ಯಲ್ಲಾಪುರ: ಆಕಸ್ಮಿಕ ಬೆಂಕಿ ತಗುಲಿ ಕೊಟ್ಟಿಗೆ ಸುಟ್ಟು ಹೋದ ಘಟನೆ ತಾಲೂಕಿನ ಮಂಚಿಕೇರಿಯಲ್ಲಿ ಶುಕ್ರವಾರ ನಡೆದಿದೆ.
ನಾಗೇಂದ್ರ ಶಂಭು ಹೆಗಡೆ ಮಾಳಕೊಪ್ಪ ಅವರಿಗೆ ಸೇರಿದ ಕೊಟ್ಟಿಗೆಗೆ ಬೆಂಕಿ ತಗುಲಿದ್ದು, ಹೆಗಡೆಯವರು ಜಾನುವಾರುಗಳನ್ನು ಬಿಟ್ಟು ಹಾಕಿ ಹೊರ ಹಾಕಿದ್ದರಿಂದ ಅವುಗಳ ಜೀವ ಉಳಿದಿದೆ.
ಕೊಟ್ಟಿಗೆಯಲ್ಲಿ ದಾಸ್ತಾನು ಮಾಡಿದ್ದ ಗೋವಿನ ಮೇವು ಹಾಗೂ ವಿವಿಧ ಉಪಕರಣಗಳನ್ನು ರಕ್ಷಿಸುವ ಪ್ರಯತ್ನ ಮಾಡಿದರು. ಅಕ್ಕಪಕ್ಕದವರು ಹಾಗೂ ಗ್ರಾಮಸ್ಥರು ಆಗಮಿಸಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದರು. ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ಕೊಟ್ಟಿಗೆಯಲ್ಲಿದ್ದ 1 ಲಕ್ಷ ರೂ. ಮೌಲ್ಯದ ಮೇವು, 3 ಲಕ್ಷ ರೂ. ಮೌಲ್ಯದ ಕೃಷಿ ಉಪಕರಣಗಳು ಸುಟ್ಟು ಕರಕಲಾಗಿವೆ. ಪೊಲೀಸರು, ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.