ಆ್ಯಸಿಡ್ ದಾಳಿಯಿಂದಾಗಿ ಕಣ್ಣು ಕಳೆದುಕೊಂಡಳು, ರೂಪ ಕಳೆದುಕೊಂಡಳು; ಆದ್ರೂ ಮದುವೆ ಆಗಲು ಹುಡುಗ ಸಿಕ್ಕಿದ…

ನವದೆಹಲಿ: ಈಕೆ ಆ್ಯಸಿಡ್ ದಾಳಿಯಿಂದಾಗಿ ತನ್ನ ಎರಡೂ ಕಂಗಳನ್ನು ಕಳೆದುಕೊಂಡಿದ್ದಾಳೆ, ರೂಪವನ್ನೂ ಕಳೆದುಕೊಂಡಿದ್ದಾಳೆ. ಅದಾಗ್ಯೂ ಸ್ನೇಹಿತನೊಬ್ಬ ಈಕೆಯನ್ನು ಮದುವೆಯಾಗಿದ್ದು, ಇಬ್ಬರ ಮದುವೆ ಈಗ ಬಹಳಷ್ಟು ಜನರಷ್ಟೇ ಅಲ್ಲ ಸರ್ಕಾರದ ಗಮನವನ್ನೂ ಸೆಳೆದಿದೆ. ಹೌದು.. ಒಡಿಶಾದ ‘ಛಪಾಕ್’​ ಹುಡುಗಿ ಎಂದೇ ಖ್ಯಾತಿ ಪಡೆದಿರುವ 29 ವರ್ಷದ ಪ್ರಮೋದಿನಿಯನ್ನು ಹಳೆಯ ಗೆಳೆಯ ಸರೋಜ್ ಸಾಹು ಮಂಗಳವಾರ ಮದುವೆಯಾಗಿದ್ದು, ಬಹುತೇಕರ ಮೆಚ್ಚುಗೆಗೆ ಪಾತ್ರವಾಗಿದೆ. ಒಡಿಶಾದ ಜಗತ್​ಸಿಂಗ್​ಪುರ ಜಿಲ್ಲೆಯಲ್ಲಿ ನಡೆದ ಈ ಮದುವೆಗೆ ಅಲ್ಲಿನ ರಾಜ್ಯಪಾಲ ಗಣೇಶಿ ಲಾಲ್​ ಮಾತ್ರವಲ್ಲದೆ ಶಿಕ್ಷಣ ಸಚಿವ … Continue reading ಆ್ಯಸಿಡ್ ದಾಳಿಯಿಂದಾಗಿ ಕಣ್ಣು ಕಳೆದುಕೊಂಡಳು, ರೂಪ ಕಳೆದುಕೊಂಡಳು; ಆದ್ರೂ ಮದುವೆ ಆಗಲು ಹುಡುಗ ಸಿಕ್ಕಿದ…