲೇ ಅಂಬಿ

ಡಾ.ರಾಜ್​ಕುಮಾರ್ ಸಮಾಧಿಯಿಂದ 50 ಮೀಟರ್ ದೂರದಲ್ಲಿನ ಜಾಗದಲ್ಲಿ ಅಂಬರೀಷ್ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಇಲ್ಲಿರಾಜ್ ಸ್ಮಾರಕ ಮಾದರಿ ಅಭಿವೃದ್ಧಿಪಡಿಸುವುದಾಗಿ ಸರ್ಕಾರ ಘೋಷಿಸಿದೆ.

ಚಿತೆಯ ಕಟ್ಟೆ ತುಂಬ ಅಂಬಿ

ಚಿತೆ ಕಟ್ಟೆಯ ತುಂಬೆಲ್ಲ ಅಂಬರೀಷ್ ಚಿತ್ರವನ್ನು ಬಿಡಿಸಲಾಗಿತ್ತು. ‘ಕಲಿಯುಗದ ಕರ್ಣ ಕಾಲದಲ್ಲಿ ಕರಗಿ ಹೋದೆಯಾ’, ‘ಪಂಚಭೂತಗಳಲ್ಲಿ ಲೀನವಾದ ದೊಡ್ಡರಸಿನಕೆರೆ ಎಂ.ಹುಚ್ಚೇಗೌಡರ ಪುತ್ರರತ್ನ’ ಅಡಿಬರಹ ದೊಂದಿಗೆ ಅಂಬಿ ಚಿತ್ರಗಳನ್ನು ವಿಕ್ಕಿ ಆರ್ಟ್ಸ್ ಕಲಾವಿದರು ಬಿಡಿಸಿದ್ದರು. ಶಾಸಕ ಮುನಿರತ್ನ ಈ ಬಗೆಯ ಚಿತ್ರಗಳನ್ನು ಬಿಡಿಸುವಂತೆ ಹೇಳಿದ್ದರು.

ರಾಷ್ಟ್ರಧ್ವಜ ಸ್ವೀಕಾರ

ನಿಯಮದಂತೆ ಅಂಬರೀಷ್ ಪಾರ್ಥಿವ ಶರೀರದ ಮೇಲೆ ಹೊದಿಸಲಾಗಿದ್ದ ರಾಷ್ಟ್ರಧ್ವಜವನ್ನು ಸಿಎಂ ಕುಮಾರಸ್ವಾಮಿ, ಅಂಬರೀಷ್ ಪತ್ನಿ ಸುಮಲತಾ ಮತ್ತು ಪುತ್ರ ಅಭಿಷೇಕ್​ಗೆ ನೀಡಿದರು. ಕಣ್ಣೀರು ಹಾಕುತ್ತಲೇ ರಾಷ್ಟ್ರಧ್ವಜಕ್ಕೆ ಸುಮಲತಾ ನಮಸ್ಕರಿಸಿದರು.

ಕೆನ್ನೆಗೆ ಮುತ್ತು ಕಾಲಿಗೆ ನಮಸ್ಕಾರ

ಚಿತೆಯಲ್ಲಿದ್ದ ಅಂಬರೀಷ್ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡುವುದಕ್ಕೂ ಮುನ್ನ ಕೊನೇ ಬಾರಿಗೆ ಸುಮಲತಾ, ಅಂಬರೀಷ್ ಕೆನ್ನೆಗೆ ಕಣ್ಣೀರು ಹಾಕುತ್ತಲೇ ಮುತ್ತಿಕ್ಕಿದರು. ನಂತರ ಪತಿ ಕಾಲಿಗೆ ನಮಸ್ಕರಿಸಿದರು. ಅಭಿಷೇಕ್ ಕೂಡ ತಂದೆ ಮುಖದ ಮೇಲೆ ಮುಖವಿಟ್ಟು ಗಳಗಳನೆ ಅತ್ತರು. ಈ ದೃಶ್ಯ ನೋಡಿ ನೆರೆದಿದ್ದವರ ಕಣ್ಣಾಲಿಗಳು ತೇವಗೊಂಡವು.

