16 C
Bangalore
Saturday, December 7, 2019

 ನಟನದಲ್ಲಿ ‘ಅಶೋಕವನ’ ನಾಟಕ

Latest News

ಎಲ್ಲ ಸಮುದಾಯಗಳ ನಾಯಕ ಬಾಬಾಸಾಹೇಬ್

ಚಿಕ್ಕಬಳ್ಳಾಪುರ: ಪುತ್ಥಳಿಗೆ ಮಾಲಾರ್ಪಣೆ, ಉಪನ್ಯಾಸ ಸೇರಿ ವಿವಿಧ ಕಾರ್ಯಕ್ರಮಗಳೊಂದಿಗೆ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್‌ರವರ ಪರಿನಿಬ್ಬಾಣ ದಿನ ಶುಕ್ರವಾರ ನಡೆಯಿತು....

ಮತಯಂತ್ರಕ್ಕೆ ಪೊಲೀಸ್ ಸರ್ಪಗಾವಲು

ಹಾವೇರಿ: ಜಿಲ್ಲೆಯ ರಾಣೆಬೆನ್ನೂರ ಹಾಗೂ ಹಿರೇಕೆರೂರ ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ತಾಲೂಕಿನ ದೇವಗಿರಿಯಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್​ನ ಸ್ಟ್ರಾಂಗ್ ರೂಂನಲ್ಲಿ ಪೊಲೀಸ್ ಸರ್ಪ...

ಅಳಿದುಳಿದ ಉಳ್ಳಾಗಡ್ಡಿಗೂ ಡಿಮಾಂಡ್

ರಾಣೆಬೆನ್ನೂರ: ಕಳೆದ ಒಂದು ತಿಂಗಳ ಹಿಂದೆ ಸಂಪೂರ್ಣ ಬೆಲೆ ಕಳೆದುಕೊಂಡಿದ್ದ ಉಳ್ಳಾಗಡ್ಡಿ ಬೆಳೆಗೆ ಇದೀಗ ಭಾರಿ ಡಿಮಾಂಡ್ ಬಂದಿದೆ. ದರದಲ್ಲಿ ಕೂಡ ಭಾರಿ...

ಸಿಸಿಐನಿಂದ ಹತ್ತಿ ಖರೀದಿ ಶುರು

ಲಕ್ಷ್ಮೇಶ್ವರ: ಒಂದು ವಾರದಿಂದ ಮೋಡ ಕವಿದ ವಾತಾವರಣ ಮತ್ತು ತುಂತುರು ಮಳೆಯಿಂದಾಗಿ ಭಾರತೀಯ ಹತ್ತಿ ನಿಗಮ (ಸಿಸಿಐ)ದವರು ಬೆಂಬಲ ಬೆಲೆಯಡಿ ಹತ್ತಿ...

ಕೆಲಗೇರಿ ಕೆರೆ ಸಂರಕ್ಷಣೆಗೆ ಕ್ರಮ

ಧಾರವಾಡ: ನಗರದ ಇತಿಹಾಸ ಮತ್ತು ನೈಸರ್ಗಿಕ ಪರಂಪರೆ ಪ್ರತಿನಿಧಿಸುವ ಕೆಲಗೇರಿ ಮತ್ತು ಸಾಧನಕೇರಿ ಕೆರೆಗಳನ್ನು ಸಂರಕ್ಷಿಸಿ ಅಬಿವೃದ್ಧಿಪಡಿಸಲಾಗುತ್ತದೆ. ಕೆರೆಗಳ ಸೌಂದಯೀಕರಣಗೊಳಿಸಿ ಪ್ರವಾಸಿತಾಣಗಳಾಗಿ ರೂಪಿಸಲು...

ಮೈಸೂರು: ರಾಮಕೃಷ್ಣನಗರದಲ್ಲಿರುವ ಮಂಡ್ಯ ರಮೇಶ್ ನೇತೃತ್ವದ ನಟನ ರಂಗಶಾಲೆಯಲ್ಲಿ ನ.17ರಂದು ಸಂಜೆ 6.30ಕ್ಕೆ ಬೆಳ್ಳಾವೆ ನರಹರಿ ಶಾಸ್ತ್ರಿಗಳ ಪೌರಾಣಿಕ ನಾಟಕ ಆಧರಿತ ‘ಅಶೋಕವನ’ ನಾಟಕ ಪ್ರದರ್ಶನಗೊಳ್ಳಲಿದೆ.

ಎಚ್.ಎಸ್.ಗೋವಿಂದೇಗೌಡ ಅವರ ನಿರ್ದೇಶನದಲ್ಲಿ ಬೆಂಗಳೂರಿನ ರಂಗ ರತ್ನಾಕರ ತಂಡ ನಾಟಕವನ್ನು ಪ್ರಸ್ತುತಪಡಿಸುತ್ತಿದೆ.

