More

    ಪಲ್ಸ್ ಪೋಲಿಯೋದಲ್ಲಿ ಶೇ.95ರಷ್ಟು ಸಾಧನೆ

    ಮಂಡ್ಯ: ಜಿಲ್ಲಾದ್ಯಂತ ಭಾನುವಾರ ಜಿಲ್ಲಾ ಆರೋಗ್ಯ ಇಲಾಖೆಯಿಂದ ಮೊದಲ ದಿನವೇ 1,18663 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಗಿದೆ.

    ಜ.19ರಿಂದ 22ರವರೆಗೆ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಐದು ವರ್ಷದೊಳಗಿನ 1,24,886 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಶೇ.95.02ರಷ್ಟು ಸಾಧನೆ ಮಾಡಿದೆ. ಈ ಪೈಕಿ ನಾಗಮಂಗಲ ತಾಲೂಕಿನಲ್ಲಿ ನಿಗದಿತ ಗುರಿಗಿಂತ ಹೆಚ್ಚಿನ ಮಕ್ಕಳಿಗೆ ಲಸಿಕೆ ಹಾಕುವ ಸಾಧನೆ ಮಾಡಲಾಗಿದೆ.

    ಮಂಡ್ಯ ತಾಲೂಕಿನಲ್ಲಿ 29,903(ಶೇ.85.8) ಮತ್ತು ಮದ್ದೂರಿನಲ್ಲಿ 18,504(ಶೇ.97.1), ಮಳವಳ್ಳಿಯಲ್ಲಿ 19,205(ಶೇ.97), ಪಾಂಡವಪುರದಲ್ಲಿ 11,092(ಶೇ.98.8), ಶ್ರೀರಂಗಪಟ್ಟಣದಲ್ಲಿ 11,037(ಶೇ.98.6), ಕೆ.ಆರ್.ಪೇಟೆಯಲ್ಲಿ 16,696(ಶೇ.96.6) ಮತ್ತು ನಾಗಮಂಗಲ ತಾಲೂಕಿನಲ್ಲಿ 12,226(ಶೇ.106.7) ಲಸಿಕೆ ಹಾಕಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಪಿ.ಮಂಚೇಗೌಡ ತಿಳಿಸಿದ್ದಾರೆ.

    ನಗರದ ಶುಗರ್‌ಟೌನಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಲಿಯೋ ಹಾಕುವ ಕಾರ್ಯಕ್ರಮಕ್ಕೆ ಶಾಸಕ ಎಂ.ಶ್ರೀನಿವಾಸ್ ಚಾಲನೆ ನೀಡಿದರು.

    ಜಿ.ಪಂ ಸಿಇಒ ಕೆ.ಯಾಲಕ್ಕಿಗೌಡ ಮಾತನಾಡಿ, ಜಿಲ್ಲಾದ್ಯಂತ ಗ್ರಾಮೀಣ ಪ್ರದೇಶದಲ್ಲಿ 3 ಹಾಗೂ ನಗರದಲ್ಲಿ 4 ದಿನ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಲಿದೆ. ಐದು ವರ್ಷದೊಳಗಿನ ತಮ್ಮ ಮಕ್ಕಳಿಗೆ ಪಾಲಕರು ತಪ್ಪದೇ ಲಸಿಕೆ ಹಾಕಿಸಬೇಕು ಎಂದು ಸಲಹೆ ನೀಡಿದರು.

    ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಪಿ.ಮಂಚೇಗೌಡ, ನಗರಸಭಾ ಆಯುಕ್ತ ಎಸ್.ಲೋಕೇಶ್, ರೆಡ್‌ಕ್ರಾಸ್ ಸಂಸ್ಥೆ ಉಪಾಧ್ಯಕ್ಷೆ ಮೀರಾ ಶಿವಲಿಂಗಯ್ಯ, ತಹಸೀಲ್ದಾರ್ ಎಲ್.ನಾಗೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ರಾಜಮೂರ್ತಿ, ಬಿಇಒ ಚಂದ್ರಕಾಂತಾ, ಡಾ.ಸೋಮಶೇಖರ್ ಇತರರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts