ಶಾಸ್ತ್ರೋಕ್ತವಾಗಿ ನೆರವೇರಿದ ಧೃವಸರ್ಜಾ – ಪ್ರೇರಣಾ ನಿಶ್ಚಿತಾರ್ಥ

ಬೆಂಗಳೂರು: ಸ್ಯಾಂಡಲ್​ವುಡ್​ ಪ್ರಿನ್ಸ್​ ಧ್ರುವಸರ್ಜಾ ಮತ್ತು ಬಾಲ್ಯದ ಗೆಳತಿ ಪ್ರೇರಣಾ ನಿಶ್ಚಿತಾರ್ಥ ಶಾಸ್ತ್ರೋಕ್ತವಾಗಿ ನೆರವೇರಿತು.
ಬನಶಂಕರಿಯ ಆಂಜನೇಯ ದೇವಸ್ಥಾನದಲ್ಲಿ 50 ಮಂದಿ ಪರೋಹಿತರು ವೈದಿಕ ಸಂಪ್ರದಾಯದಂತೆ ನಿಶ್ಚಿತಾರ್ಥ ನಡೆಸಿದ್ದಾರೆ.

ಅದ್ಧೂರಿ ಸೆಟ್‌ನಲ್ಲಿ ತಮ್ಮ ಬಾಲ್ಯದ ಗೆಳತಿ ಹಾಗೂ ಪ್ರೇಯಸಿ ಪ್ರೇರಣಾ ಅವರಿಗೆ ತಮ್ಮಿಷ್ಟದಂತೆ ಮಾಡಿಸಿದ್ದ 24 ಲಕ್ಷ ರೂಪಾಯಿ ಬೆಲೆಯ ಡೈಮಂಡ್ ರಿಂಗನ್ನು ತೊಡಿಸಿ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ.

ಧೃವ ಸರ್ಜಾ ಅವರ ಅಣ್ಣ ನಟ ಚಿರಂಜೀವಿ ಸರ್ಜಾ ಮತ್ತು ನಟಿ, ಪತ್ನಿ ಮೇಘನಾ ರಾಜ್‌ ಕೂಡ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದರು.

ಸ್ಯಾಂಡಲ್‌ವುಡ್‌ನ ರವಿಶಂಕರ್, ಶಿವರಾಜ್‌ಕುಮಾರ್‌, ಚಾಲೆಂಜಿಗ್ ಸ್ಟಾರ್ ದರ್ಶನ್, ಬಂಜರಗಿ ಹರ್ಷ, ಚೇತನ್, ಪ್ರಜ್ವಲ್ ದೇವರಾಜ್, ಪ್ರಣವ್‌ ದೇವರಾಜ್, ನಿರ್ಮಾಪಕ ಉದಯ್ ಮೆಹ್ತಾ, ಯೋಗಿಶ್ ದ್ವಾರಕೀಶ್ ಮತ್ತು ನಟ, ರಾಕ್‌ಲೈನ್‌ ವೆಂಕಟೇಶ್‌ ಸೇರಿ ಹಲವರು ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಇನ್ನು ನಿಶ್ಚಿತಾರ್ಥಕ್ಕೆ ಆಗಮಿಸಿದ ಅತಿಥಿಗಳಿಗೆ ಭೂರಿ ಭೋಜನದ ಏರ್ಪಾಡು ಮಾಡಲಾಗಿದ್ದು, ಶಾವಿಗೆ ಸಬ್ಬಕ್ಕಿ ಪಾಯಸ, ಸ್ಪೆಷಲ್ ಡ್ರೈ ಫ್ರೂಟ್‌ ಹೋಳಿಗೆ, ಮ್ಯಾಂಗೋ ಪೇಟಾ ರೋಲ್, ಗೀ ಜಿಲೇಬಿ, ಮಸಾಲ ಅಕ್ಕಿ ರೊಟ್ಟಿ, ಕುಂದಾಪುರ ಸಿಹಿ ಕಡಬು, ಹಿತುಕು ಬೆಳೆ ಸಾರು, ಪುಲ್ಕಾ , ಕೊರಿಯಂಡರ್ ಕರಿ, ಮಂಗಳೂರು ಕೊಟ್ಟೆ ಬಿರಿಯಾನಿ ಸೇರಿದಂತೆ ನಾನಾ ತರದ ಖಾದ್ಯಗಳು ರೆಡಿಯಾಗಿವೆ. (ದಿಗ್ವಿಜಯ ನ್ಯೂಸ್‌)