ಬೆಳಗಾವಿ: ಕಲಾಶಕ್ತಿ ಬಹುದೊಡ್ಡದು. ಅದು ನಮ್ಮೊಳಗೆ ಮನೆಮಾಡಿಕೊಂಡಿರುತ್ತದೆ. ನಾವಾರೆಂದು ತಿಳಿದುಕೊಳ್ಳುವ ಮೂಲಕ ನಮ್ಮೊಳಗಿನ ಪ್ರತಿಭೆ ನಾವೇ ಗುರುತಿಸಿಕೊಳ್ಳಬೇಕು ಎಂದು ಚಿತ್ರನಟಿ ಅಂಕಿತಾ ಅಮರ ಹೇಳಿದರು.
ಲಿಂಗರಾಜ ಬಿಬಿಎ ಮಹಾವಿದ್ಯಾಲಯವು ಪದವಿಪೂರ್ವ ವಿದ್ಯಾರ್ಥಿಗಳಿಗೆ ಜೆಎನ್‌ಎಂಸಿ ಜೀರಗೆ ಸಭಾಗೃಹದಲ್ಲಿ ಆಯೋಜಿಸಿರುವ ಎರಡು ದಿನಗಳ ಅಂತರ್ ಕಾಲೇಜು ವೃತ್ತಾಂತ ಯುವಜನೋತ್ಸವಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮನ್ನು ನಾವು ತಿಳಿದುಕೊಳ್ಳಬೇಕು. ನಮ್ಮ ಗುರಿ ನಿರ್ಧರಿಸಿಕೊಳ್ಳಬೇಕು. ಜೀವನ ಎನ್ನುವುದು ಸುಂದರ ತಪಸ್ಸು. ಅನೇಕ ಸವಾಲುಗಳಿಂದ ಕೂಡಿದ ಈ ಜೀವನವನ್ನು ಪ್ರೀತಿಯಿಂದ ಸ್ವೀಕರಿಸಬೇಕು. ಅಂದಾಗ ಏನಾದರೂ ನಾವು ಸಾಧಿಸಲು ಸಾಧ್ಯ. ಎಲ್ಲಕ್ಕೂ ಮುಖ್ಯವಾಗಿ ನಮಗೆ ಬದುಕನ್ನು ನೀಡಿದ ತಂದೆ-ತಾಯಿ ಋಣ ಹಾಗೂ ಶಿಕ್ಷಕರನ್ನೂ ಮರೆಯಬಾರದು. ಅವರ ಮಾರ್ಗದರ್ಶನ ಹಾಗೂ ಬೋಧನೆ ನಮ್ಮ ಬದುಕಿನುದ್ದಕ್ಕೂ ಆಶ್ರಯವಾಗಿರುತ್ತದೆ. ಅವಕಾಶಗಳನ್ನು ಬೆನ್ನಟ್ಟಬೇಕು. ನಮ್ಮೊಳಗಿನ ಪ್ರತಿಭೆಗೆ ಒಂದು ವೇದಿಕೆಯನ್ನು ನಾವೇ ಸಿದ್ಧ ಪಡಿಸಿಕೊಳ್ಳಬೇಕು ಎಂದರು.
ನಮ್ಮೊಳಗಿನ ಕೀಳರಿಮೆ ತೊರೆದು ಹೊಸ ಅನ್ವೇಷಣೆ, ಸಾಧನೆಯೆಡೆಗೆ ಹೆಜ್ಜೆ ಇಡುವುದು ಬಹುಮುಖ್ಯ. ಪಠ್ಯ ಹಾಗೂ ಪಠ್ಯತೇರ ಚಟುವಟಿಕೆಗಳು ನಮ್ಮನ್ನು ವಿಭಿನ್ನವಾಗಿ ರೂಪಿಸುತ್ತವೆ. ಆ ನಿಟ್ಟಿನಲ್ಲಿ ಮನಸ್ಸನ್ನು ಹದಗೊಳಿಸಿಕೊಳ್ಳಬೇಕು. ವ್ಯಾಪಾರ ವಾಣಿಜ್ಯ ಏನೇ ಇರಲಿ ಅದರ ಆಯಾಮಗಳನ್ನು ಅರಿತುಕೊಳ್ಳುವ ಕೌಶಲತೆ ಮೈಗೂಡಿಸಿಕೊಂಡರೆ ಜೀವನ ಅದ್ಭುತ್‌ವಾಗಿರುತ್ತದೆ. ಜೀವನಾನುಭವ ಕಟ್ಟಿಕೊಡುವ ಒಳ್ಳೆಯದನ್ನು ನಾವೆಲ್ಲರೂ ಅಪ್ಪಿಕೊಳ್ಳಬೇಕು ಎಂದು ಕಿವಿಮಾತು ಎಂದು ಹೇಳಿದರು.
