3 ದಿನದ ಹಿಂದೆ ನಟ ದರ್ಶನ್​ ಮನೆ ಮುಂಭಾಗದ ಕಾಂಪೌಂಡ್​ ಮೇಲೆ ಬಿದ್ದಿದ್ದ ಮರ; ಕೊನೆಗೂ ತೆರವುಗೊಳಿಸಿದ ಬಿಬಿಎಂಪಿ

ಬೆಂಗಳೂರು: ಮಳೆ ಗಾಳಿಗೆ ಸಿಲುಕಿ ನಟ ದರ್ಶನ್​ ಮನೆ ಮುಂಭಾಗದ ಕಾಂಪೌಂಡ್​ ಮೇಲೆ ಹಾಗೂ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ಬಿಬಿಎಂಪಿ ಕೊನೆಗೂ ತೆರವುಗೊಳಿಸಿದೆ.

ಮೂರು ದಿನಗಳ ಹಿಂದೆ ನಗರದಲ್ಲಿ ಭಾರಿ ಮಳೆಯಾಗಿದ್ದರಿಂದ ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಮನೆಯ ಕಾಂಪೌಂಡ್​ ಮೇಲೆ ಮರ ಬಿದ್ದಿತ್ತು. ಆದರೆ, ಯಾವ ಅಧಿಕಾರಿಯು ಅತ್ತ ತಿರುಗಿ ನೋಡದಿದ್ದು, ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಮಾಧ್ಯಮಗಳು ಇಂದು ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ ಅಧಿಕಾರಿಗಳು ತಕ್ಷಣವೇ ಮರ ತೆರವುಗೊಳಿಸಿದ್ದಾರೆ.

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ನಟ ದರ್ಶನ್​ ಮೇಲೆ ಈ ರೀತಿಯಾಗಿ ಸೇಡು ತೀರಿಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಸ್ಟಾರ್​ ನಟನ ಮನೆ ಮುಂದೆಯೇ ಈ ಸ್ಥಿತಿ ನಿರ್ಮಾಣವಾದರೇ ಸಾಮಾನ್ಯರ ಗತಿ ಏನು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *