More

  ಮತ್ತೆ ಒಂದಾಗಲಿದ್ದಾರೆ ಧನುಷ್​-ಐಶ್ವರ್ಯಾ? ರಜಿನಿ ಅಳಿಯನ ಟ್ವೀಟ್​ ನೋಡಿ ಫ್ಯಾನ್ಸ್​ ಖುಷ್​!

  ಚೆನ್ನೈ: ಕಾಲಿವುಡ್​ನ ಸ್ಟಾರ್​ ದಂಪತಿಗಳೆಂದೇ ಖ್ಯಾತರಾಗಿರುವ ನಟ ಧನುಷ್​ ಮತ್ತು ಸೂಪರ್​ಸ್ಟಾರ್​ ರಜಿನಿಕಾಂತ್​ ಹಿರಿಯ ಪುತ್ರಿ ಐಶ್ವರ್ಯಾ 18 ವರ್ಷಗಳ ದಾಂಪತ್ಯ ಜೀವನಕ್ಕೆ 2022ರ ಜ.17ರಂದು ಏಕಾಏಕಿ ಗುಡ್​ ಬೈ ಹೇಳುವ ಮೂಲಕ ಚಿತ್ರರಂಗಕ್ಕೆ ಮಾತ್ರವಲ್ಲದೇ ಅಸಂಖ್ಯಾತ ಅಭಿಮಾನಿಗಳಿಗೂ ಶಾಕ್​ ನೀಡಿದ್ದಾರೆ. ಇದೀಗ ಧನುಷ್​ ಮಾಡಿರುವ ಒಂದೇ ಒಂದು ಭಾವನಾತ್ಮಕ ಟ್ವೀಟ್​ ಅಭಿಮಾನಿಗಳಲ್ಲಿ ಮತ್ತೆ ಆಸೆ ಚಿಗುರಿಸಿದೆ.

  ಜ. 17 ರಂದು ಟ್ವೀಟ್​ ಮೂಲಕ ಡಿವೋರ್ಸ್​ ಖಚಿತಪಡಿಸಿದ ಧನುಷ್​, ಸ್ನೇಹಿತರಾಗಿ, ದಂಪತಿಯಾಗಿ, ಪೋಷಕರಾಗಿ ಮತ್ತು ಪರಸ್ಪರ ಹಿತೈಷಿಗಳಾಗಿ ಈ 18 ವರ್ಷಗಳು ಒಟ್ಟಿಗೆ ಕಳೆದೆವು. ಈ ಸುದೀರ್ಘ ಪ್ರಯಾಣವು ಬೆಳವಣಿಗೆ, ತಿಳುವಳಿಕೆ ಮತ್ತು ಹೊಂದಿಕೊಳ್ಳುವಿಕೆಯಿಂದ ಕೂಡಿತ್ತು. ಆದರೆ, ಇಂದು ನಾವು ನಮ್ಮ ದಾರಿಯಲ್ಲಿ ಪ್ರತ್ಯೇಕಗೊಳ್ಳುವ ಸ್ಥಳದಲ್ಲಿ ನಿಂತಿದ್ದೇವೆ ಎಂದು ಧನುಷ್​ ಟ್ವೀಟ್​ ಮಾಡಿದ್ದಾರೆ. ಇಷ್ಟೇ ಅಲ್ಲದೆ, ಜನರಲ್ಲಿ ಮನವಿಯೊಂದನ್ನು ಮಾಡಿದ್ದಾರೆ. ನಮ್ಮ ನಿರ್ಧಾರವನ್ನು ಗೌರವಿಸಿ, ನಮಗೆ ಬೇಕಾಗಿರುವ ಖಾಸಗಿತನವನ್ನು ನೀಡಿ ಎಂದಿದ್ದಾರೆ. ಐಶ್ವರ್ಯಾ ಕೂಡ ಹೇಳಿಕೆಯನ್ನು ನೀಡಿದ್ದು, ಹೆಚ್ಚಿಗೆ ಹೇಳುವ ಅಗತ್ಯವಿಲ್ಲ. ನಿಮ್ಮ ತಿಳುವಳಿಕೆ ಮತ್ತು ಪ್ರೀತಿ ಮಾತ್ರ ಅಗತ್ಯ ಎಂದು ಜನರಲ್ಲಿ ಕೋರಿದ್ದರು.

  ಇಬ್ಬರನ್ನೂ ಒಂದು ಮಾಡಲು ಸೂಪರ್​ ಸ್ಟಾರ್​ ರಜಿನಿಕಾಂತ್​ ಸಹ ಸಾಕಷ್ಟು ಪ್ರಯತ್ನ ಮಾಡಿದರು. ಆದರೆ, ಒಂದು ಮಾಡಲು ಸಾಧ್ಯವಿಲ್ಲ ಎಂದು ಗೊತ್ತಾದ ಬಳಿಕ ರಜಿನಿಕಾಂತ್​ ಸಹ ಒಂದು ಮಾಡುವ ಆಸೆಯನ್ನು ಕೈಬಿಟ್ಟರು. ಕೊನೆಗೂ ಜ. 17ರಂದು ಅಧಿಕೃತವಾಗಿ ಪ್ರತ್ಯೇಕವಾಗಿದ್ದನ್ನು ಘೋಷಣೆ ಮಾಡಿದರು. ಪುತ್ರರಾದ ಯಾತ್ರ ಮತ್ತು ಲಿಂಗ, ಧನುಷ್ ಮತ್ತು ಐಶ್ವರ್ಯಾ ಅವರೊಂದಿಗೆ ಸಮಯ ಕಳೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಧನುಷ್ ಮತ್ತು ಐಶ್ವರ್ಯ ತಮ್ಮ ಶಾಲೆಯ ಕಾರ್ಯಕ್ರಮಕ್ಕೆ ಒಟ್ಟಿಗೆ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಧನುಷ್ ಮಾಡಿದ್ದ ಪೋಸ್ಟ್ ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿತ್ತು.

  ಇದೀಗ ಧನುಷ್​ ಮತ್ತೊಂದು ಪೋಸ್ಟ್​ ಮಾಡಿದ್ದಾರೆ. 2012ರಲ್ಲಿ ಧನುಷ್​ ಮತ್ತು ಶ್ರುತಿ ಹಾಸನ್​ ನಟನೆಯ 3 ಸಿನಿಮಾ ಬಿಡುಗಡೆಯಾಯಿತು. ಧನುಷ್​ ಮಾಜಿ ಪತ್ನಿ ಐಶ್ವರ್ಯಾ ಈ ಸಿನಿಮಾ ಮೂಲಕ ನಿರ್ದೇಶಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಈ ಸಿನಿಮಾದ ಕತೆ, ಹಾಡುಗಳು ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿತು. ಅದರಲ್ಲೂ ಅನಿರುದ್ಧ್​ ಸಂಗೀತ ಎಲ್ಲೆಡೆ ಮೋಡಿ ಮಾಡಿತು.

  ಈ ಸಿನಿಮಾ 10 ವರ್ಷ ಪೂರೈಸಿದ್ದಕ್ಕೆ ಇತ್ತೀಚೆಗಷ್ಟೇ ಮರು ಬಿಡುಗಡೆ ಮಾಡಲಾಗಿತ್ತು. ಈ ವೇಳೆಯೂ ಅಭಿಮಾನಿಗಳು ಸಿನಿಮಾ ಮೇಲೆ ಭಾರೀ ಉತ್ಸಾಹ ತೋರಿದ್ದಾರೆ. ಇದನ್ನು ನೋಡಿ ಖುಷಿಯಾಗಿರುವ ಧನುಷ್​, ಈ ಚಿತ್ರಕ್ಕೆ ನೀವು ನೀಡಿರುವ ಸ್ವಾಗತ ತುಂಬಾ ಭಾವನಾತ್ಮಕವಾಗಿದೆ. ನಿಮ್ಮ ಪ್ರೀತಿಗೆ ಧನ್ಯವಾದಗಳು ಎಂದು ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

  Captain Miller

  ಧನುಷ್​ ಟ್ವೀಟ್​ ನೋಡಿ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ. ಧನುಷ್​ ಅವರು ಐಶ್ವರ್ಯಾರನ್ನು ಇನ್ನೂ ಮರೆತಿಲ್ಲ. ಹೀಗಾಗಿ ಇಂಥಾ ಭಾವನಾತ್ಮಕ ಪೋಸ್ಟ್​ ಮಾಡಿದ್ದಾರೆ. ಇಬ್ಬರು ಮತ್ತೆ ಒಂದಾಗಬಹುದು ಎಂದು ಮಾತನಾಡಿಕೊಳ್ಳುತ್ತಾರೆ. ಸ್ಟಾರ್​ ದಂಪರಿ ಒಂದಾಗಲಿ ಎಂಬುದು ಅನೇಕ ಆಸೆ ಕೂಡ ಆಗಿದೆ. ಒಂದಾದಲ್ಲಿ ಅಭಿಮಾನಿಗಳು ಹಬ್ಬ ಆಚರಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಸದ್ಯಕ್ಕೆ ಧನುಷ್ ಮಾಡಿರುವ​ ಪೋಸ್ಟ್​ ಒಂದಾಗುವ ಆಸೆಯನ್ನು ಮತ್ತೆ ಚಿಗುರಿಸಿದೆ.

  ಅಂದಹಾಗೆ ಐಶ್ವರ್ಯಾ ಮತ್ತು ಧನುಷ್​ 2004ರ ನವೆಂಬರ್​ 18ರಂದು ಮದುವೆಯಾದರು. ವಿವಾಹಕ್ಕೂ ಮುನ್ನ ದಂಪತಿ 6 ತಿಂಗಳು ಡೇಟಿಂಗ್​ ನಡೆಸಿದ್ದರು. ದಂಪತಿಗಳಿಗೆ ಯಾತ್ರ ಮತ್ತು ಲಿಂಗ ಹೆಸರಿನ ಇಬ್ಬರು ಗಂಡು ಮಕ್ಕಳಿದ್ದಾರೆ. (ಏಜೆನ್ಸೀಸ್​)

  ಧನುಷ್​-ಐಶ್ವರ್ಯಾ ನಡುವೆ ನಡೆಯುತ್ತಿತ್ತು ಜಗಳ: ಡಿವೋರ್ಸ್​ಗೆ ಅಸಲಿ ಕಾರಣ ಬಿಚ್ಚಿಟ್ಟ ಸ್ನೇಹಿತರು!

  ಧನುಷ್​-ಐಶ್ವರ್ಯಾ ಡಿವೋರ್ಸ್​ ಯುವ ಜನಾಂಗಕ್ಕೆ ನೀಡುತ್ತಿರೋ ಎಚ್ಚರಿಕೆಯಂತೆ! ಆರ್​ಜಿವಿ ವಿವರಣೆ ಹೀಗಿದೆ…

  ನಾನು ಕಳ್ಳತನ ಮಾಡಲು ಐಶ್ವರ್ಯಾ ಕಾರಣ! ಪೊಲೀಸರ ಮುಂದೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸೇವಕಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts