ವಿನೋದ್​ ರಾಜ್​​ ಬಗ್ಗೆ ಮೆಚ್ಚುಗೆ ಮಾತನಾಡುತ್ತಾ ನವರಸನಾಯಕ ಜಗ್ಗೇಶ್​ ಎಚ್ಚರಿಕೆ ಸಂದೇಶ ರವಾನಿಸಿದ್ದು ಯಾರಿಗೆ?

ಬೆಂಗಳೂರು: ಸದಾ ಸಾಮಾಜಿಕ ಜಾಲತಾಣ ಟ್ವಿಟರ್​ನಲ್ಲಿ ಸಕ್ರಿಯರಾಗಿರುವ ನವರಸನಾಯಕ ಜಗ್ಗೇಶ್​, ಸಮಾಜದ ಅಂಕುಡೊಂಕುಗಳ ಬಗ್ಗೆ ಧ್ವನಿ ಎತ್ತುವುದು ಹಾಗೂ ಮಾದರಿ ಕೆಲಸಗಳಿಗೆ ಬೆನ್ನು ತಟ್ಟುವುದನ್ನು ಮಾಡುತ್ತಿರುತ್ತಾರೆ. ಇದೀಗ ನಟ ವಿನೋದ್​ ರಾಜ್​ ಬಗ್ಗೆ ಕಳಕಳಿ ವ್ಯಕ್ತಪಡಿಸುವ ಮೂಲಕ ಸಮಾಜಕ್ಕೆ ಸಂದೇಶವೊಂದನ್ನು ರವಾನಿಸಿದ್ದಾರೆ.

ತಮ್ಮ ಟ್ವಿಟರ್​ ಖಾತೆಯ ಮೂಲಕ ಧ್ವನಿ ಎತ್ತಿರುವ ಜಗ್ಗೇಶ್​, ಇಂದಿನ ಡ್ಯಾನ್ಸ್​​​ ಸ್ಟಾರ್​ಗಳು ಹುಟ್ಟವ ಮೊದಲೇ 1987ರಲ್ಲೇ ಕನ್ನಡಿಗರಲ್ಲಿ ಹುಚ್ಚೆಬ್ಬಿಸಿದ್ದ ಪ್ರತಿಭಾವಂತ ನಟ ವಿನೋದ್ ​ರಾಜ್​. ನಾಟ್ಯದ ವ್ಯಾಕರಣ ಅರಿಯದವರನ್ನು ರಿಯಾಲಿಟಿಗೆ ಶೋ ತೀರ್ಪುಗಾರರನ್ನಾಗಿ ಮಾಡುವ ಬದಲು ವಿನೋದ್​ ಅವರ ಪ್ರತಿಭೆಯನ್ನು ಬಳಸಿಕೊಳ್ಳಿ, ನಿಮ್ಮ ಶೋಗಳ ಘನತೆ ಇನ್ನು ಹೆಚ್ಚಾಗುತ್ತದೆ. ನನ್ನ ನೇರ ವೈಯಕ್ತಿಕ ಅಭಿಪ್ರಾಯ ಸತ್ಯ ಅನ್ನಿಸಿದರೆ ಒಪ್ಪಿ. ಆಗದಿದ್ದರೆ ನಕ್ಕು ಮರೆತುಬಿಡಿ ಎಂದು ಹೇಳಿದ್ದಾರೆ.

ಈ ಹಿಂದೆಯೂ ಸಾಮಾಜಿಕ ಜಾಲತಾಣಗಳಲ್ಲಿ ವಿನೋದ್​ರಾಜ್​ ಅವರನ್ನು ಕುರಿತು ಡ್ಯಾನ್ಸ್​ ರಿಯಾಲಿಟಿ ಶೋಗಳ ಆಯೋಜಕರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದರು. ಕೇವಲ ಟಿಆರ್​ಪಿಗೋಸ್ಕರ ಡ್ಯಾನ್ಸ್​ ಅರಿವಿಲ್ಲದವರನ್ನು ತೀರ್ಪುಗಾರರನ್ನಾಗಿ ಕರೆತರುತ್ತಿದ್ದಾರೆ. ಸೌಂದರ್ಯವೇ ಮುಖ್ಯವೆಂದು ನಟಿಯರಿಗೆ ಮಣೆ ಹಾಕಲಾಗುತ್ತಿದೆ. ಡ್ಯಾನ್ಸ್​ ಬಗ್ಗೆ ಅವರು ನೀಡುವ ತೀರ್ಪು ಸಮಾಧಾನಕರವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದೇ ವೇಳೆ ವಿನೋದ್​ ರಾಜ್​ ಅವರ ಫೋಟೊವನ್ನು ಪೋಸ್ಟ್​ ಮಾಡಿ ಇವರನ್ನು ಕರೆತನ್ನಿ ಶೋಗೆ ಒಂದು ಗಂಭೀರತೆ ಬರುತ್ತದೆ. ಡ್ಯಾನ್ಸ್​ ರಾಜ ಎಂದೇ ಕರೆಯಲಾಗುವ ಇವರು ಇಂತಹ ಕಾರ್ಯಕ್ರಮಕ್ಕೆ ತಿಲಕವಿದ್ದಂತೆ ಎಂದು ಅಭಿಪಾಯ್ರ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ನಟ ಜಗ್ಗೇಶ್​ ಪ್ರತಿಕ್ರಿಯೆ ನೀಡಿರುವುದು ಮುಂದೆ ಇದು ಯಾವ ರೀತಿ ಪರಿಣಾಮ ಬೀರಬಹುದು ಎಂಬುದನ್ನು ಕಾದು ನೋಡಬೇಕಿದೆ. (ದಿಗ್ವಿಜಯ ನ್ಯೂಸ್​)

One Reply to “ವಿನೋದ್​ ರಾಜ್​​ ಬಗ್ಗೆ ಮೆಚ್ಚುಗೆ ಮಾತನಾಡುತ್ತಾ ನವರಸನಾಯಕ ಜಗ್ಗೇಶ್​ ಎಚ್ಚರಿಕೆ ಸಂದೇಶ ರವಾನಿಸಿದ್ದು ಯಾರಿಗೆ?”

Leave a Reply

Your email address will not be published. Required fields are marked *