ಕಿರಗಸೂರು ರಾಜಪ್ಪ ಅವರು ಈ ನಾಟಕಕ್ಕೆ ಸಂಗೀತ ಮತ್ತು ಹಾರ್ಮೋನಿಯಂ ನೀಡಿದ್ದು, ಬಿ.ಎಂ.ರಾಮಚಂದ್ರ ಅವರು ವಸ್ತ್ರ ವಿನ್ಯಾಸಗೊಳಿಸಿದ್ದಾರೆ. ನಾಟಕದ ನಂತರ ಆಕರ್ಷಕ ವೃತ್ತಿ ರಂಗಗೀತೆಗಳು ಜನರನ್ನು ರಂಜಿಸಲಿವೆ.

ಸಂಪೂರ್ಣ ರಾಮಾಯಣದ ಒಂದು ಭಾಗ ಈ ಅಶೋಕವನ ನಾಟಕವಾಗಿದೆ. ರಾವಣ ಸೀತೆಯನ್ನು ದಂಡಕಾರಣ್ಯದಿಂದ ಅಪಹರಿ ಸಿಕೊಂಡು ಅಶೋಕವನದಲ್ಲಿ ಬಂಧಿಯಾಗಿರಿಸಿ ತನ್ನನ್ನು ವರಿಸು, ಸೇವಿಸು ಎಂದು ಹಿಂಸಿಸುತ್ತಿರುತ್ತಾನೆ. ಅದೇ ಸಮಯಕ್ಕೆ ಅಲ್ಲಿ ಆಂಜನೇಯನ ಪ್ರವೇಶವಾಗುತ್ತದೆ. ಇಲ್ಲಿಂದ ಪ್ರಾರಂಭವಾಗುವ ನಾಟಕ ಸೀತೆ-ಆಂಜನೇಯನ ಸಂವಾದ, ರಾವಣನ ದರ್ಬಾರು, ಆಂಜನೇಯನಿಂದ ಅಶೋಕವನದ ಧ್ವಂಸ ಈ ನಾಟಕದ ಪ್ರಮುಖ ಕಥಾವಸ್ತುವಾಗಿದೆ.

ಕರ್ನಾಟಕ ಶಾಸ್ತ್ರೀಯ ಸಂಗೀತ
ಶ್ರೀನಾದಬ್ರಹ್ಮ ಸಂಗೀತ ಸಭಾದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ನ.16 ಮತ್ತು 17ರಂದು ಜೆಎಲ್‌ಬಿ ರಸ್ತೆಯ ಸಂಗೀತ ಕಲಾನಿಧಿ ಕೆ.ವಾಸುದೇವಾಚಾರ್ಯ ಭವನದಲ್ಲಿ ಆಯೋಜಿಸಲಾಗಿದೆ.

16 ರಂದು ಸಂಜೆ 6 ಗಂಟೆಗೆ ಶ್ರೀಮತಿ ರುಕ್ಮಿಣಿ ಅಮ್ಮಾಳ್ ಮತ್ತು ಶ್ರೀರಾಮಸ್ವಾಮಿ ಅಯ್ಯಂಗಾರ್ ಸ್ಮರಣಾರ್ಥ ವಿದ್ವಾನ್ ಮಧುರೈ ಶಿವಗಣೇಶನ್ ಸಂಗೀತ ಕಛೇರಿ ನೀಡಲಿದ್ದಾರೆ. ಇವರಿಗೆ ವಿದ್ವಾನ್ ಎಚ್.ವಿ.ರಘುರಾಂ(ಪಿಟೀಲು), ವಿದ್ವಾನ್ ಎ.ರಾಧೇಶ್(ಮೃದಂಗ), ವಿದ್ವಾನ್ ಎಸ್.ಮಂಜುನಾಥ್(ಘಟಂ) ಸಾಥ್ ನೀಡಲಿದ್ದಾರೆ.

17 ರಂದು ಸಂಜೆ 5 ಗಂಟೆಗೆ ಶ್ರೀಮತಿ ಡಿ.ರಮಾಬಾಯಿ ಮೆಮೋರಿಯಲ್ ಪುದುವಟ್ಟು ಕಾರ್ಯಕ್ರಮದ ಪ್ರಯುಕ್ತ ಪದ್ಮಭೂಷಣ ವಿದ್ವಾನ್ ಟಿ.ವಿ.ಶಂಕರನಾರಾಯಣನ್ ಸಂಗೀತ ಕಛೇರಿ ನಡೆಸಿಕೊಡಲಿದ್ದಾರೆ. ಇವರಿಗೆ ವಿದ್ವಾನ್ ಮತ್ತೂರು ಶ್ರೀನಿಧಿ(ಪಿಟೀಲು), ವಿದ್ವಾನ್ ತುಮಕೂರು ಬಿ.ರವಿಶಂಕರ್(ಮೃದಂಗ), ವಿದ್ವಾನ್ ಶರತ್ ಕೌಶಿಕ್(ಘಟಂ) ಸಹಕಾರ ನೀಡಲಿದ್ದಾರೆ.

