ವಿಜಯವಾಣಿ ಸುದ್ದಿಜಾಲ ಬೆಂಗಳೂರು:
“ಚೂರಿಕಟ್ಟೆ’, “ಪೆಂಟಗನ್’ ಖ್ಯಾತಿಯ ನಿರ್ದೇಶಕ “ವೇದ’, “ಆ್ಯಕ್ಟ್ 1978′, “ಯುವ’, “ಭೀಮ’ ಸೇರಿ ಹಲವು ಚಿತ್ರಗಳಲ್ಲಿ ನಟಿಸಿರುವ ಖ್ಯಾತಿ ರಾಘು ಶಿವಮೊಗ್ಗ ಅವರದು. ಇದೀಗ ಅವರು ಮೂರನೇ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಲು ಸಜ್ಜಾಗಿದ್ದಾರೆ. ಹೆಸರು “ದಿ ಟಾಸ್ಕ್’. ಇತ್ತೀಚೆಗಷ್ಟೆ ಧರ್ಮಗಿರಿ ಮಂಜುನಾಥಸ್ವಾಮಿ ದೇವಾಲಯದಲ್ಲಿ ಚಿತ್ರದ ಮುಹೂರ್ತ ನೆರವೇರಿಸಲಾಗಿದೆ.
ಡಿವೈಎಸ್ಪಿ ಪಿ. ರಾಜೇಶ್ ಪುತ್ರ “ಸಲಗ’ ಮತ್ತು “ಭೀಮ’ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿರುವ ಜಯಸೂರ್ಯ ಮತ್ತು “ಪೆಂಟಗನ್’ ಚಿತ್ರದಲ್ಲಿ ಅಭಿನಯಿಸಿದ್ದ ಸಾಗರ್ “ದಿ ಟಾಸ್ಕ್’ನಲ್ಲಿ ನಾಯಕರಾಗಿದ್ದಾರೆ. ಇದು ನೈಜ ಟನೆಯಿಂದ ಸ್ಫೂರ್ತಿ ಪಡೆದ ಚಿತ್ರವಾಗಿದ್ದು, ಡಿಸೆಂಬರ್ ತಿಂಗಳಿನಲ್ಲಿ ಬೆಂಗಳೂರು, ಮಡಿಕೇರಿ ಸುತ್ತಮುತ್ತ ಚಿತ್ರೀಕರಣ ಪ್ರಾರಂಭಿಸಲು ರಾಘು ಪ್ಲ್ಯಾನ್ ಮಾಡಿದ್ದಾರೆ.
ಜಯಸೂರ್ಯ, ಸಾಗರ್ ಜತೆ ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಶ್ರೀಲಕ್ಷಿ$್ಮ, ಅರವಿಂದ್ ಕುಪ್ಳೀಕರ್, ಬಿಂಬಶ್ರೀ ನೀನಾಸಂ, ಹರಿಣಿ ಶ್ರೀಕಾಂತ್, ಬಾಲಾಜಿ ಮನೋಹರ್ ಪ್ರಮುಖ ತಾರಾಗಣಲ್ಲಿ ನಟಿಸಲಿದ್ದಾರೆ. ಜತೆಗೆ ನಿರ್ದೇಶಕ ರಾು ಶಿವಮೊಗ್ಗ ಸಹ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. “ಕೈವ’ ಚಿತ್ರದ ಖ್ಯಾತಿಯ ಶ್ವೇತಪ್ರಿಯ “ದಿ ಟಾಸ್ಕ್’ ಸಿನಿಮಾದ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.