ಶಿಸ್ತು, ಶ್ರದ್ಧೆಯಿದ್ದರೆ ಸಾಧನೆ ಸುಲಭ

blank

ಲಕ್ಷ್ಮೇಶ್ವರ: ಉನ್ನತ ಗುರಿಯ ಸಾಧನೆಯತ್ತ ಸಾಗುವ ವಿದ್ಯಾರ್ಥಿಗಳು ಶಿಸ್ತು, ಶ್ರದ್ಧೆ, ಕಠಿಣ ಪರಿಶ್ರಮ, ಸತತಾಭ್ಯಾಸ ರೂಢಿಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಭಾನುವಾರ ಪಟ್ಟಣದ ಟಿ.ಬಿ. ಮಾನ್ವಿ ಸರ್ಕಾರಿ ಪದವಿಪೂರ್ವ ಕಾಲೇಜ್​ನಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ, 2025 ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಹಾಗೂ ಕ್ರೀಡೆ, ಸಾಂಸ್ಕೃತಿಕ ಹಾಗೂ ವಿವಿಧ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಜೀವನದಲ್ಲಿ ಶಿಸ್ತು ಅತಿ ಮುಖ್ಯ, ಉತ್ತಮ ಸಾಧನೆ ಮಾಡಬೇಕಾದರೆ ಶಿಕ್ಷಣ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಈ ಮಹತ್ವದ ವೇಳೆ ಕಳೆದುಕೊಂಡಲ್ಲಿ ಮತ್ತೆ ಸಿಗಲಾರದು ಎನ್ನುವ ಅರಿವಿರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಮಂಜುನಾಥ ಕೊಕ್ಕರಗುಂದಿ, ಸರ್ಕಾರಿ ಶಾಲಾ ಕಾಲೇಜುಗಳಲ್ಲಿಯೂ ಉತ್ತಮ ಶಿಕ್ಷಣ ದೊರೆಯುತ್ತಿದೆ. ಸರ್ಕಾರಿ ಕಾಲೇಜುಗಳಲ್ಲಿ ಎಲ್ಲ ಸೌಲಭ್ಯಗಳ ಜತೆ ಅರ್ಹ ಉಪನ್ಯಾಸಕರಿಂದ ಉತ್ತಮ ಬೋಧನೆ ದೊರೆಯುತ್ತಿದೆ. ಸಾಧನೆಗೆ ವಿದ್ಯಾರ್ಥಿಗಳ ಪರಿಶ್ರಮ ಸೇರಿದಲ್ಲಿ ಯಶಸ್ಸು ಸಾಧ್ಯ ಎಂದು ಹೇಳಿದರು.

 

ಡಾ.ಬಸವರಾಜ ಮರಳಿಹಳ್ಳಿ ಉಪನ್ಯಾಸ ನೀಡಿದರು, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸುನೀಲ ಮಹಾಂತಶೆಟ್ಟರ, ನವೀನ ಬೆಳ್ಳಟ್ಟಿ, ತೊಂಟೆಶ ಮಾನ್ವಿ ಬಸವರಾಜ ಚಕ್ರಸಾಲಿ, ಮೈನುದ್ದೀನ ಸೂರಣಗಿ, ಇಕ್ಬಾಲ್ ಸೂರಣಗಿ, ಉಪನ್ಯಾಸಕರಾದ ಹಾಲೇಶ ದೊಡ್ಡಮನಿ, ನಾಗರಾಜ ಸಾತಪುತೆ, ವಿನಾಯಕ ವೇತಾಳ, ಶಂಕರ ಇಟಿ, ಬಸವರಾಜ ಶೆಟ್ಟರ, ಎಫ್.ಎಸ್.ಹೂಗಾರ್, ಶಿವಾನಂದ ನಡುವಿನಮನಿ, ಮಂಜುಳಾ ಗೊರವರ, ಪೂಜಾ ಹಾಳಕೇರಿ, ಸಿಬ್ಬಂದಿ ಇದ್ದರು ಉಪನ್ಯಾಸಕ ಬಿ.ಎನ್. ದೊಡ್ಡಮನಿ ಸ್ವಾಗತಿಸಿದರು, ಕಲ್ಪನಾ ಹಡಪದ, ಸಾನಿಯಾ ನದಾಫ್ ನಿರೂಪಿಸಿದರು ಸಂಜನಾ ಹಂಜಗಿ ವಂದಿಸಿದರು.

 

Share This Article

ಬೇಸಿಗೆಯಲ್ಲಿ ದಿನಕ್ಕೆ ಎಷ್ಟು ಗ್ಲಾಸ್ ನೀರು ಕುಡಿಯಬೇಕು? Health Tips

Health Tips: ನೀವು ದಿನಕ್ಕೆ ಎಷ್ಟು ನೀರು ಕುಡಿಯಬೇಕು ಎಂಬುದಕ್ಕೆ ಯಾವುದೇ ನಿರ್ದಿಷ್ಟ ಉತ್ತರವಿಲ್ಲ. ಇದು…

ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್ ನೋಡುತ್ತೀರಾ?ಈ ಅಭ್ಯಾಸ ಬಿಟ್ಟುಬಿಡಿ.. Mobile phone

Mobile phone: ತಜ್ಞರು ಫೋನ್ ಬಳಸುವುದು ಅಪಾಯಕಾರಿ ಎಂದು ಹೇಳುತ್ತಾರೆ. ಇನ್ನೂ ಮುಖ್ಯವಾಗಿ, ಬೆಳಿಗ್ಗೆ ಬೇಗನೆ…

10 ನಿಮಿಷದಲ್ಲೇ ಮನೆಯಲ್ಲಿ ಮಾಡಿ ಹಸಿರು ಮೆಣಸಿನಕಾಯಿ ಉಪ್ಪಿನಕಾಯಿ | Recipe

ಭಾರತೀಯ ಆಹಾರಪದ್ಧತಿಯಲ್ಲಿ ಉಪ್ಪಿನಕಾಯಿ ಮತ್ತು ಪಾಪಡ್‌ಗಳು ಅತ್ಯಂತ ಸಪ್ಪೆಯಾದ ಆಹಾರವನ್ನು ಸಹ ರುಚಿಕರವಾಗಿಸಲು ಕೆಲಸ ಮಾಡುತ್ತವೆ.…