ದಾರಿ ತಪ್ಪಲೆಂದೇ ಹುಟ್ಟಿದ ಮಕ್ಕಳ ಇತಿಹಾಸ ಯಕ್ಷಪ್ರಶ್ನೆಯೆಂದು ರಮ್ಯಾಗೆ ತಿರುಗೇಟು ನೀಡಿದ ನಟ ಜಗ್ಗೇಶ್​…

ಬೆಂಗಳೂರು: ಮಾಜಿ ಸಂಸದೆ ರಮ್ಯಾ ನಿನ್ನೆ ತಮ್ಮ ಟ್ವಿಟರ್​ ಖಾತೆಯಲ್ಲಿ, ಅಡಾಲ್ಫ್​ ಹಿಟ್ಲರ್​ ಹಾಗೂ ಪ್ರಧಾನಿ ಮೋದಿಯವರ ಫೋಟೋ ಕೊಲಾಜ್​ ಮಾಡಿ ಹಾಕಿದ್ದರು. ಇಬ್ಬರೂ ಮಕ್ಕಳ ಕಿವಿ ಹಿಂಡುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿ, ನಿಮಗೆ ಏನೆನ್ನಿಸುತ್ತದೆ ಹೇಳಿ ಎಂದು ಶೀರ್ಷಿಕೆ ನೀಡಿದ್ದರು.

ಅದನ್ನು ನೋಡಿದ ಹಾಸ್ಯ ನಟ ಬುಲೆಟ್​ ಪ್ರಕಾಶ್​ ತೀವ್ರವಾಗಿ ತಿರುಗೇಟು ನೀಡಿದ್ದರು. ರಮ್ಯ ಮೇಡಂ, ನೀವು ಚಿಕ್ಕವರಿದ್ದಾಗ ನಿಮ್ಮ ತಂದೆ ಕಿವಿ ಹಿಂಡಿದ್ದರೆ ಇಂದು ನೀವು ಹೀಗಾಗುತ್ತಿರಲಿಲ್ಲ, ಮತ ಹಾಕದವರಿಗೆ ಮೋದಿಯವರ ಬಗ್ಗೆ ಮಾತನಾಡುವ ಹಕ್ಕು ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಈಗ ಹಿರಿಯ ನಟ ಜಗ್ಗೇಶ್​ ಕೂಡ ತಮ್ಮದೇ ಶೈಲಿಯಲ್ಲಿ ರಮ್ಯಾಗೆ ತಿರುಗೇಟು ನೀಡಿದ್ದಾರೆ. ಬುಲೆಟ್​ ಪ್ರಕಾಶ್​ ಅವರ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿ, ತನ್ಮೂಲಕ ರಮ್ಯಾ ಅವರನ್ನು ವ್ಯಂಗ್ಯವಾಡಿದ್ದಾರೆ.

ಸಹೋದರ, ದಾರಿ ತಪ್ಪಿದ ಮಕ್ಕಳನ್ನು ತಿದ್ದಬಹುದು. ಆದರೆ ದಾರಿ ತಪ್ಪಲೆಂದೇ ಹುಟ್ಟಿದ ಮಕ್ಕಳ ತಿದ್ದಬಾರದು. ಹೀಗೆ ದಾರಿ ತಪ್ಪಲು ಹುಟ್ಟಿದ ಮಕ್ಕಳ ಇತಿಹಾಸವೇ ಯಕ್ಷಪ್ರಶ್ನೆ. ಜನನವು ಹೇಗೋ ಹಾಗೇ ಜೀವನ. ಅಂಥ ಮಕ್ಕಳ ಬಗ್ಗೆ ಅನುಕಂಪ ವಹಿಸಬೇಕು. ಅಂಥವರೆಲ್ಲ ಮಾನಸಿಕ ವಿಕಲಚೇತನರು. ಇಂತಹವರನ್ನು ನೋಡಿ ಕೂಡ ಸಂತೋಷ ಪಡುವ ಜನರು ಇರುವುದು ದೌರ್ಭಾಗ್ಯ ಎಂದು ವ್ಯಂಗ್ಯಭರಿತವಾಗಿ ಟ್ವೀಟ್​ ಮಾಡಿದ್ದಾರೆ.