ನಟ ಕೋಮಲ್​ ಮೇಲೆ ಹಲ್ಲೆ ಮಾಡಿದ್ದ ಯುವಕ ಪೊಲೀಸ್​ ವಶಕ್ಕೆ: ಕೋಮಲ್​ ವಿರುದ್ಧ ಆರೋಪಿ ಹೇಳಿದ ದೂರು ಹೀಗಿದೆ…

ಬೆಂಗಳೂರು: ನಟ ಕೋಮಲ್​ ಮೇಲೆ ಹಲ್ಲೆ ಮಾಡಿದ್ದ ಯುವಕನನ್ನು ಮಲ್ಲೇಶ್ವರಂ ಪೊಲೀಸರು ಮಂಗಳವಾರ ರಾತ್ರಿ ವಶಕ್ಕೆ ಪಡೆದುಕೊಂಡಿದ್ದಾರೆ.

ಯುವಕನನ್ನು ವಿಜಯ್​ ಎಂದು ಗುರುತಿಸಲಾಗಿದೆ. ವಿಜಯ್ ಮತ್ತು ಕೋಮಲ್ ಒಂದೇ ಏರಿಯಾದವರು ಎಂದು ತಿಳಿದುಬಂದಿದೆ. ಹಲವು ವರ್ಷದಿಂದ ಇಬ್ಬರಿಗೂ ಮುಖ ಪರಿಚಯವಿದೆ. ಇಂದು ಸಂಜೆ ಬೈಕಿನಲ್ಲಿ ತನ್ನ ಭಾವಿ ಪತ್ನಿ ಜತೆ ವಿಜಯ್ ಬರುತ್ತಿದ್ದರು. ಈ ವೇಳೆ ಫೋನ್​ನಲ್ಲಿ ಮಾತನಾಡುತ್ತಾ ಕೋಮಲ್​ ಕಾರು ಓಡಿಸುತ್ತಿದ್ದರು ಎಂದು ವಿಜಯ್​ ಆರೋಪಿಸಿದ್ದಾರೆ.

ನಿಧಾನವಾಗಿ ಕಾರು ಓಡಿಸುತ್ತಿದ್ದ ಹಿನ್ನೆಲೆಯಲ್ಲಿ ವಿಜಯ್​ ಶಬ್ದ ಮಾಡಿದ್ದಾರೆ. ಇದೇ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಒಬ್ಬರಿಗೊಬ್ಬರು ಕೈ ಕೈ ಮೀಲಾಯಿಸಿದ್ದಾರೆ. ಗಲಾಟೆ ಜೋರಾದ ಬೆನ್ನಲ್ಲೇ ವಿಜಯ್​ ತನ್ನ ಸ್ನೇಹಿತರೊಂದಿಗೆ ಸೇರಿ ಕೋಮಲ್​ಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ತಕ್ಷಣ ಕೋಮಲ್ ನೆರವಿಗೆ ಮಲ್ಲೆಶ್ವರಂ ಸಂಚಾರಿ ಸಬ್​ ಇನ್ಸ್​ಪೆಕ್ಟರ್​ ಆಗಮಿಸಿ, ಕೋಮಲ್​ ಮತ್ತು ವಿಜಯ್​ನನ್ನು ಠಾಣೆಗೆ ಕರೆದೊಯ್ದಿದ್ದಾರೆ ಎಂದು ಪೊಲೀಸ್​ ಮೂಲಗಳು ಮಾಹಿತಿ ತಿಳಿಸಿವೆ.

ಸದ್ಯ ವಿಜಯ್​ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮಲ್ಲೆಶ್ವರಂ ಪೊಲೀಸ್ ಠಾಣೆಯಲ್ಲಿ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಮೊಕ್ಕಾಂ ಹೂಡಿದ್ದಾರೆ.

ಈ ಬಗ್ಗೆ ಮಾತನಾಡಿದ್ದ ನಟ ಕೋಮಲ್​, ಮಗಳನ್ನು ಟ್ಯೂಶನ್​ಗೆ ಬಿಟ್ಟು ವಾಪಸು ಬರುವಾಗ ಏಕಾಏಕಿ ಒಬ್ಬ ದ್ವಿಚಕ್ರ ವಾಹನದಿಂದ ಹಿಂದೆ ಬಂದು ಅಡ್ಡಗಟ್ಟಿ ಅವಾಚ್ಯ ಪದಗಳಿಂದ ನಿಂದಿಸಿದ. ಅದನ್ನು ನಾನು ಪ್ರಶ್ನಿಸಿದೆ. ಮತ್ತಷ್ಟು ಜೋರಾಗಿ ಮಾತನಾಡಿದ ಅದನ್ನು ಕೇಳಿ ನಾನು ಕಾರಿನಿಂದ ಕೆಳಗೆ ಇಳಿದೆ. ಇಳಿದ ತಕ್ಷಣ ನನ್ನ ಮೇಲೆ ಹಲ್ಲೆ ಮಾಡಲು ಶುರು ಮಾಡಿದರು. ಆಗ ಪಕ್ಕದಲ್ಲಿದ್ದ ಜನ ಅವರನ್ನು ಹಿಡಿದುಕೊಂಡರು. ಅಲ್ಲೇ ಪೊಲೀಸರು ಇದ್ದರು. ಬಳಿಕ ಠಾಣೆಗೆ ಕರೆದುತಂದರು ಎಂದು ಹೇಳಿದ್ದರು. (ದಿಗ್ವಿಜಯ ನ್ಯೂಸ್​)

One Reply to “ನಟ ಕೋಮಲ್​ ಮೇಲೆ ಹಲ್ಲೆ ಮಾಡಿದ್ದ ಯುವಕ ಪೊಲೀಸ್​ ವಶಕ್ಕೆ: ಕೋಮಲ್​ ವಿರುದ್ಧ ಆರೋಪಿ ಹೇಳಿದ ದೂರು ಹೀಗಿದೆ…”

  1. ನಿಯಮ ವಿರುದ್ಧವಾಗಿ ಯಾರೇ ಹೋದರೂ ಅವರಿಗೆ ಕ್ಷಮೆಯಿಲ್ಲ.

Leave a Reply

Your email address will not be published. Required fields are marked *