ಹುಬ್ಬಳ್ಳಿ-ಧಾರವಾಡ, ವಿಜಯಪುರ, ಬಾಗಲಕೋಟೆ, ಮಹಾಲಿಂಗಪುರ, ರಬಕವಿ, ಜಮಖಂಡಿ, ಚಿಕ್ಕೋಡಿ, ನಿಪ್ಪಾಣಿ, ಖಾನಾಪೂರ ಮೊದಲ್ಗೊಂಡು ಉತ್ತರ ಕರ್ನಾಟಕದ ವಿವಿಧ ಪದವಿಪೂರ್ವ ಮಹಾವಿದ್ಯಾಲಯಗಳ 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಯುವ ಜನೋತ್ಸವದಲ್ಲಿ ಪಾಲ್ಗೊಂಡಿದ್ದರು. ಯುಜನೋತ್ಸವದ ಅಂಗವಾಗಿ ಚರ್ಚಾಸ್ಪರ್ಧೆ, ರಸಪ್ರಶ್ನೆ, ಕಾವ್ಯ ರಚನೆ, ಕಥಾವಾಚನ, ಕಾಮಿಡಿ, ಅಡುಗೆ ಸ್ಪರ್ಧೆ, ನೃತ್ಯ, ಫ್ಯಾಶನ್ ಷೋ, ಹಾಡು ಹೀಗೆ 40ಕ್ಕೂ ವಿವಿಧ ಲಲಿತ ಕಲೆಗಳ ಸ್ಪರ್ಧೆಯನ್ನು ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು.
ಬಿಬಿಎ ಮಹಾವಿದ್ಯಾಲಯದ ಪ್ರಾಚಾರ್ಯ, ಕೆಎಲ್‌ಇ ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ.ಪ್ರಕಾಶ ಕಡಕೋಳ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸ್‌ಸಿ ಸಂಯೋಜಕಿ ಪ್ರೊ. ವಿಭಾ ಹೆಗಡೆ ವೇದಿಕೆಯಲ್ಲಿದ್ದರು.
ಬದುಕನ್ನು ಪ್ರೀತಿಸಿದರೆ ಮಾತ್ರ ಸಾಧನೆ ಸಾಧ್ಯ
ವೆಜ್ ಪ್ರಿಯರಿಗಾಗಿ ಸ್ಟ್ರೀಟ್ ಸ್ಟೈಲ್ ಮೊಮೊಸ್; ಮನೆಯಲ್ಲೆ ಮಾಡಲು ಇಲ್ಲಿದೆ ಸಿಂಪಲ್ ವಿಧಾನ Recipe
ಸ್ಟ್ರೀಟ್ ಫುಡ್ ಯಾರಿಗೆ ಇಷ್ಟ ಇರುವುದಿಲ್ಲ ಹೇಳಿ, ಸಂಜೆಯಾದರೆ ಸಾಕು ಸ್ಟ್ರೀಟ್ ಫುಡ್ ತಿನ್ನಬೇಕು ಎನ್ನಿಸುತ್ತದೆ.…
ಹೀಲ್ಸ್ ಧರಿಸುವುದು ಎಷ್ಟು ಅಪಾಯಕಾರಿ ಗೊತ್ತೆ?; ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ | Health Tips
ಹೈಹೀಲ್ಸ್ ಬೂಟುಗಳನ್ನು ಧರಿಸುವುದು ಪರಿಪೂರ್ಣ ಭಂಗಿಯನ್ನು ನೀಡುತ್ತದೆ, ಎತ್ತರವಾಗಿ ಕಾಣುತ್ತದೆ ಮತ್ತು ಸ್ಟೈಲಿಶ್ ಆಗಿ ಕಾಣುತ್ತದೆ.…
ಶೀತದಲ್ಲಿಯೂ ಉತ್ತಮ ನಿದ್ರೆಗೆ ಈ ಟ್ರಿಕ್ಸ್ ಫಾಲೋ ಮಾಡಿ; ನಿಮಗಾಗಿ ಹೆಲ್ತಿ ಟಿಪ್ಸ್ | Health Tips
ಕೆಲವರಿಗೆ ಚಳಿಗಾಲದಲ್ಲಿ ಹೆಚ್ಚು ನಿದ್ದೆ ಬಂದರೆ ಇನ್ನು ಕೆಲವರು ಕಣ್ಣುಗಳಿಂದ ನಿದ್ದೆ ಕಳೆದುಕೊಳ್ಳುತ್ತಾರೆ. ನಿದ್ರೆಯ ಮಾದರಿಯಲ್ಲಿ…