ಪತ್ರಕರ್ತ ರವಿ ಬೆಳಗೆರೆ ವಿರುದ್ಧ ತೀರಾ ಕೆಟ್ಟ ಪದ ಬಳಸಿ ನಟ ದುನಿಯಾ ವಿಜಯ್ ಆಕ್ರೋಶ​

ಬೆಂಗಳೂರು: ತನ್ನ ವೈಯಕ್ತಿಕ ಜೀವನದ ವಿರುದ್ಧ ಮಾತನಾಡಿದ್ದ ಹಿರಿಯ ಪತ್ರಕರ್ತ ರವಿಬೆಳೆಗೆರೆ ಅವರನ್ನು ನಟ ದುನಿಯಾ ವಿಜಯ್​ ಅವರು ತರಾಟೆಗೆ ತೆಗೆದುಕೊಂಡಿದ್ದು, ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ.

ನಟ ಡಾಲಿ ಧನಂಜಯ್​ ಅಭಿನಯದ ಹೊಸ ಚಿತ್ರ ‘ಬಡವ ರಾಸ್ಕಲ್​’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಚಿತ್ರಕ್ಕೆ ಶುಭಕೋರಿ ರವಿಬೆಳೆಗೆರೆ ವಿಚಾರವಾಗಿ ಮಾತನಾಡಿದ ವಿಜಯ್​, ಮೊದಲು ತೀರಾ ಅವಾಚ್ಯ ಪದಗಳಿಂದ ನಿಂದಿಸಿದರು.

ಮೊದಲು ತಮ್ಮ ಕುಟುಂಬ ನೆಟ್ಟಗಿದೆಯಾ ಎಂಬುದನ್ನು ನೋಡಿಕೊಳ್ಳಲಿ. ಆಮೇಲೆ ದರ್ಶನ್ ಆಗಲಿ, ನಮ್ಮ ಬಗ್ಗೆಯಾಗಲಿ ಮಾತನಾಡಲಿ. ಆರು ತಿಂಗಳು ಆಸ್ಪತ್ರೇಲಿ ಬಿದ್ದಿರುತ್ತಾನೆ. ಇನ್ನೂ ಬದುಕಿದ್ದಾನಾ ಅವನು? ಅವನಿಗೆ ಇಬ್ಬರು ಹೆಂಡತಿಯರಿದ್ದಾರೆ ಎಂದು ಏಕವಚನದಲ್ಲೇ ಕಿಡಿಕಾರಿದ್ದಾರೆ.

ರವಿಬೆಳೆಗೆರೆ ಹೇಳಿದ್ದೇನು?
ನಿನ್ನೆ ದರ್ಶನ್​, ದುನಿಯಾ ವಿಜಯ್​ ಮತ್ತು ನಿರ್ದೇಶಕ ಓಂಪ್ರಕಾಶ್​ ವಿರುದ್ಧ ಮಾತನಾಡಿದ್ದ ರವಿಬೆಳೆಗೆರೆ ವಿಡಿಯೋವನ್ನು ಯೂಟ್ಯೂಬ್​ನಲ್ಲಿ ಅಪ್​ಲೋಡ್​ ಮಾಡಿದ್ದರು. ದರ್ಶನ್​ ಈಗಲೂ ತನ್ನ ಪತ್ನಿಗೆ ಕಿರುಕುಳ ನೀಡುತ್ತಾನೆ. ಪವಿತ್ರಾ ಗೌಡಳ ಜತೆ ಸಂಬಂಧ ಇದೆ ಎಂದು ಆರೋಪಿಸಿದ್ದರು. ಅಲ್ಲದೆ, ದುನಿಯಾ ವಿಜಯ್​ ಬಗ್ಗೆ ಮಾತನಾಡಿ ಅವನು ಬ್ಲ್ಯಾಕ್​ ಕೋಬ್ರಾ ಅಲ್ಲ ಕರಿ ಗೊಬ್ಬರ. ಎಷ್ಟು ಜನರನ್ನು ಮದುವೆಯಾಗುತ್ತೀಯಾ? ಆ ಹೆಂಡತಿಯನ್ನು ಬಿಡ್ತಾನೆ ಮತ್ತೊಬ್ಬಳನ್ನು ಕಟ್ಟಿಕೊಳ್ಳುತ್ತಾನೆ. ಇವನು ಜೈಲು ಗಿರಾಕಿನೇ, ಈ ಹುಡುಗನಿಗೆ ಏನಾಗಿದೆ? ಎಲ್ಲವು ಇದೆ. ಒಳ್ಳೆಯ ಜೀವನ ನಡೆಸಲು ಏನಾಗಿದೆ ಇವರಿಗೆ ಎಂದು ಪ್ರಶ್ನಿಸಿ ಹಿಗ್ಗಾಮುಗ್ಗಾ ಟೀಕಿಸಿದ್ದರು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿ, ಸಾಕಷ್ಟು ಚರ್ಚೆಗೆ ಅವಕಾಶ ಮಾಡಿಕೊಟ್ಟಿತ್ತು. (ದಿಗ್ವಿಜಯ ನ್ಯೂಸ್​)

ಇತ್ತೀಚೆಗೆ ಪತ್ನಿ ವಿಜಯಲಕ್ಷ್ಮೀ ಮೇಲೆ ಮತ್ತೆ ಹಲ್ಲೆ ಮಾಡಿದ ದರ್ಶನ್​: ಜಗಳ ಬಿಡಿಸಲು ಬಂದ ರವಿಶಂಕರ್​ಗೂ ಗೂಸಾ

Leave a Reply

Your email address will not be published. Required fields are marked *