ಸಂಗೀತ ಕಾರ್ಯಕ್ರಮ: ಗೀತಾ ಶಿಶು ಶಿಕ್ಷಣ ಸಂಘ ಪ್ರೊ.ಬಿ.ಎಸ್.ಪಂಡಿತ್ ಅವರ ಸ್ಮರಣಾರ್ಥ ‘ಸರಸ್ವತಿ’ ಹೆಸರಿನಲ್ಲಿ ಸಂಗೀತ ಕಾರ್ಯಕ್ರಮವನ್ನು ನ.16 ರಂದು ಸಂಜೆ 6 ಗಂಟೆಗೆ ಕೆಆರ್‌ಎಸ್ ರಸ್ತೆಯ ಜಿಎಸ್‌ಎಸ್‌ಎಸ್ ಮಹಿಳಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದೆ.

ಸಂಗೀತ ಕಲಾನಿಧಿ ಶ್ರೀಮತಿ ಸುಧಾ ರಘುನಾಥನ್ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಇವರಿಗೆ ಚಾರುಮತಿ ರಘುರಾಮನ್ (ವಯೋಲಿನ್), ಎನ್.ಸಿ.ಭಾರದ್ವಜ್(ಮೃದಂಗ), ಆರ್.ರಾಮನ್‌ಸಾಥ್ ನೀಡಲಿದ್ದಾರೆ.

ಕಾರ್ಯಕ್ರಮಕ್ಕೆ ಆಗಮಿಸುವ ಸಂಗೀತ ರಸಿಕರಿಗೆ ಅನುಕೂಲವಾಗುವಂತೆ ನಗರದ ವಿವಿಧ ಭಾಗಗಳಿಂದ ಅಂದು ಸಂಜೆ 4.15ಕ್ಕೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಿ ಕಾರ್ಯಕ್ರಮ ಮುಗಿದ ಬಳಿಕ ಮತ್ತೆ ಅದೇ ಸ್ಥಳಕ್ಕೆ ತಲುಪಿಸಲಾಗುವುದು.

ಟಿ.ಕೆ.ಲೇಔಟ್(ಕೃಷ್ಣಧಾಮದ ಬಳಿ), ಕುವೆಂಪುನಗರ(ಗಾನ ಭಾರತಿ), ಲಕ್ಷ್ಮೀಪುರಂ(ನಾದಬ್ರಹ್ಮ ಸಂಗೀತ ಸಭಾ), ಸಿದ್ದಾರ್ಥನಗರ(ಜಿಎಸ್‌ಎಸ್‌ಎಸ್ ಶಾಲೆ), ಒಂಟಿಕೊಪ್ಪಲು(ವೆಂಕಟೇಶ್ವರಸ್ವಾಮಿ ದೇವಸ್ಥಾನ), ರಾಮಸ್ವಾಮಿ ವೃತ್ತ(ಆಟೋನಿಲ್ದಾಣದ ಹತ್ತಿರ), ಸರಸ್ವತಿಪುರಂ(ಜವರೇಗೌಡ ಪಾರ್ಕ್)ನಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ಪುಷ್ಪ ಪಾರಿಜಾತ: ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ನ.17 ರಂದು ಸಂಜೆ 6.30ಕ್ಕೆ ‘ಪುಷ್ಪ ಪಾರಿಜಾತ’ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.
ಶ್ರೀಕಾಂತ್ ಕಿಶೋರ್ ಹಿಂದಿಯಲ್ಲಿ ರಚಿಸಿರುವ ಈ ನಾಟಕವನ್ನು ಸದಾಶಿವ ಗರುಡ (ಅಣ್ಣಯ್ಯ) ಕನ್ನಡಕ್ಕೆ ಅನುವಾದಿಸಿದ್ದಾರೆ. ಪಾಟ್ನಾದ ಸಂಜಯ್ ಉಪಾಧ್ಯಾಯ ನಾಟಕವನ್ನು ನಿರ್ದೇಶಿಸಿದ್ದಾರೆ.

ಕಥೆ ಕೇಳೋಣ ಬನ್ನಿ: ಕುವೆಂಪುನಗರದ ಕಲಾಸುರುಚಿ ಸಂಸ್ಥೆಯಲ್ಲಿ ನ.16 ರಂದು ಸಂಜೆ 4.30ರಿಂದ 5.30ರವರೆಗೆ ಮಕ್ಕಳಿಗಾಗಿ ‘ಕಥೆ ಕೇಳೋಣ ಬನ್ನಿ-666’ ಕಾರ್ಯಕ್ರಮ ಆಯೋಜಿಸಲಾಗಿದೆ. ಕೆನರಾ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಅಪರಾಜಿತಾ ರವೀಂದ್ರನಾಥ ಮಕ್ಕಳಿಗೆ ಕಥೆ ಹೇಳಲಿದ್ದಾರೆ.
 

Stay connected

278,739FansLike
581FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...

VIDEO| ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ನಿಲ್ಲಿಸುತ್ತಿದ್ದಂತೆ ಯುವತಿ ಮೇಲೆ ಫೈರಿಂಗ್​:...

ಲಖನೌ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ನೃತ್ಯಗಾರ್ತಿಯ ಮುಖಕ್ಕೆ ಫೈರಿಂಗ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕಳೆದ ವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕಾನ್ಪುರ ಆಸ್ಪತ್ರೆಗೆ...

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...