ಕುಸಿದು ಬಿದ್ದ ಸುಮಲತಾ

ಪತಿ ಅಗಲಿಕೆ ಅರಗಿಸಿಕೊಳ್ಳಲಾಗದ ಸುಮಲತಾ ಸೋಮವಾರ ಸಂಜೆ ಕಂಠೀರವ ಸ್ಟುಡಿಯೋದೊಳಗೆ ಪಾರ್ಥಿವ ಶರೀರ ತರುತ್ತಿದ್ದಂತೆ ಕುಸಿದು ಬಿದ್ದರು. ಅವರನ್ನು ನಟರಾದ ದರ್ಶನ್, ಯಶ್ ಇನ್ನಿತರರು ಕುರ್ಚಿ ಮೇಲೆ ಕೂರಿಸಿ ಆರೈಕೆ ಮಾಡಿದರು. ಅದೇ ರೀತಿ ಅಂಬರೀಷ್ ಸಂಬಂಧಿಕರೊಬ್ಬರು ಕುಸಿದು ಬಿದ್ದಿದ್ದು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.

ಸೋನಿಯಾ ಗಾಂಧಿ ಸಂತಾಪ ಸಂದೇಶ

ಅಂಬರೀಷ್ ನಿಧನಕ್ಕೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕಂಬನಿ ಮಿಡಿದಿದ್ದಾರೆ. ಅವರು ಶೋಕ ಸಂದೇಶವನ್ನು ಪತ್ರ ಮುಖೇನ ಕಳಿಸಿದ್ದು, ಅಂಬರೀಷ್ ಪುತ್ರ ಅಭಿಷೇಕ್​ಗೆ ಅದನ್ನು ಗುಲಾಂನಬಿ ಆಜಾದ್ ಹಾಗೂ ಕೆ.ಸಿ.ವೇಣುಗೋಪಾಲ್ ತಲುಪಿಸಿದರು. ಪಕ್ಷಕ್ಕಾಗಿ ಅಂಬರೀಷ್​ರ ಕೊಡುಗೆಯನ್ನು ಮರೆಯುವುದಿಲ್ಲ. ಅವರ ನಿಧನದಿಂದ ನಾಡಿಗೆ, ಪಕ್ಷಕ್ಕೆ ಅಪಾರ ನಷ್ಟವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

50 ಕೆಜಿ ಶ್ರೀಗಂಧ

30 ಕಿಲೋ ತುಪ್ಪ

10 ಕೆಜಿ ಕೊಬ್ಬರಿ

ಆದಿಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಅಂತ್ಯಸಂಸ್ಕಾರ ನೆರವೇರಿಸಿದ್ದ ಶ್ರೀರಂಗಪಟ್ಟಣದ ಭಾನುಪ್ರಕಾಶ ಶರ್ಮಾ ಅವರ 9 ಶಿಷ್ಯರು ಅಂಬರೀಷ್ ಅಂತ್ಯಸಂಸ್ಕಾರದ ವಿಧಿವಿಧಾನ ನಡೆಸಿದರು. ಚಿತ್ರರಂಗದ ಗಣ್ಯರು, ಸಚಿವರು, ಮಾಜಿ ಸಿಎಂಗಳು, ಚಿತೆಗೆ ಒಂದೊಂದೆ ಕಟ್ಟಿಗೆಗಳನ್ನಿಟ್ಟರು. ರುದ್ರ ಪಾರಾಯಣ, ಪುರುಷ ಸೂಕ್ತ, ವಿಷ್ಣು ಸಹಸ್ರನಾಮ ಸ್ತ್ರೋತ್ರಗಳನ್ನು ಪಠಿಸಿ ಧಾರ್ವಿುಕ ವಿಧಿವಿಧಾನಗಳನ್ನು ಪೂರೈಸಿದರು. ಅಂತ್ಯಕ್ರಿಯೆಗೆ 50 ಕೆಜಿ ಶ್ರೀಗಂಧ, ಅರಳಿ, ಬೇವು, ಅತ್ತಿ, ನೀಲಗಿರಿ ಮರಗಳ ತುಂಡು, 30 ಕೆಜಿ ತುಪ್ಪ, 10 ಕೆಜಿ ಕೊಬ್ಬರಿ, ಕರ್ಪರ, ಬೆರಣಿ ಸೇರಿ ಇನ್ನಿತರ ವಸ್ತುಗಳನ್ನು ಬಳಸಲಾಗಿತ್ತು.

