ಕಿರುಸೇತುವೆ ಕಂದಕವಿದೆ ಎಚ್ಚರ

ಬಣಕಲ್: ಮೂಡಿಗೆರೆ ಹ್ಯಾಂಡ್​ಪೋಸ್ಟ್​ನಿಂದ ಕೊಟ್ಟಿಗೆಹಾರದವರೆಗೆ ರಾಷ್ಟ್ರೀಯ ಹೆದ್ದಾರಿ 234 ರಲ್ಲಿ ರಸ್ತೆ ಅಗಲೀಕರಣದ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿ ನಡೆಯುವ ಸಂದರ್ಭದಲ್ಲಿ ಪ್ರಯಾಣಿಕರಿಗೆ ಅಪಾಯವಾಗದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದರಿಂದ ವಾಹನಗಳು ಅಪಘಾತಕ್ಕೀಡಾಗುವ ಸಂಭವವಿದೆ.

ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರು ರಸ್ತೆ ಅಗಲೀಕರಣದ ಮುನ್ನ ಹೊಸ ಸೇತುವೆಗಳ ನಿರ್ಮಾಣ ಮಾಡುತ್ತಿದ್ದು, ಸಂಚಾರಕ್ಕೆ ಕಿರಿದಾದ ಪರ್ಯಾಯ ಅರ್ಧ ರಸ್ತೆ ಬಿಡಲಾಗಿದೆ. ರಸ್ತೆ ಒಂದು ಬದಿ ಸೇತುವೆ ಅರ್ಧ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಉಳಿದ ಅರ್ಧ ಸೇತುವೆ ಪೂರ್ಣಗೊಳಿಸುವ ಉದ್ದೇಶದಿಂದ ಮೂಡಿಗೆರೆ ಹ್ಯಾಂಡ್​ಪೋೕಸ್ಟ್​ನಿಂದ ಕೊಟ್ಟಿಗೆಹಾರದವರೆಗೆ ಕಿರುಸೇತುವೆಗಳನ್ನು ನಿರ್ವಿುಸುತ್ತ ಬರಲಾಗುತ್ತಿದೆ. ಇದರ ಮೊದಲ ಭಾಗದಲ್ಲಿ ಸೇತುವೆ ನಿರ್ವಣವಾಗುವ ಸ್ಥಳದಲ್ಲಿ ಆಳೆತ್ತರದ ಗುಂಡಿಗಳನ್ನು ತೆಗೆಯಲಾಗಿದೆ. ರಸ್ತೆ ಮತ್ತು ಗುಂಡಿಯ ನಡುವೆ ಕೇವಲ ಟೇಪ್ ಕಟ್ಟಲಾಗಿದ್ದು ರಾತ್ರಿ ಸಮಯದಲ್ಲಿ ಕಂದಕದ ಅರಿವಿಲ್ಲದೆ ಬರುವ ಪ್ರಯಾಣಿಕರು ಸೇತುವೆಯ ಗುಂಡಿಗೆ ಬೀಳುವ ಅಪಾಯವಿದೆ. ರಸ್ತೆಯುದ್ದಕ್ಕೂ ಹತ್ತಾರು ಕಿರುಸೇತುವೆಗಳ ಕಾಮಗಾರಿ ನಡೆಯುತ್ತಿದ್ದರೂ ಎಲ್ಲಿಯೂ ಸೂಚನಾಫಲಕ ಇಲ್ಲ. ಸುರಕ್ಷತಾ ಕ್ರಮದ ವೀಕ್ಷಣೆ ಮಾಡಬೇಕಿದ್ದ ಹೆದ್ದಾರಿ ಪ್ರಾಧಿಕಾರ ಕಣ್ಮುಚ್ಚಿ ಕುಳಿತಿದೆ.

ಕೊಟ್ಟಿಗೆಹಾರದ ಸಮೀಪ ಸೇತುವೆಗೆ ಕಂದಕ ತೆಗೆದಿದ್ದು ಕುಡಿಯುವ ನೀರಿನ ಪೈಪುಗಳು ಒಡೆದು ನೀರು ರಸ್ತೆಯಲ್ಲಿ ಹರಿಯುತ್ತಿದೆ. ನೀರು ಸೇತುವೆ ಮೇಲಿನ ಗುಂಡಿಯಲ್ಲಿ ಸಂಗ್ರಹವಾಗಿರುವುದರಿಂದ ಕೆಸರುಮಯ ನೀರನ್ನು ದಾಟಿಕೊಂಡು ಬರುವಂತಾಗಿದೆ. ಕೆಲವೆಡೆ ಸೇತುವೆಗಾಗಿ ಕಂದಕ ನಿರ್ವಿುಸುವಾಗ ತೆಗೆದ ಮಣ್ಣನ್ನು ರಸ್ತೆ ಬದಿಗೆ ಹಾಕಿರುವುದರಿಂದ ರಸ್ತೆ ಬದಿಯ ಮನೆಗಳಿಗೆ ಮತ್ತು ಈ ಮಾರ್ಗವಾಗಿ ಸಂಚರಿಸುವ ವಾಹನ ಸವಾರರಿಗೆ ದೂಳು ಮೆತ್ತಿಕೊಳ್ಳುತ್ತಿದೆ.

ರಸ್ತೆ ಮತ್ತು ಕಂದಕದ ನಡುವೆ ಕಬ್ಬಿಣದ ತಾತ್ಕಾಲಿಕ ತಡೆಗೋಡೆ ನಿರ್ವಿುಸಬೇಕಿದೆ. ಅಲ್ಲಲ್ಲಿ ಕಾಮಗಾರಿ ನಡೆಯುತ್ತಿರುವ ಸೂಚನಾ ಫಲಕ ಅಳವಡಿಸಬೇಕಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಮಾಡುವುದು ಅಗತ್ಯವಾದರೂ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ತೊಂದರೆಯಾಗದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸುವ ಅಗತ್ಯವಿದೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಗುತ್ತಿಗೆದಾರರು ಗಮನ ಹರಿಸಬೇಕಿದೆ.