Orphans: ಇತರೆ ಕಾರ್ಯಕ್ರಮದ ವೇದಿಕೆ, ಜಾಲತಾಣ ಸೇರಿದಂತೆ ಹಲವೆಡೆ ಭರವಸೆಯ ಮಾತುಗಳನ್ನಾಡಿ, ಜನರ ಗಮನಸೆಳೆಯವವರ ಮಧ್ಯೆ ಏನೂ ಹೇಳದೆ, ಬರೋಬ್ಬರಿ 120 ಅನಾಥ ಮಕ್ಕಳನ್ನು ದತ್ತು ಪಡೆದು, ಅವರೆಲ್ಲರೂ ನನ್ನ ಕುಟುಂಬ, ಅವರ ಸಂಪೂರ್ಣ ಜವಾಬ್ದಾರಿ ನನ್ನದು ಎನ್ನುವ ಮೂಲಕ ತಮ್ಮ ಹೃದಯ ವೈಶಾಲ್ಯತೆ ತೋರಿದ ಸ್ಟಾರ್ ನಟ ಮಂಚು ವಿಷ್ಣು ಬಗ್ಗೆ ಈ ಹಿಂದಿದ್ದ ಅಭಿಮಾನ, ಗೌರವ ಈಗ ದುಪ್ಪಟ್ಟಾಗಿದೆ. ಅದಕ್ಕೆ ಅವರ ಈ ನಡೆ, ತೆಗೆದುಕೊಂಡು ಅತ್ಯುತ್ತಮ ನಿರ್ಧಾರ ಮತ್ತು ಒಳ್ಳೆ ಮನಸ್ಸೇ ಕಾರಣ. ನಟನ ಮಹತ್ಕಾರ್ಯಕ್ಕೆ ಇದೀಗ ಮೆಚ್ಚುಗೆಗೆಳ ಮಹಾಪೂರವೇ ಹರಿದುಬಂದಿದೆ.
ಇದನ್ನೂ ಓದಿ: ವಿಜಯವಾಣಿ ಛಾಯಾಗ್ರಾಹಕ ಕೆ.ಎಚ್. ಚಂದ್ರುಗೆ ಮೈಸೂರು ಅಥ್ಲೆಟಿಕ್ಸ್ ಕ್ಲಬ್‌ನ ವಾರ್ಷಿಕ ಪ್ರಶಸ್ತಿ
ತಿರುಪತಿ
ತಿರುಪತಿಯ ಬೈರಾಗಿಪಟ್ಟೆಡಾದಲ್ಲಿರುವ ಮಾತೃಶ್ಯಾ ಅನಾಥಾಶ್ರಮದಲ್ಲಿ ವಾಸವಿದ್ದ 120 ಅನಾಥ ಮಕ್ಕಳನ್ನು ದತ್ತು ಪಡೆದ ಮಂಚು ವಿಷ್ಣು, ಅಲ್ಲಿನ ಸಿಬ್ಬಂದಿಗಳನ್ನು ಮಾತನಾಡಿಸಿ, “ಮಕ್ಕಳ ಭವಿಷ್ಯದ ಬಗ್ಗೆ ಧೈರ್ಯ ತುಂಬಿದ್ದಾರೆ. ಈ ಬಗ್ಗೆ ಎಲ್ಲರೊಂದಿಗೆ ಮನಬಿಚ್ಚಿ ಮಾತನಾಡಿದ ನಟ, ಮೊದಲನೆಯದಾಗಿ ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಎಲ್ಲರೂ ತಮ್ಮ ಕುಟುಂಬ ಸದಸ್ಯರೊಂದಿಗೆ ಹಬ್ಬವನ್ನು ಆಚರಿಸಬೇಕೆಂದು ನಾನು ಹೃತ್ಪೂರ್ವಕವಾಗಿ ಹಾರೈಸುತ್ತೇನೆ. ಈ ಖುಷಿ ಸಮಯದಲ್ಲಿ ನಾನು ಒಂದು ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು” ಎಂದು ಮಾತು ಮುಂದುವರಿಸಿದರು.