ಎಣ್ಣೆ, ನಾಟಿ ಕೋಳಿ ಸಾರು ತಂದ್ರು!

ಅಂಬರೀಷ್ ಅಂತ್ಯಸಂಸ್ಕಾರಕ್ಕೆ ಬಂದಿದ್ದ ಅಭಿಮಾನಿಗಳಲ್ಲಿ ಕೆಲವರು ನೆಚ್ಚಿನ ನಟನಿಗೆ ಇಷ್ಟ ಎಂದು ಮದ್ಯ ಮತ್ತು ನಾಟಿ ಕೋಳಿ ಸಾರು ಮಾಡಿಕೊಂಡು ಬಂದಿದ್ದರು. ಪೊಲೀಸರು ಭದ್ರತೆ ದೃಷ್ಟಿಯಿಂದ ಕಂಠೀರವ ಸ್ಟುಡಿಯೋ ಒಳಗೆ ತೆಗೆದುಕೊಂಡು ಹೋಗಲು ಬಿಡಲಿಲ್ಲ.

ಜಾಗ ಗುರುತಿಸಿದ್ದು ಯಶ್, ನಿಖಿಲ್

ಕಂಠೀರವ ಸ್ಟುಡಿಯೋದಲ್ಲಿ ಜಾಗವಿದೆ ಎಂಬುದನ್ನು ಗುರುತಿಸಿದ್ದ್ದು ನಟ ಯಶ್ ಮತ್ತು ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ. ಶನಿವಾರ ರಾತ್ರಿ ಅಂಬರೀಷ್ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಕಂಠೀರವ ಸ್ಟುಡಿಯೋಗೆ ಬಂದಿದ್ದ ಈ ಇಬ್ಬರು ನಟರು, ಜಾಗ ನೋಡಿ ಸಿಎಂಗೆ ಮಾಹಿತಿ ನೀಡಿದ್ದರು. ಆನಂತರವೇ ಕುಮಾರಸ್ವಾಮಿ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಸಂಸ್ಕಾರ ಮಾಡುವುದಾಗಿ ಘೋಷಿಸಿದ್ದು.

ಅಂತಿಮ ಕ್ಷಣಕ್ಕೆ ಸಾಕ್ಷಿಯಾದ ಗಣ್ಯರು…

ಅಂಬರೀಷ್ ಅಂತ್ಯಸಂಸ್ಕಾರದಲ್ಲಿ ರಾಜಕೀಯ, ಚಲನಚಿತ್ರರಂಗದ ದಿಗ್ಗಜರು ಪಾಲ್ಗೊಂಡಿದ್ದರು. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಡಿಸಿಎಂ ಡಾ.ಜಿ.ಪರಮೇಶ್ವರ್, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕಾಂಗ್ರೆಸ್ ನಾಯಕರಾದ ಗುಲಾಂನಭಿ ಆಜಾದ್, ಕೆ.ಸಿ.ವೇಣುಗೋಪಾಲ್, ಸುಶೀಲ್​ಕುಮಾರ್ ಶಿಂಧೆ, ಮಾಜಿ ಸಿಎಂಗಳಾದ ಎಸ್.ಎಂ.ಕೃಷ್ಣ, ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಡಿಸಿಎಂ ಆರ್.ಅಶೋಕ್, ಸಚಿವರಾದ ಕೆ.ಜೆ.ಜಾರ್ಜ್, ಎಚ್.ಡಿ.ರೇವಣ್ಣ, ಸಾ.ರಾ.ಮಹೇಶ್, ಡಿ.ಸಿ.ತಮ್ಮಣ್ಣ, ಪುಟ್ಟರಾಜು, ದೇಶಪಾಂಡೆ, ಜಯಮಾಲಾ, ಸಂಸದ ಡಿ.ಕೆ.ಸುರೇಶ್, ಎಂಎಲ್​ಸಿ ಶ್ರೀಕಂಠೇಗೌಡ, ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಚಲನಚಿತ್ರ ನಟರಾದ ಮೋಹನ್​ಬಾಬು, ಮಂಚು ವಿಷ್ಣು, ದರ್ಶನ್, ಶಿವರಾಜ್​ಕುಮಾರ್, ಪುನೀತ್ ರಾಜ್​ಕುಮಾರ್, ರವಿಚಂದ್ರನ್, ಯಶ್, ಅರ್ಜುನ್ ಸರ್ಜಾ, ಜಗ್ಗೇಶ್, ಪಂಚಭಾಷಾ ನಟಿಯರಾದ ಜಯಪ್ರದಾ, ಬಿ.ಸರೋಜಾದೇವಿ ಇನ್ನಿತರರು ಉಪಸ್ಥಿತರಿದ್ದರು.

ದೇವೇಗೌಡರನ್ನು ಕರೆತಂದ ಡಿಕೆಶಿ: ಪಾರ್ಥಿವ ಶರೀರಕ್ಕೆ ಸರ್ಕಾರಿ ಗೌರವ ನೀಡುವುದಕ್ಕೂ ಮುನ್ನ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಸಚಿವ ಡಿ.ಕೆ.ಶಿವಕುಮಾರ್, ಎಚ್.ಡಿ. ದೇವೇಗೌಡ ಬಳಿ ಹೋಗಿ ಕೈಹಿಡಿದು ಕರೆತಂದು ನಮನ ಸಲ್ಲಿಸಲು ನೆರವಾದರು.

ಅಕ್ಕ-ಪಕ್ಕದಲ್ಲಿ ಮಾಜಿ ಸಿಎಂಗಳು: ಅಂಬರೀಷ್ ಅಂತ್ಯಸಂಸ್ಕಾರದಲ್ಲಿ ಹಾಜರಿದ್ದ ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಯಡಿಯೂರಪ್ಪ ರಾಜಕೀಯ ವೈಷಮ್ಯ ಮರೆತು ಅಕ್ಕ-ಪಕ್ಕದಲ್ಲಿ ಕುಳಿತಿದ್ದರು. ಆದರೆ ಸಿಎಂ, ಡಿಸಿಎಂ ಮಾತ್ರ ಅವರ ವಿರುದ್ಧ ದಿಕ್ಕಿನಲ್ಲಿ ಕುಳಿತಿದ್ದರು.

ಕೈಮುಗಿದ ಅಭಿಷೇಕ್

ಮೃತದೇಹವನ್ನು ಕೊಂಡೊಯ್ಯಲು ಹೆಲಿಕಾಪ್ಟರ್ ಆಗಮಿಸಿದಾಗ ಅಭಿಷೇಕ್ ಕ್ರೀಡಾಂಗಣದ ಸುತ್ತಲು ತೆರಳಿ ಅಪ್ಪನ ಅಭಿಮಾನಿಗಳಿಗೆ ಕೈಮುಗಿದು ಕೃತಜ್ಞತೆ ಸಲ್ಲಿಸಿದರು. ಹಲವರು ಕಣ್ಣೀರು ಸುರಿಸುತ್ತ ಗೋಳಾಡಿದರೆ, ಅಭಿಮಾನಿಗಳು ‘ಮಂಡ್ಯ ಮರೆಯಬೇಡಿ ಅಣ್ಣ, ಮಂಡ್ಯದ ಗಂಡಿನಂತೆ ಮುನ್ನಡೆಯಿರಿ. ನಿಮ್ಮೊಟ್ಟಿಗೆ ನಾವಿದ್ದೇವೆ’ ಎಂದು ಘೋಷಣೆ ಕೂಗಿದರು. ಕೊನೆಯಲ್ಲಿ ಸುಮಲತಾ ಮತ್ತು ಅಭಿಷೇಕ್ ಕ್ರೀಡಾಂಗಣದ ಮಣ್ಣನ್ನು ತೆಗೆದು ಅಂಬರೀಷ್ ಹಣೆಗೆ ತಿಲಕವನ್ನಿಟ್ಟರಲ್ಲದೆ, ಒಂದಷ್ಟು ಮಣ್ಣನ್ನು ಬಟ್ಟೆಗೆ ಹಾಕಿಕೊಂಡು ಜತೆಯಲ್ಲಿ ಕೊಂಡೊಯ್ದರು. ಹೆಲಿಕಾಪ್ಟರ್​ಗೆ ಪಾರ್ಥಿವ ಶರೀರ ಇಡುವಾಗ ಕ್ರೀಡಾಂಗಣದ ಸುತ್ತಲು ನೆರೆದಿದ್ದ ಜನತೆ ಕೈ ಎತ್ತಿ ಮುಗಿದು, ಅಂತಿಮ ವಿದಾಯ ಸಲ್ಲಿಸಿ ಧನ್ಯತೆ ಪ್ರದರ್ಶಿಸಿದರು.


ಮಂಡ್ಯದ ಗಂಡಿಗೆ ಕಣ್ಣೀರಿನ ವಿದಾಯ

ಮಂಡ್ಯ: ‘ಹುಟ್ದೋರೆಲ್ಲಾ ಸಾಯ್ದೆ ಹೋದ್ರೆ ಹೆಂಗೆ ಹೇಳ್ರಣ್ಣ, ಮುಂದೆ ಹುಟ್ಟೋ ಮಂದಿಗೆಲ್ಲ ಜಾಗ ಬೇಡ್ವಣ್ಣ..’ ಹಾಡಿನಂತೆ ಅಂಬರೀಷ್ ಭೂ ಲೋಕ ತ್ಯಜಿಸಿದ್ದಾರೆ. ಆದರೆ ಅವರ ನೆನಪು ಅಭಿಮಾನಿಗಳು, ಜನರ ಮನಸ್ಸಿನಲ್ಲಿ

ಸ್ಥಿರವಾಗಿ ಉಳಿಯಿತು. ಭಾನುವಾರ ಸಂಜೆ 5ರಿಂದ ಸೋಮವಾರ ಬೆಳಗ್ಗೆ 11 ಗಂಟೆ ತನಕ ಸರ್ ಎಂವಿ ಕ್ರೀಡಾಂಗಣ ಹಾಗೂ ಹಲವು ಪ್ರದೇಶಗಳಲ್ಲಿ ಅಂಬಿಯ ಗುಣಗಾನವೇ ನಡೆಯಿತು. ವೃದ್ಧರು, ವಿದ್ಯಾರ್ಥಿಗಳು, ಮಹಿಳೆಯರು ಸೇರಿ ಅಂದಾಜು 2.5 ಲಕ್ಷಕ್ಕಿಂತ ಹೆಚ್ಚು ಮಂದಿ ಅಂತಿಮ ದರ್ಶನ ಪಡೆದು ಕಣ್ಣೀರ ಕೋಡಿ ಹರಿಸಿದರು.

ಜನರ ಕಣ್ಣೀರ ಕೋಡಿಯನ್ನು ಕಂಡ ಅಂಬರೀಶ್ ಪತ್ನಿ ಸುಮಲತಾ, ಪುತ್ರ ಅಭಿಷೇಕ್ ದುಃಖ ಉಮ್ಮಳಿಸá-ತ್ತಿತ್ತು. ದರ್ಶನಕ್ಕೆ ಬಂದ ಜನತೆ ಗೋಳಾಟ ಕಂಡು ಭಾವುಕರಾಗುತ್ತಿದ್ದ ಅಭಿಷೇಕ್ ಕೈಮುಗಿದು ಅಭಿನಂದನೆ ಸಲ್ಲಿಸಿದರೆ, ಸುಮಲತಾ ಕಣ್ಣೀರಾಗುತ್ತಿದ್ದರು. ಜನರನ್ನು ನೋಡಿ ಮತ್ತೆ ದುಃಖದ ಮಡುವಿಗೆ ಜಾರುತ್ತಿದ್ದರು.

