Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ನ್ಯಾಷನಲ್ ಕ್ರಶ್ ನಟಿ ಪ್ರಿಯಾ ವಿರುದ್ಧವೇ ದೂರು ದಾಖಲು!

Wednesday, 14.02.2018, 11:39 AM       No Comments

ಹೈದರಾಬಾದ್​: ನ್ಯಾಷನಲ್ ಕ್ರಶ್ ಸೃಷ್ಟಿಸಿ ಯುವಕರು ಸೇರಿ ಎಲ್ಲ ವಯೋಮಾನದವರ ಹೃದಯ ಕದ್ದಿದ್ದ ನಟಿ ಪ್ರಿಯಾ ಪ್ರಕಾಶ್ ವಾರಿಯರ್​ಗೆ ಈಗ ಸ್ವತಃ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಮುಸ್ಲಿಂ ಭಾವನೆಗಳಿಗೆ ಧಕ್ಕೆ ಆರೋಪದಡಿ ಮೊಹಮ್ಮದ್ ಅಬ್ದುಲ್ಲಾ ಎಂಬುವವರು ಕೇರಳದ ಹುಬ್ಬೇರಿಸೋ ಹುಡುಗಿ ಪ್ರಿಯಾ ವಿರುದ್ಧ ಹೈದರಾಬಾದ್​ ಪೊಲೀಸ್ ಠಾಣೆಯೊಂದರಲ್ಲಿ ದೂರು ದಾಖಲಿಸಿದ್ದಾರೆ.

‘ಒರು ಅಡರ್ ಲವ್ ’ ಚಿತ್ರದ  ಲವ್ ಸಾಂಗ್​ನಲ್ಲಿ ಮುಸ್ಲಿಂ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಮೊಹಮ್ಮದ್ ದೂರಿನಲ್ಲಿ ತಿಳಿಸಿದ್ದಾರೆ.

ಗೀತೆ ಕೇಳಿದಾಗ ಮುಸ್ಲಿಂ ಸಮುದಾಯಕ್ಕೆ ಧಕ್ಕೆಯನ್ನುಂಟು ಮಾಡಿರುವ ಸಾಹಿತ್ಯ ಕಂಡು ಬಂತು. ಕೇವಲ ಹೈದ್ರಾಬಾದ್​ನಲ್ಲಿ ಮಾತ್ರ ಕೇಸ್ ದಾಖಲಿಸಿಲ್ಲ. ಕೇರಳದ ಕಮಿಷನರ್​ಗೂ ದೂರು ನೀಡಿದ್ದೇವೆ ಎಂದು ಇನ್ನೊಬ್ಬ ದೂರುದಾರ ಜಾಹೀರ್ ಅಲಿ ಖಾನ್ ಹೇಳಿದ್ದಾರೆ.

ಗೀತೆಯ ಎಲ್ಲ ಟ್ರಾನ್ಸ್ಲೇಷನ್ ಹಾಗೂ ವಿಡಿಯೋ ಕ್ಲಿಪ್ ಅ​ನ್ನು ಕೂಡ ಕಳಿಸಿದ್ದೇವೆ. ಹಾಡಿನ ವಿರುದ್ಧ ಪ್ರತಿಭಟನೆ ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back To Top