ನಟ ದರ್ಶನ್‌ ನೋಡಲು ಬಂದಿದ್ದ ಪೌರಕಾರ್ಮಿಕರು ಬರಿಗೈಯಲ್ಲಿ ವಾಪಸ್‌!

ಮೈಸೂರು: ಕಾರು ಅಪಘಾತದಲ್ಲಿ ಗಾಯಗೊಂಡು ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ದರ್ಶನ್‌ರನ್ನು ನೋಡಲು ಬಂದಿದ್ದ ಮಹಿಳಾ ಪೌರಕಾರ್ಮಿಕರು, ದರ್ಶನ್​ ಅವರನ್ನು ನೋಡಲಾಗದೆ ಮತ್ತೆ ವಾಪಸ್ಸಾಗಿದ್ದಾರೆ.

ಆಸ್ಪತ್ರೆಗೆ ಭೇಟಿ ನೀಡಿದ ಪೌರಕಾರ್ಮಿಕರು ದರ್ಶನ್‌ ಅವರನ್ನು ನೋಡಲು ಒಳಗೆ ಬಿಡುವಂತೆ ಮನವಿ ಮಾಡಿದ್ದಾರೆ. ಆದರೆ ಅನುಮತಿ ಇಲ್ಲದೆ ಯಾರನ್ನು ಒಳಗೆ ಬಿಡುವುದಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಕ್ಕೆ ಬೇಸರದಿಂದಲೇ ವಾಪಸ್ಸಾಗಿದ್ದಾರೆ.

 

ಬೆಳಗ್ಗೆ ನಗರದ ಸ್ವಚ್ಛತೆ ಮಾಡಿ ನಂತರ ಆಸ್ಪತ್ರೆಗೆ ಭೇಟಿ ನೀಡಿದ ಮಹಿಳಾ ಪೌರಕಾರ್ಮಿಕರು‌ ದರ್ಶನ್‌ರನ್ನು ನೋಡಲು ಒತ್ತಾಯಿಸಿದ್ದರು.

ನಾವೆಲ್ಲ ದರ್ಶನ್ ಫ್ಯಾನ್ಸ್. ಅವರಿಗೆ ಅಪಘಾತ ಆಗಿದ್ದು ಕೇಳಿ ನೋಡುವುದಕ್ಕೆ ಬಂದಿದ್ದೇವೆ. ಆದರೆ ನಮ್ಮನ್ನು ಒಳಗೆ ಬಿಡಲಿಲ್ಲ. ಘಟನೆ ಕೇಳಿದಾಗಿನಿಂದ ಊಟವನ್ನೇ ಮಾಡಿಲ್ಲ. ಅವರು ಬೇಗ ಗುಣಮುಖರಾಗಲಿ ಎಂದು ಮಹಿಳಾ ಪೌರಕಾರ್ಮಿಕರು ಹಾರೈಸಿದ್ದಾರೆ. (ದಿಗ್ವಿಜಯ ನ್ಯೂಸ್)