ಕೊರೆವ ಚಳೀಲೂ ಕರಗದ ಸಾಲು

ಜಿಲ್ಲೆಯ ಜನರ ನೆಚ್ಚಿನ ನಟ, ಎಂಟೆದೆಯ ಭಂಟನ ಅಂತಿಮ ದರ್ಶನ ಪಡೆಯಲು ರಾತ್ರಿಯಿಡೀ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಜನತೆ ತಂಡೋಪತಂಡವಾಗಿ ಆಗಮಿಸಿದ್ದರು. ಪಾರ್ಥಿವ ಶರೀರ ಸಮೀಪಿಸುತ್ತಿದ್ದಂತೆಯೇ ಚೀರಾಡಿ, ಗೋಳಾಡುತ್ತಿದ್ದ ಅಭಿಮಾನಿಗಳನ್ನು ನಿಯಂತ್ರಿಸುವುದು ದೊಡ್ಡ ಸವಾಲಿನ ಕೆಲಸವಾಗಿತ್ತು. ಬೆಳಗ್ಗೆ 9 ಗಂಟೆತನಕ ದರ್ಶನಕ್ಕೆ ಅವಕಾಶ ಕಲ್ಪಿಸುವುದಾಗಿ ಹೇಳಿದರೂ 8.30ಕ್ಕೆ ಗೇಟ್ ಬಂದ್ ಮಾಡಲಾಯಿತು. ಜನ ಕೂಗಾಟ ಮಾಡಿದ್ದರಿಂದ ಮತ್ತೆ ಗೇಟ್ ತೆರೆಯಲಾಯಿತು. ಬೆಂಗಳೂರಿನಿಂದ ಮಂಡ್ಯಕ್ಕೆ ಬರಬೇಕಿದ್ದ ಸೇನಾ ಹೆಲಿಕಾಪ್ಟರ್ ಹೆಚ್ಚು ಮಂಜು ಕವಿದ್ದಿದ್ದ ಪರಿಣಾಮ 10 ಗಂಟೆ ನಂತರ ಹೊರಡಲು ನಿರ್ಧರಿಸಿದ್ದರಿಂದ ಜನರಿಗೆ ಮತ್ತೆರಡು ತಾಸು ದರ್ಶನಕ್ಕೆ ಅವಕಾಶ ಲಭ್ಯವಾಯಿತು.

ಕಣ್ಣುಮುಚ್ಚದೆ ಕಾದ ಪೊಲೀಸ್

ಅಂತಿಮ ದರ್ಶನಕ್ಕೆ ಸಾಗರೋಪಾದಿಯಾಗಿ ಜನರು ಬರುತ್ತಿದ್ದರೂ ಪೊಲೀಸರು ಎಲ್ಲರನ್ನೂ ನಿಭಾಯಿಸಿ ಅಹಿತಕರ ಘಟನೆ ನಡೆಯದಂತೆ ಕರ್ತವ್ಯ ನಿರ್ವಹಿಸಿದ್ದು, ಜತೆಗೆ ರಾತ್ರಿ ಪೂರ್ತಿ ಕಣ್ಣುಮುಚ್ಚದೆ ಕರ್ತವ್ಯ ನಿರ್ವಹಿಸಿದ್ದು ಮೆಚ್ಚುಗೆಗೆ ಪಾತ್ರವಾಯಿತು. ಕೆಲವೊಮ್ಮೆ ಅಭಿಮಾನಿಗಳನ್ನು ನಿಯಂತ್ರಿಸಲು ಸಾಧ್ಯವಾಗದೆ ಸುಮಾರು 25-30 ಸಲ ಲಾಠಿ ಚಾರ್ಜ್ ಮಾಡಬೇಕಾಯಿತು.

ಮತ್ತೊ್ಬ ಅಭಿಮಾನಿ ಆತ್ಮಹತ್ಯೆ

ಮದ್ದೂರು: ಅಂಬರೀಷ್ ನಿಧನದಿಂದ ಮನನೊಂದು ಭಾನುವಾರ ರೈಲಿಗೆ ತಲೆಕೊಟ್ಟು ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಸೋಮವಾರ ಪಟ್ಟಣದಲ್ಲಿ ಮತ್ತೊಬ್ಬ ಅಭಿಮಾನಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಗೊರವನಹಳ್ಳಿ ಗ್ರಾಮದ ಗೋಬಿ ಮಂಚೂರಿ ವ್ಯಾಪಾರಿ ಜಿ.ಎಸ್.ಸುರೇಂದ್ರ (46) ಮೃತ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಎಂ ಕುಮಾರಸ್ವಾಮಿ ಕೃತಜ್ಞತೆ

ಮಂಡ್ಯ: ಅಂಬರೀಷ್ ಅಂತಿಮ ದರ್ಶನ ಸುಸೂತ್ರವಾಗಿ ನಡೆದಿದ್ದು, ಯಾವುದೇ ತೊಂದರೆಯಾಗದಂತೆ ನಡೆದು ಕೊಂಡ ಜನರಿಗೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಕೃತಜ್ಞತೆ ಸಲ್ಲಿಸಿದರು. ರಾತ್ರಿ 8 ಗಂಟೆ ತನಕ ಕ್ರೀಡಾಂಗಣದಲ್ಲಿದ್ದ ಸಿಎಂ ನಂತರ ಕೆಆರ್​ಎಸ್​ಗೆ ತೆರಳಿ ವಿಶ್ರಾಂತಿ ಪಡೆದರು. ಬೆಳಗ್ಗೆ 9 ಗಂಟೆಗೆ ಮತ್ತೆ ಆಗಮಿಸಿದರು.

ರಾತ್ರಿ ಪೂರ ಗೀತ ನಮನ

ಅಂಬರೀಷ್ ಅಂತಿಮ ದರ್ಶನ ಸಂದರ್ಭ ಗಾಯಕರಾದ ಯರಹಳ್ಳಿ ಪುಟ್ಟಸ್ವಾಮಿ, ಶಿವಾರ ಉಮೇಶ್ ಮತ್ತವರ ತಂಡ ರಾತ್ರಿ ಪೂರ್ತಿ ಗೀತನಮನ ಸಲ್ಲಿಸಿದರು. ಹೇಗೆ ಮರೆಯಲಿ ಅಂಬರೀಷಣ್ಣ ನಿಮ್ಮ, ಭಗವಂತನು ಕರೆದಾಗ ಕೊನೆಯಾಯಿತು ನಿಮ್ಮ ಮರಣ ಎಂಬ ಗೀತೆ ಜತೆಗೆ ಅಂಬಿ ಅಭಿನಯದ ವಿವಿಧ ಸಿನಿಮಾಗಳ ಶೋಕ ಗೀತೆ ಹಾಡಿದರು.

ಅಂಬರೀಷ್ ಹುಟ್ಟಿರೋದು ಮಂಡ್ಯ ಇರಬಹುದು. ಅವರನ್ನು ಪ್ರೀತಿಸುವ ಜನ ರಾಜ್ಯಾದ್ಯಂತ ಇದ್ದಾರೆ. ಅವರ ನಿಧನ ನನಗೆ ದೊಡ್ಡ ಶಾಕ್ ಕೊಟ್ಟಿದೆ.

| ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ನಾಯಕ

ಕೊನೆಗೂ ಬಾರದ ರಮ್ಯಾ

ಅಂಬರೀಷ್​ರನ್ನು ಅಂಕಲ್ ಎಂದು ಕರೆಯುತ್ತಿದ್ದ ರಮ್ಯಾ, ಅಂಬಿ ಅಂತಿಮ ದರ್ಶನ ಪಡೆಯಲು ಕಡೆಗೂ ಆಗಮಿಸಲೇ ಇಲ್ಲ. ಸಂಸತ್ ಚುನಾವಣೆ ಬಳಿಕ ಆರಂಭದಲ್ಲಿ ಒಂದಷ್ಟು ದಿನ ಮಂಡ್ಯದತ್ತ ಆಗಮಿಸಿದ ರಮ್ಯಾ, ನಂತರ ಅತ್ತ ಮುಖ ಮಾಡಲಿಲ್ಲ. ಅಂಬಿ ಅಂತಿಮ ದರ್ಶನಕ್ಕಾದರೂ ಬರಬಹುದೆಂಬ ನಂಬಿಕೆಯೂ ಹುಸಿಯಾಯ್ತು.

ಹೆಗಲು ಕೊಟ್ಟ ತಾರೆಯರು

ಸರ್ಕಾರಿ ಗೌರವ, ಅಂತ್ಯಸಂಸ್ಕಾರದ ಮಂತ್ರಘೋಷ ಆರಂಭವಾದ ನಂತರ ಪಾರ್ಥಿವ ಶರೀರವನ್ನು ಚಿತೆಗಿಡಲು ಕನ್ನಡದ ಸ್ಟಾರ್ ನಟರು ಹೆಗಲು ಕೊಟ್ಟರು. ಶಿವರಾಜ್​ಕುಮಾರ್, ಪುನೀತ್ ರಾಜ್​ಕುಮಾರ್, ದರ್ಶನ್, ಯಶ್, ನೆನಪಿರಲಿ ಪ್ರೇಮ್ ಇನ್ನಿತರರು ಮೃತದೇಹವನ್ನು ತಂದು ಚಿತೆಯಲ್ಲಿಟ್ಟರು.


- Advertisement -

Stay connected

278,564FansLike
571FollowersFollow
609,000SubscribersSubscribe

ವಿಡಿಯೋ ನ್ಯೂಸ್

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...

VIDEO: ನೆಟ್ಟಿಗರ ಪ್ರೀತಿಯನ್ನು...

ನವದೆಹಲಿ: ಈ ನಾಲ್ಕು ತಿಂಗಳ ಪುಟಾಣಿ ಕಪ್ಪುಬೆಕ್ಕಿಗೆ ಎರಡು ಮುಖ ! ಅದರ ವಿಲಕ್ಷಣ ರೂಪಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಎರಡು ಮುಖದ ಬೆಕ್ಕಿನ ಮರಿ ತುಂಬ ಆರೋಗ್ಯಕರವಾಗಿ ಬೆಳೆಯುತ್ತಿದ್ದು ಅದನ್ನು...

VIDEO: ಸುಮ್ಮಸುಮ್ಮನೆ ಟ್ರಾನ್ಸ್​ಫರ್​...

ನವದೆಹಲಿ: ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವರ್ಗಾವಣೆ ಸಾಮಾನ್ಯ. ಆದರೆ ಕೆಲವು ಸಲ ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಅಧೀನ ಅಧಿಕಾರಿಗಳು ಸುಮ್ಮನೆ ವರ್ಗಾವಣೆಯಾಗುತ್ತಾರೆ. ಸಣ್ಣ ತಪ್ಪಿಗೂ ಬೇರೆ ಕಡೆ ವರ್ಗಗೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹಾಗೆ ವರ್ಗಾವಣೆಗೊಂಡ...

VIDEO: ಪುನೀತ್ ರಾಜ್​ಕುಮಾರ್​​...

ಬೆಂಗಳೂರು: ಪುನೀತ್​ ರಾಜ್​ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮಾಯಾ ಬಜಾರ್​-2016 ಸಿನಿಮಾದ ಟೀಸರ್​ ನಿನ್ನೆ (ನ.15)ರಂದು ಸಂಜೆ 7.30ಕ್ಕೆ ಬಿಡುಗಡೆಯಾಗಿದೆ. 56 ಸೆಕೆಂಡ್​​ಗಳ ಟೀಸರ್​ ಬಿಡುಗಡೆಯಾಗಿದೆ. ನವೆಂಬರ್​ 8, 2016ರಂದು 500 ರೂ.ಹಾಗೂ...

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...

VIDEO| ಐತಿಹಾಸಿಕ ಪಾತ್ರದಲ್ಲಿ...

ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಹೌಸ್​ಫುಲ್​-4 ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಮುಂದಿನ ಐತಿಹಾಸಿಕ ಪ್ರಾಜೆಕ್ಟ್​ಗೆ ತಯಾರಾಗುತ್ತಿದ್ದಾರೆ. ಪೃಥ್ವಿರಾಜ್​ ಹೆಸರಿನ ಇತಿಹಾಸ ಆಧಾರಿತ ಚಿತ್ರದ ಪೂಜಾ...

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....