ಸಂಪೂರ್ಣ ನನ್ನ ಜವಾಬ್ದಾರಿ
“ನಮ್ಮಲ್ಲಿ ಒಂದು ಮಾತಿದೆ. ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಎಂದು. ಆದರೆ, ನನ್ನ ಮನಸ್ಸು ಹೇಳುತ್ತಿರುವುದಿಷ್ಟೇ. ಈ ವಿಷಯವನ್ನು ನಿಮ್ಮೆಲ್ಲರ ಜತೆ ಹಂಚಿಕೊಳ್ಳುವುದು ಸರಿ. ಇದರಿಂದ ಬೇರೆ ಯಾರಿಗಾದರೂ ಸ್ಪೂರ್ತಿ ಅನಿಸಿದರೆ ಖಂಡಿತ ಅವರು ಸಹ ಮುಂದೆ ಬರಲಿ ಎಂಬುದು ನನ್ನ ಆಶಯ. ಈ ಸಂಕ್ರಾಂತಿ ಹಬ್ಬಕ್ಕೆ ಮಾತೃಶ್ಯಾ ಅನಾಥಾಶ್ರಮದಲ್ಲಿ ವಾಸವಿದ್ದ 120 ಅನಾಥ ಮಕ್ಕಳನ್ನು ನಾನು ದತ್ತು ಪಡೆದಿದ್ದೇನೆ. ಇವರೆಲ್ಲರೂ ಇನ್ಮುಂದೆ ಸಂಪೂರ್ಣ ನನ್ನ ಜವಾಬ್ದಾರಿ” ಎಂದರು.
ಕಾಲಕಾಲಕ್ಕೆ ಹೊಸ ಬಟ್ಟೆ
“ಒಂದೂವರೆ ವರ್ಷದ ಹಿಂದೆ ಈ ಆಶ್ರಮಕ್ಕೆ ನಾನು ಭೇಟಿ ಕೊಟ್ಟಿದ್ದೇನೆ. ಮಕ್ಕಳನ್ನು ನೋಡಿಕೊಳ್ಳುತ್ತಿರುವ ಇಲ್ಲಿಯವರು ಯಾವುದೇ ಹಣದ ಉದ್ದೇಶ ಅಥವಾ ಇನ್ನಿತರ ಉದ್ದೇಶದಿಂದ ಇವರನ್ನು ಆರೈಕೆ ಮಾಡಿಲ್ಲ. ಸ್ವಯಂ ಪ್ರೇರಿತವಾಗಿ ಮಕ್ಕಳನ್ನು ಪೋಷಿಸುತ್ತಿದ್ದಾರೆ. ಇದು ನನ್ನ ಮನಸ್ಸಿಗೆ ನಾಟಿತು. ಅಂದು ನಾನು ಅವರಿಗೆ ಕೊಟ್ಟ ಮಾತನ್ನು ಇಂದು ಈಡೇರಿಸಿದ್ದೇನೆ. ಮಕ್ಕಳಿಗೆಲ್ಲಾ ಕಾಲಕಾಲಕ್ಕೆ ಹೊಸ ಬಟ್ಟೆಗಳನ್ನು ಕಳುಹಿಸುತ್ತೇನೆ. ಅವರ ಶಿಕ್ಷಣದ ಎಲ್ಲಾ ವೆಚ್ಚವನ್ನೂ ನಾನೇ ಭರಿಸುತ್ತೇನೆ. ಹಬ್ಬಗಳ ಸಮಯದಲ್ಲಿ ಅವರನ್ನು ಭೇಟಿ ಮಾಡಲು ಇಲ್ಲಿಗೆ ಬರುತ್ತೇನೆ. ಈ ಸಂಕ್ರಾಂತಿಗೆ ಇಲ್ಲಿಗೆ ಬಂದಿದ್ದೇನೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ನಟನ ಹೃದಯ ವೈಶಾಲ್ಯತೆಗೆ ಅಭಿಮಾನಿಗಳು ತಲೆಬಾಗಿದ್ದಾರೆ,(ಏಜೆನ್ಸೀಸ್).