ಬೆಳಗಾವಿ: ಸಾಧನೆ ಯಾರ ಸ್ವತ್ತು ಅಲ್ಲ. ಅದಕ್ಕೆ ಸಾಧಿಸುವ ಛಲ ಬೇಕಷ್ಟೇ ಎಂದು ಜಿಲ್ಲಾ ಸರ್ಕಾರಿ ನೌಕರರ ಸಹಕಾರಿ ಗೃಹ ನಿರ್ಮಾಣ ಸಂದ ಉಪಾಧ್ಯ ರವಿ ಕೋಟಾರಗಸ್ತಿ ಹೇಳಿದರು.
ವೈಭವ ನಗರದ ವೈಭವ ಹಾಲ್ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಅನೇಕ ತೊಡಕು ಮತ್ತು ಸವಾಲುಗಳ ಮಧ್ಯೆಯೂ ಶೈಣಿಕವಾಗಿ ಸಾಧನೆ ಮೆರೆದ ಸರ್ಕಾರಿ ನೌಕರರ ಮಕ್ಕಳು ಹಾಗೂ ಈ ಭಾಗದ ಬಡ ವಿದ್ಯಾರ್ಥಿಗಳನ್ನು ಒಂದೇ ಸೂರಿನಡಿ ಗೌರವಿಸುತ್ತಿರುವ ಈ ಸಂದ ಕಾರ್ಯ ಶ್ಲಾನೀಯ ಎಂದರು. ವಿವಿಧ ಸಂಟನೆಯವರು ತಮ್ಮ ಸಮುದಾಯಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸುತ್ತಾರೆ. ಆದರೆ, ಈ ಸಂ ಭಾಷಾತೀತವಾಗಿ ಮತ್ತು ಜಾತ್ಯತಿತವಾಗಿ ಸಾಧಕ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುತ್ತಿದೆ. ಸಾಧನೆಗೆ ಸಿರಿತನ, ಬಡತನ ಮುಖ್ಯವಲ್ಲ. ವಿದ್ಯಾರ್ಥಿಗಳು ತಮಗೆ ಲಭಿಸುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಸಾಧನೆಯ ಪಥದಲ್ಲಿ ಸಾಗಬೇಕು ಎಂದು ಕರೆ ನೀಡಿದರು.
ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಜಿ.ರಾಮಯ್ಯ ಮಾತನಾಡಿ, ವಿವಿಧ ಇಲಾಖೆಯವರು ತಮ್ಮ ಇಲಾಖೆ ನೌಕರರ ಸಾಧಕ ಮಕ್ಕಳನ್ನು ಗುರುತಿಸಿ ಗೌರವಿಸುವುದು ಸಾಮಾನ್ಯ. ಆದರೆ, ಈ ಸಂ ಸರ್ಕಾರಿ ನೌಕರರ ಜತೆಗೆ ಬಡ ಮಕ್ಕಳನ್ನು ಗುರುತಿಸಿ ಗೌರವಿಸುತ್ತಿರುವುದು ಪ್ರಶಂಸನೀಯ ಎಂದರು.
ಇದೇ ಸಂದರ್ಭದಲ್ಲಿ ಪಿಯುಸಿ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ ಸೇರಿದಂತೆ ವಿವಿಧ ಕೋರ್ಸ್ಗಳಲ್ಲಿ ಸಾಧನೆಗೈದ 50ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂದ ಅಧ್ಯ ದಯಾನಂದ ಕಿಣಿಗಿ, ಜಿ.ಎ.ಅಳಗುಂಡಗಿ, ಬಿ.ಎಸ್.ನಿಂಬಾಳ, ಆರ್.ಎಸ್.ಮೇತ್ರಿ, ಎಂ.ಎಚ್.ಮುಲ್ಲಾ, ಪಿ.ಪಿ.ಬಡಿಗೇರ, ಎಸ್.ಜಿ.ವೈದ್ಯ, ಎಂ.ಎಸ್.ಪಾಟೀಲ, ಎಸ್.ಜಿ. ನಾಗನೂರೆ, ಎಸ್.ಎಸ್.ಚರಂತಿಮಠ, ರಂಜನಾ ಪಾಟೀಲ, ಪದ್ಮಾವತಿ ಬಡಿಗೇರ ಇತರರಿದ್ದರು.