ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳು ಆಸಕ್ತಿಯಿಂದ ಸತತ ಪ್ರಯತ್ನ ಮಾಡಿದರೆ ಉನ್ನತ ಹುದ್ದೆಗೆ ಏರಬಹುದು. ಹಣಕ್ಕಿಂತ ಸಾಧನೆ ಮುಖ್ಯ. ಆತ್ಮಸ್ಥೆರ್ಯ ದಿಂದ ಬದುಕಿನಲ್ಲಿ ಎದುರಾಗುವ ಕಷ್ಟಗಳನ್ನು ಅನುಭವಿಸಿದಾಗ ಮಾತ್ರ ಸಾಧನೆ ಸಾಧ್ಯ ನಿವೃತ್ತ ಪ್ರಾಚಾರ್ಯ ಪ್ರೊ. ಎಂ.ಎಂ. ನರಗುಂದ ಹೇಳಿದರು.
ನಗರದ ಭಾರತಿ ನಗರದ ಗುರುದೇವ ಪದವಿ ಪೂರ್ವ ಸಮೂಹ ಸಂಸ್ಥೆಯಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಾಗೂ ಸ್ನೇಹ ಸಮ್ಮೇಳನ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾಲೇಜಿನ ನಿರ್ದೇಶಕ ಅಖಿಲಕುಮಾರ ಹಲಗತ್ತಿ ಮಾತನಾಡಿ, ಸಮರ್ಪಣಾ ಮನೋಭಾವ ಬೆಳೆಸಿಕೊಳ್ಳಬೇಕು. ತಮ್ಮನ್ನು ತಾವು ಓದಿಗಾಗಿ ಸಮರ್ಪಿಸಿಕೊಂಡಾಗ ಸಾಧನೆ ಮಾಡಲು ಸಾಧ್ಯ. ವಿದ್ಯಾರ್ಥಿಗಳಿಗೆ ಅದ್ಭುತ ಭವಿಷ್ಯ ಸಿಗಲಿ ಎಂದರು.
ಕಾಲೇಜಿನ ಉಪಪ್ರಾಚಾರ್ಯ ಮಹಲಿಂಗ ಕಮತಗಿ ಮಾತನಾಡಿ, ತಂದೆ-ತಾಯಿ ಮತ್ತು ಶಿಕ್ಷಕರ ಮಾರ್ಗದರ್ಶನದಂತೆ ತಮ್ಮ ಕಾರ್ಯದಲ್ಲಿ ಶ್ರದ್ಧೆ, ಭಕ್ತಿಯನ್ನು ಮೈಗೂಡಿಸಿಕೊಂಡರೆ ಧ್ರುವತಾರೆಗಳಂತೆ ಮಿನುಗುತ್ತಾರೆ ಎಂದರು.
ಮದನ ಇ.ಜಿ ವರದಿ ವಾಚಿಸಿದರು. ಕಾಲೇಜಿನ ಆಡಳಿತಾಧಿಕಾರಿ ಸಾಜಿದ್, ಉಪನ್ಯಾಸಕರು, ಸಿಬ್ಬಂದಿ, ಪಾಲಕರು, ಇತರರು ಇದ್ದರು. ಕುಮಾರ ಪೂಜಾರ ಸ್ವಾಗತಿಸಿದರು. ಸಹನಾ, ಅದಿತಿ ನಿರೂಪಿಸಿದರು. ಉತ್ತಮಕುಮಾರ ವಂದಿಸಿದರು.
ಕಷ್ಟಗಳನ್ನು ಅನುಭವಿಸಿದಾಗಲೇ ಸಾಧನೆ ಸಾಧ್ಯ

You Might Also Like
ಕುತ್ತಿಗೆ-ತಲೆ ನೋವನ್ನು ನಿರ್ಲಕ್ಷಿಸುತ್ತಿದ್ದೀರಾ?; ಎಚ್ಚರದಿಂದಿರಿ.. ಇದು ಅಪಾಯದ ಮುನ್ಸೂಚನೆ | Health Tips
ಕುತ್ತಿಗೆ ಮತ್ತು ಭುಜದ ಸುತ್ತಲಿನ ಪ್ರದೇಶದಲ್ಲಿನ ನೋವನ್ನು ನಿರ್ಲಕ್ಷಿಸುವ ತಪ್ಪನ್ನು ಮಾಡಬೇಡಿ. ಏಕೆಂದರೆ ಇದು ಸರ್ವಿಕಲ್…
ಅಳದಿದ್ದರು ಕಣ್ಣೀರು ಬರುತ್ತಿದೆಯೇ; ತಜ್ಞರು ಸೂಚಿಸಿರುವ ಸಿಂಪಲ್ ಪರಿಹಾರ ಹೀಗಿದೆ.. Health Tips
ಸೌಂದರ್ಯವನ್ನು ಅಳೆಯಲು ಕಣ್ಣುಗಳು ಒಂದು ಪ್ರಮುಖ ಮಾನದಂಡವಾಗಿದೆ. ಇದು ಪ್ರಮುಖ ಇಂದ್ರಿಯಗಳಲ್ಲಿ ಒಂದಾಗಿದೆ. ಅದಿಲ್ಲದೆ ಜೀವನವನ್ನು…
ಮ್ಯಾರೇಜ್ಗೆ ಸರಿಯಾದ ವಯಸ್ಸೇಷ್ಟು ಗೊತ್ತೆ?; ತಡವಾಗಿ ಮದುವೆಯಾಗುವುದರಿಂದ ಅನುಕೂಲ, ಅನಾನೂಕುಲಗಳೇನು? | Marriage
marriage: ಕೆಲ ದಶಕಗಳ ಹಿಂದೆ ಬಾಲ್ಯ ವಿವಾಹ ನಡೆಯುವುದು ಸಾಮಾನ್ಯವಾಗಿತ್ತು. ಬಳಿಕ ಕಾನೂನು ಕಣ್ತಪ್ಪಿಸಿ ಕದ್ದು…