​ಕೇವಲ ಶಾಸಕನಾಗಲು ನಾನೇಕೆ ಸ್ಪರ್ಧೆ ಮಾಡಲಿ: ಅಂಬರೀಶ್​

ಬೆಂಗಳೂರು: ಟಿಕೆಟ್​ ಕೊಟ್ಟರೂ ಬಿ ಫಾರಂ ಪಡೆಯದ ನಟ ಕಮ್​ ಶಾಸಕ ಅಂಬರೀಶ್ ಚುನಾವಣಾ ಕಣಕ್ಕಿಳಿಯುವ ಮುನ್ನವೇ ಷರತ್ತು ವಿಧಿಸಿದ್ದಾರೆ.

​ಕೇವಲ ಶಾಸಕನಾಗಲು ನಾನೇಕೆ ಚುನಾವಣೆಗೆ ಸ್ಪರ್ಧೆ ಮಾಡಲಿ. ನನ್ನನ್ನ ಕೇಳದೇ ಸಚಿವ ಸ್ಥಾನದಿಂದ ತೆಗೆದಿದ್ದೀರಿ. ಬಳಿಕ ನನ್ನನ್ನು ಕ್ಯಾರೆ ಎನ್ನಲಿಲ್ಲ. ಒಂದು ವೇಳೆ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ನನಗೆ ಏನು ಸ್ಥಾನಮಾನ ಕೊಡ್ತೀರಾ? ಈ ಬಗ್ಗೆ ಮೊದಲೇ ನಿರ್ಧಾರ ಮಾಡಿ ತಿಳಿಸಿ ಜತೆಗೆ ಉಸ್ತುವಾರಿ ಸಹ ನನಗೆ ನೀಡಬೇಕು ಎಂದು ನಿನ್ನೆ ಮಾತುಕತೆಗೆ ಬಂದಿದ್ದ ಜಾರ್ಜ್​ಗೆ ಅಂಬರೀಷ್ ಷರತ್ತು ಹಾಕಿದ್ದಾರೆ.

ಸಿದ್ದರಾಮಯ್ಯಗೆ ಚಲುವರಾಯಸ್ವಾಮಿ ತುಂಬಾ ಆಪ್ತರಾದ ಹಿನ್ನೆಲೆ ಸ್ಥಾನಮಾನ ತಪ್ಪಬಹುದು ಅನ್ನೋ ಆತಂಕದಲ್ಲಿರುವ ಅಂಬರೀಷ್ ಷರತ್ತು ವಿಧಿಸಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ, ಜಿ.ಪರಮೇಶ್ವರ್ ಗಮನಕ್ಕೆ ತರುತ್ತೇನೆ ಎಂದು ಜಾರ್ಜ್ ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

3 Replies to “​ಕೇವಲ ಶಾಸಕನಾಗಲು ನಾನೇಕೆ ಸ್ಪರ್ಧೆ ಮಾಡಲಿ: ಅಂಬರೀಶ್​”

Leave a Reply

Your email address will not be published. Required fields are marked *