ವಿಜಯಪುರ : ನಗರದ ಆಕ್ಸಫರ್ಡ್ ಐಐಟಿ ಒಲಂಪಿಯಾಡ್ ಶಾಲೆಯ ವಿದ್ಯಾರ್ಥಿಗಳು ಇತ್ತೀಚೆಗೆ ಧಾರಾವಾಡದಲ್ಲಿ ಕ್ಲಿಕ್ಸ್ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆಗೈದಿದ್ದಾರೆ.
ಶಾಲೆಯ ಸೃಷ್ಟಿ ಗುಡದರಿ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ, ಭವಾನಿ ದೇಶಪಾಂಡೆ ಭಾಷಣ ಸ್ಪರ್ಧೆಯಲ್ಲಿ, ಅನನ್ಯ ಗೌರಿಮಠ ಚಿತ್ರಕಲೆಯಲ್ಲಿ ಮತ್ತು ವೈಷನ ಬಡಿಗೆರ, ಪ್ರತಿಾ ಕಾರ್ತಾಳ ಹಾಗೂ ಪ್ರಣಿತಾ ಮದಭಾವಿ ವಿದ್ಯಾರ್ಥಿಗಳು ಗುಂಪು ನೃತ್ಯ ಸರ್ಧೆಯಲ್ಲಿ ದ್ವಿತಿಯ ಸ್ಥಾನ ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಕಾರ್ಯದರ್ಶಿ ಬಸವರಾಜ ಕೌಲಗಿ, ಶಾಲೆಯ ಆಡಳಿತಾಧಿಕಾರಿ ಪ್ರವಿಣ ಲಿಂಗದಳ್ಳಿ, ಪ್ರಾಚಾರ್ಯ ಗುರುಪ್ರಸಾದ ಯರಗಟ್ಟಿಮಠ ಹರ್ಷ ವ್ಯಕ್ತಪಡಿಸಿದ್ದಾರೆ.