ನಟ ದ್ವಯರಿಬ್ಬರ ಟ್ವೀಟ್‌ ವಾರ್‌: ಜಗ್ಗೇಶ್‌ ಟ್ವೀಟ್‌ಗೆ ಪ್ರಕಾಶ್‌ ರಾಜ್‌ ಉತ್ತರ ಹೀಗಿತ್ತು!

ಬೆಂಗಳೂರು: ತೊಡೆ ತಟ್ಟುವುದು ಗಂಡಸುತನ ಎನ್ನುವ ನಿಮ್ಮ ಮನಸು, ಮಾತು ಸರಿಯಲ್ಲ, ಅಸಭ್ಯವಾಗಿದೆ. ಒಬ್ಬರ ಗಂಡಸು ತನ ತೊಡೆ ತಟ್ಟುವುದರಿಂದ ರುಜುವಾತಾಗುವುದಿಲ್ಲ. ನಿಮಗೆ ಒಳ್ಳೆಯದಾಗಲಿ ಎಂದು ನಟ ನಟ ಪ್ರಕಾಶ್ ರಾಜ್ ಹೇಳಿದ್ದಾರೆ.

ನಟ ಜಗ್ಗೇಶ್‌ ಅವರು ಪ್ರಕಾಶ್ ರಾಜ್ ಅವರ ವಿರುದ್ಧ ಟ್ವಿಟರ್‌ನಲ್ಲಿ ಮೋದಿಗೆ ದೇಶ ಆಳುವ ಅರ್ಹತೆ ಇಲ್ಲ ಎನ್ನುವ ರೈ ಅವರ ಹೇಳಿಕೆ ಪ್ರಕಟಿಸಿ, ತಮಗೆ ಅರ್ಹತೆ ಏನಿದೆ? ರಾಜಕೀಯದ ಅನುಭವವಿಲ್ಲ. ಕಾನೂನು ವಿದ್ಯಾರ್ಥಿಯೂ ಅಲ್ಲ. ಯಾವುದೇ ಸಂಘಟನೆ, ಈಗ ಯಾಕೆ ಪೌರುಷ. ಮೋದಿ ತೆಗಳಿ ಬೇರೆಯವರ ಸಾಲಲ್ಲಿ ನಿಂತು ಯಾಕೆ ಚಪ್ಪಾಳೆ ಪ್ರಶಸ್ತಿ ತಿಪ್ಪೆ ಸೇರಿಸುತ್ತೀರಿ. ನಿಲ್ಲಿ ಚುನಾವಣೆಗೆ ತಟ್ಟಿತೋಡೆ ಅದು ಗಂಡಸ್ಸುತನ ಎಂದು ಪ್ರಕಾಶ್‌ ರಾಜ್‌ಗೆ ಟ್ವೀಟ್‌ ಮಾಡಿದ್ದರು.

 

ಜಗ್ಗೇಶ್‌ರ ಟ್ವೀಟ್‌ ಗೆ ಉತ್ತರಿಸಿರುವ ಪ್ರಕಾಶ್‌ ರಾಜ್‌, ಗೆದ್ದು ತೊಡೆ ತಟ್ಟಲು ಇದು ರಾಜಕೀಯ ಕಬಡ್ಡಿ ಆಟವಲ್ಲ. ಕಲಾವಿದರು ಬಳಸುವ ಮಾತಿನ ಮೇಲೆ ಸ್ವಲ್ಪ ಹಿಡಿತವಿರಲಿ. ತಾಯಂದಿರು..ಅಕ್ಕ ತಂಗಿಯರು, ಬಹಳಷ್ಟು ಹೆಣ್ಣು ಮಕ್ಕಳು ತಮ್ಮನ್ನ ಅಭಿಮಾನದಿಂದ ಬೆಳೆಸಿದ್ದಾರೆ…ಗಮನಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಸಂವಿಧಾನವನ್ನು ಬದಲಿಸುತ್ತೇನೆ, ಒಂದು ಕೋಮಿನವರನ್ನ ಈ ಭೂಮಿಯಿಂದಲೇ ಅಳಿಸಬೇಕು, ಸೊಂಟದ ಕೆಳಗಿನ ಅಸಭ್ಯ ಮಾತನಾಡುವ, ಜಾತ್ಯತೀತರ ತಂದೆ ತಾಯಿಯರನ್ನು ಅಸಭ್ಯವಾಗಿ ಜರಿಯುವ ನಿಮ್ಮ ಪಕ್ಷದ ನಾಯಕರನ್ನ ಕಾಪಾಡುವ ನಿಮ್ಮ ಪಕ್ಷ, ನಾಯಕರನ್ನು ಪ್ರಶ್ನಿಸಲು ನೀವು ಹೇಳುವ ಯಾವ ಅರ್ಹತೆಗಳೂ ಬೇಡ. ಮನುಷ್ಯರನ್ನ ಮನುಷ್ಯರನ್ನಾಗಿ ನೋಡುವ ಮಾನವೀಯ ಹೃದಯವೊಂದಿದ್ದರೆ ಸಾಕು ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.

ಪ್ರಕಾಶ್‌ ರಾಜ್‌ ಟ್ವೀಟ್‌ಗೆ ಮತ್ತೊಮ್ಮೆ ಉತ್ತರಿಸಿರುವ ನಟ ಜಗ್ಗೇಶ್‌, ನನ್ನ ಪ್ರಕಾರ ಗಂಡಸುತನ ಪದಬಳಕೆ ರಾಜಕೀಯದಲ್ಲಿ ಹೋರಾಟ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *