ಹಳ್ಳಿ ಸೆಟ್​ನಲ್ಲಿ ಸರಳವಾಗಿ ನಡೆಯಲಿದೆ ಧ್ರುವ ಸರ್ಜಾ-ಪ್ರೇರಣಾ ನಿಶ್ಚಿತಾರ್ಥ

ಬೆಂಗಳೂರು: ಚಂದನವನದ ಆಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ಮತ್ತು ಪ್ರೇರಣಾ ನಿಶ್ಚಿತಾರ್ಥ ಹಳ್ಳಿ ಸೆಟ್​ನಲ್ಲಿ ಸರಳವಾಗಿ ನಡೆಯಲಿದ್ದು, ಎಂಗೇಜ್​ಮೆಂಟ್​ಗೆ ಸಕಲ ಸಿದ್ಧತೆಗಳೂ ನಡೆಯುತ್ತಿವೆ.

ಡಿ. 9 ರಂದು ಭಾನುವಾರ ನಗರದ ಬನಶಂಕರಿಯ ಧರ್ಮಗಿರಿ ದೇವಾಲಯದಲ್ಲಿ ಆಂಜನೆಯನ ಸನ್ನಿಧಿಯಲ್ಲಿ ನಿಶ್ಚಿತಾರ್ಥ ನಡೆಯಲಿದೆ. ನಿಶ್ಚಿತಾರ್ಥಕ್ಕಾಗಿ ಕಲಾ ನಿರ್ದೇಶಕ, ನಟ ಅರುಣ್​ ಸಾಗರ್​ ತೆಂಗಿನ ಗರಿಯ ಚಪ್ಪರವನ್ನು ಸಿದ್ಧಗೊಳಿಸಿದ್ದು, ಹಳ್ಳಿ ಸೆಟ್​ ನಿರ್ಮಿಸುತ್ತಿದ್ದಾರೆ. 50 ಕ್ಕೂ ಹೆಚ್ಚು ನುರಿತ ಕೆಲಸಗಾರರು ಸೆಟ್​ ಸಿದ್ಧಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಹಳ್ಳಿ ಸೆಟ್​ನ ನಿರ್ಮಾಣವನ್ನು ಅರ್ಜುನ್​ ಸರ್ಜಾ ಮತ್ತು ಧ್ರುವ ಸರ್ಜಾ ಪರಿಶೀಲನೆ ನಡೆಸಿದ್ದಾರೆ. ನಿಶ್ಚಿತಾರ್ಥಕ್ಕೆ ಕೇವಲ ಆಪ್ತರು ಮತ್ತು ಚಿತ್ರರಂಗದ ಕೆಲ ಗಣ್ಯರಿಗಷ್ಟೇ ಆಹ್ವಾನ ನೀಡಲಾಗಿದೆ. ಇನ್ನು ಧ್ರುವ ಮತ್ತು ಪ್ರೇರಣಾ ಅವರ ಮದುವೆ ದಿನಾಂಕ ಇನ್ನೂ ಬಹಿರಂಗವಾಗಿಲ್ಲ. ನಿಶ್ಚಿತಾರ್ಥದ ದಿನದಂದೇ ಮದುವೆ ದಿನಾಂಕ ಅಂತಿಮಗೊಳಿಸಲಾಗುವುದು ಎಂದು ತಿಳಿದು ಬಂದಿದೆ.

ಪ್ರೇರಣಾ ಜತೆ ಧ್ರುವ ಎಂಗೇಜ್​ವೆುಂಟ್