ಕನ್ನಡದಲ್ಲಿ ಚರಣ್​ ರಾಜ್​ ನಿರ್ದೇಶನ; “ಕರುನಾಡ ಕಣ್ಮಣಿ’ಯಾಗಿ ಚರಣ್​ ದ್ವೀತಿಯ ಪುತ್ರ ದೇವ್​ ಪದಾರ್ಪಣೆ

blank

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ಕರ್ನಾಟಕದಲ್ಲಿ ಹುಟ್ಟಿ, ಸ್ಯಾಂಡಲ್​ವುಡ್​ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿ, ನಂತರ ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಪ್ಯಾನ್​ ಇಂಡಿಯಾ ಮಿಂಚಿರುವ ನಟ ಚರಣ್​ ರಾಜ್​. ಕನ್ನಡದಲ್ಲಿ ನೂರಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಅವರು ತಮಿಳು, ತೆಲುಗಿನಲ್ಲಿ ತಲಾ 50 ಪ್ಲಸ್​ ಹಾಗೂ ಹಿಂದಿಯಲ್ಲಿ 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮಿಂಚಿದ್ದಾರೆ. ಮಾತ್ರವಲ್ಲದೇ ತಮಿಳಿನಲ್ಲಿ ಎರಡು, ತೆಲುಗಿನಲ್ಲಿ ಒಂದು ಚಿತ್ರ ನಿರ್ದೇಶಿಸಿದ್ದಾರೆ. ಇಂತಹ ಚರಣ್​ ರಾಜ್​ ಇದೀಗ ಕನ್ನಡದಲ್ಲಿ ಆ್ಯಕ್ಷನ್-ಕಟ್​ ಹೇಳಲು ಸಿದ್ಧತೆ ನಡೆಸುತ್ತಿದ್ದಾರೆ. ಹೆಸರು “ಕರುನಾಡ ಕಣ್ಮಣಿ’.

ಕನ್ನಡದಲ್ಲಿ ಚರಣ್​ ರಾಜ್​ ನಿರ್ದೇಶನ; "ಕರುನಾಡ ಕಣ್ಮಣಿ'ಯಾಗಿ ಚರಣ್​ ದ್ವೀತಿಯ ಪುತ್ರ ದೇವ್​ ಪದಾರ್ಪಣೆ

ಇದೇ ಮಾರ್ಚ್​ನಲ್ಲಿ ಚಿತ್ರದ ಶೂಟಿಂಗ್​ ಆರಂಭವಾಗಲಿದ್ದು, ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಮೂಡಿಬರಲಿದೆ. ವಿಶೇಷ ಅಂದರೆ ಚರಣ್​ ದ್ವೀತಿಯ ಪುತ್ರ ದೇವ್​, ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಅವರ ಜತೆ ಕಿಶೋರ್​ ಕುಮಾರ್​ ಕೂಡ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. “ಕರುನಾಡ ಕಣ್ಮಣಿ’ಗೆ ಸಾಗರ್​ ಗುರುರಾಜ್​ ಸಂಗೀತ, ಪೃಥ್ವಿ ಛಾಯಾಗ್ರಹಣವಿರಲಿದೆ. ಸದ್ಯ ತಾರಾಗಣದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.

ಕನ್ನಡದಲ್ಲಿ ಚರಣ್​ ರಾಜ್​ ನಿರ್ದೇಶನ; "ಕರುನಾಡ ಕಣ್ಮಣಿ'ಯಾಗಿ ಚರಣ್​ ದ್ವೀತಿಯ ಪುತ್ರ ದೇವ್​ ಪದಾರ್ಪಣೆ

ಚಿತ್ರದ ಬಗ್ಗೆ ಚರಣ್​ ರಾಜ್​, “”ಕರುನಾಡ ಕಣ್ಮಣಿ’ ಮರ್ಡರ್​ ಮಿಸ್ಟರಿ ಜಾನರ್​ ಸಿನಿಮಾ. ನಾನೇ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದೇನೆ. ಚಿತ್ರದ ಬಹುತೇಕ ಚಿತ್ರೀಕರಣ ಕಾಲೇಜ್​ನಲ್ಲಿ ನಡೆಯಲಿದ್ದು, ಕಾಲೇಜ್​ ಪರೀೆಗಳು ಮುಗಿದು ರಜೆ ಪ್ರಾರಂಭವಾದ ತಕ್ಷಣ ಶೂಟಿಂಗ್​ ಪ್ರಾರಂಭಿಸಲಿದ್ದೇವೆ. ಕನ್ನಡ ಭಾಗದ ಶೂಟಿಂಗ್​ ಬೆಂಗಳೂರಿನಲ್ಲಿ, ತಮಿಳು ವರ್ಷನ್​ ಪಾಂಡಿಚೆರಿ ಮತ್ತು ಕಡಲೂರಿನಲ್ಲಿ ಹಾಗೂ ಹೊಂಗನೂರಿನಲ್ಲಿ ತೆಲುಗು ಭಾಷೆಯ ಚಿತ್ರೀಕರಣ ನಡೆಸಲಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ.

Share This Article

ನಿಮ್ಮ ಕನಸಿನಲ್ಲಿ ಗಿಳಿ, ಗೂಬೆ, ನವಿಲು ಕಾಣಿಸಿಕೊಂಡಿದ್ಯಾ? ಈ ಪಕ್ಷಿಗಳಿಂದ ಬರಲಿದ್ಯಾ ಅದೃಷ್ಟ.. dreams

dreams: ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ, ಕನಸುಗಳು ಬಹಳ ಮುಖ್ಯ. ಕನಸಿನಲ್ಲಿ ಗಿಳಿ, ಗೂಬೆ, ನವಿಲು ಮುಂತಾದ…

ಪ್ರತಿದಿನ ಊಟಕ್ಕೆ ಗರಿಗರಿ ಹಪ್ಪಳ ಬೇಕಾ? ಹಾಗಿದ್ರೆ ಆರೋಗ್ಯ ಬಗ್ಗೆ ಇರಲಿ ಎಚ್ಚರ..papad

papad: ಹಪ್ಪಳಗಳನ್ನು ಊಟದಲ್ಲಿ ರುಚಿ ಇರಲಿ ಎಂಬ ಕಾರಣಕ್ಕೆ ಬಳಸುತ್ತಾರೆ. ಹಾಗಾಗಿ ಊಟಕ್ಕೆ ರುಚಿ ಇದೆ…

ಬೇಸಿಗೆಯಲ್ಲಿ ಈ 5 ಪದಾರ್ಥಗಳೊಂದಿಗೆ ಅಪ್ಪಿ ತಪ್ಪಿಯೂ ಮೊಸರು ತಿನ್ನಬೇಡಿ! | Yogurt

Yogurt : ಬೇಸಿಗೆಯಲ್ಲಿ, ಮೊಸರು ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ. ಆದರೆ, ಮೊಸರಿನೊಂದಿಗೆ ಅಥವಾ ಅದರ…